ಫೆ.14 ರಂದು ನೂತನ ಸ್ಕೂಲ್‌ ಕಟ್ಟಡದ ಉದ್ಘಾಟನೆ: ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಫೆ.14 ರಂದು ನೂತನ ಸ್ಕೂಲ್‌ ಕಟ್ಟಡದ ಉದ್ಘಾಟನೆ: ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಮುದ್ದೇಬಿಹಾಳ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಫೆ.14 ರಂದು ಮದ್ಯಾಹ್ನ 3.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ತಿಳಿಸಿದರು.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಳಂದ,ಜಾಲವಾದ,ನAದವಾಡಗಿ ಹಿರೇಮಠದ ಮಹಾಂತಲಿAಗ ಶಿವಾಚಾರ್ಯರು, ನಂದವಾಡಗಿ ಹಿರೇಮಠದ ಚನ್ನಬಸಯ ಶಿವಾಚಾರ್ಯರು ವಹಿಸುವರು.ಬಿದರಕುಂದಿ-ಕಪ್ಪತಗುಡ್ಡ ಶಿವಯೋಗಾಶ್ರಮದ ಶಿವಕುಮಾರ ಸ್ವಾಮೀಜಿ, ಕುಂಟೋಜಿ ಭಾವೈಕ್ಯತೆ ಹಿರೇಮಠದ ಚನ್ನವೀರ ಶಿವಾಚಾರ್ಯರು , ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು, ಬಳವಾಟ ಪರ್ವತಾಶ್ರಮದ ಸೋಮಶೇಖರ ದೇವರು,ಕೊಡಗಾನೂರ ಕೆಳಗಿನಮಠದ ಕುಮಾರದೇವರು ವಹಿಸಲಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಾಂತಗೌಡ ಬಿರಾದಾರ ವಹಿಸುವರು.ಶಾಸಕ ಸಿ.ಎಸ್.ನಾಡಗೌಡ ಕಾರ್ಯಕ್ರಮ ಉದ್ಘಾಟಿಸುವರು.ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ,ಆದಾಯ ತೆರಿಗೆ ಇಲಾಖೆ ಆಯುಕ್ತ ಶಿವಾನಂದ ಕಲಕೇರಿ, ಸಿಂದಗಿ ಶಾಸಕ ಅಶೋಕ ಮನಗೂಳಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಜ್ಯೋತಿ ಬೆಳಗಿಸುವರು ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಬಾಲಾಜಿ ಶುಗರ್ಸ್ನ ಅಧ್ಯಕ್ಷ ಹಣಮಂತಗೌಡ ಪಾಟೀಲ, ಗಣ್ಯ ವ್ಯಾಪಾರಸ್ಥರಾದ ಬಿ.ಸಿ.ಮೋಟಗಿ, ಬ.ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ನಿವೃತ್ತ ಡಿವೈಎಸ್‌ಪಿ ಅರುಣಕುಮಾರ ಕೋಳೂರ, ಎಸ್.ಎಸ್.ಹುಲ್ಲೂರ,ವಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಿ.ಎಸ್.ಪಾಟೀಲ ಯಾಳಗಿ,ನಿವೃತ್ತ ಕರ್ನಲ್ ಶಿವಾನಂದ ಬಿರಾದಾರ,ಡಿಡಿಪಿಐ ಬಿ.ಜಿ.ಹಿರೇಮಠ,ಬಿಇಒ ಬಿ.ಎಸ್.ಸಾವಳಗಿ ಆಗಮಿಸುವರು ಎಂದು ತಿಳಿಸಿದರು.

ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಮಾತನಾಡಿ, ಕಾರ್ಯಕ್ರಮದ ಅತಿಥಿಗಳಾಗಿ ಗಣ್ಯ ವ್ಯಾಪಾರಸ್ಥರಾದ ಬಾಬುಲಾಲ ಓಸ್ವಾಲ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಅರವಿಂದ ಹೂಗಾರ, ವಸಂತ ಇಲ್ಲೂರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ,ಉದ್ಯಮಿ ಶರಣು ಸಜ್ಜನ, ಪ್ರಥಮ ದರ್ಜೆ ಗುತ್ತಿಗೆದಾರ ರಾಯನಗೌಡ ತಾತರೆಡ್ಡಿ, ನಾಗಾರ್ಜುನ ಪಿಯು ಕಾಲೇಜಿನ ಪ್ರಾಚಾರ್ಯ ನಂಜಪ್ಪ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಅಸ್ಕಿ ಫೌಂಡೇಶನ ಅಧ್ಯಕ್ಷ ಸಿ.ಬಿ.ಅಸ್ಕಿ, ಉದ್ಯಮಿ ಶಾಂತಗೌಡ ಪಾಟೀಲ ನಡಹಳ್ಳಿ, ಸತೀಶ ಓಸ್ವಾಲ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಸಿಪಿಐ ಮೊಹ್ಮದಫಸಿವುದ್ದೀನ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ, ಪಿಎಸೈ ಸಂಜಯ ತಿಪರೆಡ್ಡಿ, ಜಿಪಂ ಮಾಜಿ ಸದಸ್ಯರಾದ ಹೇಮರಡ್ಡಿ ಮೇಟಿ, ಚಿದಾನಂದ ಸೀತಿಮನಿ, ತಾಳಿಕೋಟಿ ಪಿಎಸೈ ಜ್ಯೋತಿ ಖೋತ ಆಗಮಿಸಲಿದ್ದು ವಿವಿಧ ಕ್ಷೇತ್ರದ ಗಣ್ಯರನ್ನು ಇದೇ ವೇಳೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಸಲ್ಮಾನ್‌ಖಾನ್ ಎಚ್., ರಿಷಿಕಾ ನಾಯ್ಕ , ಮಾರ್ಗದರ್ಶಕರಾದ ಶಿವನಗೌಡ ಬಿರಾದಾರ,ಕಾರ್ಯದರ್ಶಿಗಳಾದ ಎಸ್.ಎಸ್.ಬಿರಾದಾರ ಇದ್ದರು.

Latest News

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ:                ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಮುದ್ದೇಬಿಹಾಳ : ವಾಯುವಿಹಾರಕ್ಕೆಂದು ಹೋಗಿದ್ದ ಮೂವರು ಯುವಕರ ತಂಡವೊoದರ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡ ನರಿ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು;           ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು; ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಮುದ್ದೇಬಿಹಾಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ ಬರುವುದಿಲ್ಲ.ಪಂಚ ಗ್ಯಾರಂಟಿ ಹಿಡಿದು ಗಂಗಾಕಲ್ಯಾಣ,ಮಕ್ಕಳ ಸ್ಕಾಲರಶಿಪ್ ಸೇರಿದಂತೆ ಸರ್ಕಾರಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಲ್‌ಎ-2 ಗಳಿಗಾಗಿ ಏರ್ಪಡಿಸಿದ್ದ ಎಸ್‌ಆಯ್‌ಆರ್ ಪ್ರಕ್ರಿಯೆ ಕುರಿತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಮತದಾನ ನಿಮ್ಮ ಜೀವನದ ಹಕ್ಕು.ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಎನ್ರೋಲಮೆಂಟ್ ಆಗುವುದು ಕಡ್ಡಾಯವಾಗಿದೆ.ಈ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು:                         ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು ಭಕ್ತರು ಹಾಗೂ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಘಟನೆ ಹಿನ್ನೆಲೆ : ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ಆರ್ಚಕರು ಕರೆ ಮಾಡಿ ದೇವಸ್ಥಾನದ ವಿಗ್ರಹ ಕಾಣಿಸುತ್ತಿಲ್ಲ, ಕಳ್ಳತನವಾಗಿದೆ ಎಂದು ಕರೆ ಮಾಡಿ ತಿಳಿಸಿದ ಕೂಡಲೇ ಆಡಳಿತ ಮಂಡಳಿಯ ಸದಸ್ಯರೆಲ್ಲ ಸೇರಿ ಪೊಲೀಸರಿಗೆ ಮಾಹಿತಿ ನೀಡಿದೆವು.ದೇವಸ್ಥಾನದ ಸಿಸಿ