Rehabilitation Campaing One child labor protected by officers in narayanapur

Rehabilitation Campaign: ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ..ಓರ್ವ ಬಾಲ ಕಾರ್ಮಿಕನ ರಕ್ಷಣೆ..

Rehabilitation Campaign: ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ..ಓರ್ವ ಬಾಲ ಕಾರ್ಮಿಕನ ರಕ್ಷಣೆ..

ನಾರಾಯಣಾಪುರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ (PAN-INDIA Rescue and Rehabilitation Campaign) ಬಾಲ/ಕಿಶೋರ ಕಾರ್ಮಿಕರ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ನಡೆಸಲಾಯಿತು.

Join Our telegram: https://t.me/dcgkannada

ಈ ಕುರಿತು ನಗರದಲ್ಲಿ ಆಯೋಜಿಸಿದ್ದ ಅಭಿಯಾನದಲ್ಲಿ ಮಾತನಾಡಿದ ಉಪ ತಹಶೀಲ್ದಾರ್ ಕಲ್ಲಪ್ಪ ಅವರು, ಸರಕಾರದ ಪ್ರತಿಯೊಂದು ಇಲಾಖೆಯು ಕೈಜೊಡಿಸಿದಾಗ ಮಾತ್ರ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಎಂಬ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ತಿಳಿಸಿದರು.

ನಂತರ ಮಾತನಾಡಿದ ಕಾರ್ಮಿಕ ನಿರೀಕ್ಷಕ ಶಿವರಾಜ್ ಜಮಾದಾರ್, ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರತಿ ತಿಂಗಳು 15 ತಪಾಸಣೆ ಮತ್ತು ಹಠಾತ್ ದಾಳಿ/ತಪಾಸಣೆ ಆಯೋಜಿಸಿವುದು. ಮತ್ತು ಪ್ರತಿ ತಿಂಗಳು 2 ಕಾನೂನು ಅರಿವು-ನೆರವು ಮತ್ತು ಜನ-ಜಾಗೃತಿ ಕಾರ್ಯಕ್ರಮ ಆಯೋಜಿಸುವುದು. ಶಾಲೆ ಬಿಟ್ಟು ಕೃಷಿ ಮತ್ತು ಇತರೆ ಕೆಲಸಗಳಿಗೆ ಮಕ್ಕಳು ಹೋಗದಂತೆ ಶಾಲಾ ಶಿಕ್ಷಕರಿಂದ ಪಾಲಕ ಪೋಷಕರಿಗೆ ಜಾಗೃತಿ ಮೂಡಿಸಬೇಕು. ಬಾಲಕಾರ್ಮಿಕ ಪದ್ಧತಿ ತಡೆಗಟ್ಟಲು ಇಲಾಖೆಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Sexual Abuse: ಇಬ್ಬರು ಹುಡಿಗೀಯರ ಜೊತೆಗೆ ಪತಿ ಸರಸ ಸಲ್ಲಾಪ.. ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ! (ವಿಡಿಯೋ ನೋಡಿ)

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ, ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ಕಾರ್ಮಿಕ ಇಲಾಖೆಯಿಂದ ನಿಯಂತ್ರಣವಾಗಿ ಜನ-ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅಂತಹ ಅಂಗಡಿ ಮಾಲೀಕರಿಗೆ ರೂ. 20,000 ರೂಗಳಿಂದ 50,000 ರೂ. ಗಳವರೆಗೆ ದಂಡ ಮತ್ತು 6 ತಿಂಗಳುಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಹಠಾತ್ ದಾಳಿ/ತಪಾಸಣೆ ನಡೆಸಿ ಒಂದು ಮಗುವನ್ನು ಬಾಲ ಕಾರ್ಮಿಕ‌ ಪದ್ಧತಿಯಿಂದ‌ ರಕ್ಷಿಸಲಾಯಿತು.

Latest News

ಏ.4 ರಂದು ಆಕ್ಸಫರ್ಡ್ ಪಾಟೀಲ್ಸ್ ಜೀನಿಯಸ್ ಸ್ಕಾಲರ್‌ಶಿಪ್ ಪರೀಕ್ಷೆ

ಏ.4 ರಂದು ಆಕ್ಸಫರ್ಡ್ ಪಾಟೀಲ್ಸ್ ಜೀನಿಯಸ್ ಸ್ಕಾಲರ್‌ಶಿಪ್ ಪರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಿoದ ಏ.4ರಂದು ಆಕ್ಸಫರ್ಡ್

ಏ.10 ರಿಂದ ಐದು ದಿನಗಳ ಕಾಲ ವಿಜಯಪುರದಲ್ಲಿ ಪುಸ್ತಕ ಮೇಳ

ಏ.10 ರಿಂದ ಐದು ದಿನಗಳ ಕಾಲ ವಿಜಯಪುರದಲ್ಲಿ ಪುಸ್ತಕ ಮೇಳ

ಮುದ್ದೇಬಿಹಾಳ : ವಿಜಯಪುರ ಜಿಲ್ಲೆಯಲ್ಲಿ ಏ.10 ರಿಂದ 14ರವರೆಗೆ ಮೇ ಸಾಹಿತ್ಯ ಮೇಳ ಬಳಗದ

ಉಪನ್ಯಾಸಕಿ ಗುರುದೇವಿ ಹಳ್ಳೂರರಿಗೆ ಪಿ.ಎಚ್.ಡಿ ಪ್ರದಾನ

ಉಪನ್ಯಾಸಕಿ ಗುರುದೇವಿ ಹಳ್ಳೂರರಿಗೆ ಪಿ.ಎಚ್.ಡಿ ಪ್ರದಾನ

ಮುದ್ದೇಬಿಹಾಳ : ಮುದ್ದೇಬಿಹಾಳ ಮೂಲದ ಉಪನ್ಯಾಸಕಿ ಗುರುದೇವಿ ಹಳ್ಳೂರ ಅವರು ಶಿಕ್ಷಣಶಾಸ್ತçದಲ್ಲಿ ವಿಜಯಪುರದ ಕರ್ನಾಟಕ

ಯಲಗೂರ ಗೋಶಾಲೆಗೆ ಐದು ಟ್ರಾಕ್ಟರ್ ಮೇವು ಕೊಡುಗೆ

ಯಲಗೂರ ಗೋಶಾಲೆಗೆ ಐದು ಟ್ರಾಕ್ಟರ್ ಮೇವು ಕೊಡುಗೆ

ಮುದ್ದೇಬಿಹಾಳ : ಈಚೆಗೆ ಮುದ್ದೇಬಿಹಾಳದಲ್ಲಿ ಜರುಗಿದ್ದ ಹಿಂದೂ ಮಹಾಸಮ್ಮೇಳನದಲ್ಲಿ ಜಮಾಖರ್ಚು ಆಗಿ ಉಳಿತಾಯದ ಹಣದಲ್ಲಿ

ಮಕ್ಕಳನ್ನು ಕೇವಲ ಅಂಕದ ಚೀಲ ಮಾಡದಿರಿ: ಡಾ. ಎಂ.ಎಂ.ಬೆಳಗಲ್ಲ

ಮಕ್ಕಳನ್ನು ಕೇವಲ ಅಂಕದ ಚೀಲ ಮಾಡದಿರಿ: ಡಾ. ಎಂ.ಎಂ.ಬೆಳಗಲ್ಲ

ಮುದ್ದೇಬಿಹಾಳ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದನ್ನು ಕೈಬಿಡಬೇಕು. ಮಕ್ಕಳನ್ನು ಕೇವಲ ಅಂಕ ತುಂಬುವ ಚೀಲವನ್ನಾಗಿ ಮಾಡುವ ಮನೋಭಾವದಿಂದ ಹೊರಬಂದು, ಅವರಲ್ಲಿ ಜ್ಞಾನ ಮತ್ತು ಸಾಧನೆಯ ಹಸಿವನ್ನು ಬೆಳೆಸಬೇಕು ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಹೇಳಿದರು. ಪಟ್ಟಣದ ತಂಗಡಗಿ ರಸ್ತೆಯ ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ

ಐದು ಲಕ್ಷ ರೂ.ಸ್ಕಾಲರಶಿಪ್ ಗೆಲ್ಲುವ ಅವಕಾಶ   ಮುದ್ದೇಬಿಹಾಳ : ಮಾ.29 ರಂದು ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ

ಐದು ಲಕ್ಷ ರೂ.ಸ್ಕಾಲರಶಿಪ್ ಗೆಲ್ಲುವ ಅವಕಾಶ ಮುದ್ದೇಬಿಹಾಳ : ಮಾ.29 ರಂದು ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ

ಮುದ್ದೇಬಿಹಾಳ : ಪಟ್ಟಣದ ಎಸ್.ಎಸ್.ವಿ.ವಿ ಸಂಘದ ಅಡಿಯಲ್ಲಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಶನಲ್ ಇಂಗ್ಲಿಷ್ ಮಿಡಿಯಂ ಸ್ಕೂಲ್ ಹಾಗೂ ಚಾಲೆಂಜ್ ನವೋದಯ ಕೋಚಿಂಗ್ ಕ್ಲಾಸಸ್‌ನ ಸಹಯೋಗದಲ್ಲಿ ಮಾ.29 ರಂದು ಬೆಳಗ್ಗೆ 11ಕ್ಕೆ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತಾಧಿಕಾರಿ ವೀರೇಶ ಹವಾಲ್ದಾರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುದ್ದೇಬಿಹಾಳ ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಎಸ್.ಎಸ್.ಶಿವಾಚಾರ್ಯ ಪಿಯು ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ.ಪ್ರಥಮ ಬಹುಮಾನ 60 ಸಾವಿರ ರೂ.(ಶಿಷ್ಯವೇತನ,ಐದು ಸಾವಿರ