Astrology Image of astrology

Astrology: ಇವರಿಗೆ ಹೊಸ ಯೋಜನೆ ಕಾರ್ಯಗತಗೊಳಿಸಲು ಉತ್ತಮ ದಿನ.. ದಿನ ಭವಿಷ್ಯ: ಶನಿವಾರ, ಆಗಸ್ಟ್ 17, 2024, ದೈನಂದಿನ ರಾಶಿ ಭವಿಷ್ಯ

Astrology: ಇವರಿಗೆ ಹೊಸ ಯೋಜನೆ ಕಾರ್ಯಗತಗೊಳಿಸಲು ಉತ್ತಮ ದಿನ.. ದಿನ ಭವಿಷ್ಯ: ಶನಿವಾರ, ಆಗಸ್ಟ್ 17, 2024, ದೈನಂದಿನ ರಾಶಿ ಭವಿಷ್ಯ

Ad
Ad

Ad
Ad

ಮೇಷ ರಾಶಿ: ಇಂದು ಹೊಸ ಯೋಜನೆಗಳನ್ನು ಕಾರ್ಯಗತ ಗೊಳಿಸಲು ಉತ್ತಮ ದಿನ. ಮಾನಸಿಕ ವಾಗಿ ಸದೃಢವಾಗಿರಲು ಇಂದು ಯೋಗ ಮತ್ತು ಧ್ಯಾನ ಮಾಡಿ.ಕೆಲಸದಲ್ಲಿ ಇಂದು ಉತ್ತಮ ದಿನ. ಆದರೆ ಒಂದೇ ಕೆಲಸಕ್ಕೆ ಅಂಟಿಕೊಳ್ಳುವುದು ಬೇಡ. ಲಾಭ ದಾಯಕ ಕೆಲಸಗಳತ್ತ ಯೋಚಿಸುವುದು ಒಳಿತು. (ಭಕ್ತಿಯಿಂದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.) Astrology

ವೃಷಭ ರಾಶಿ: ಹಣಕಾಸಿನ ವಿಚಾರದಲ್ಲಿ ಇಂದು ಉತ್ತಮವಾಗಿರುತ್ತದೆ. ಹೊಸ ವಸ್ತುಗಳನ್ನು ಖರೀದಿ ಮಾಡಬಹುದು. ಸಹೋದ್ಯೋಗಿಗಳನ್ನು ತಾಳ್ಮೆಯಿಂದ ವರ್ತಿಸಿ. ಮಾನಸಿಕ ಶಾಂತಿಗಾಗಿ ನಿಮ್ಮ ಉದ್ವೇಗವನ್ನು ಕಡಿಮೆ ಮಾಡಿ.(ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ: ನಿಮ್ಮ ಸಕಾರಾತ್ಮಕ ದೃಷ್ಟಿಕೋನ ನಿಮ್ಮ ಸುತ್ತಲಿರುವವರನ್ನು ಮೆಚ್ಚಿಸುತ್ತದೆ. ಇಲ್ಲಿಯವರೆಗೆ ಹೆಚ್ಚು ಯೋಚಿಸದೆ ಹಣವನ್ನು ಖರ್ಚು ಮಾಡುತ್ತಿದ್ದವರು ಜೀವನದಲ್ಲಿ ಅದರ ಮಹತ್ವವನ್ನು ಅರ್ಥಮಾಡಿ ಕೊಳ್ಳ ಬಹುದು. ಏಕೆಂದರೆ ಹಣದ ತುರ್ತು ಅಗತ್ಯತೆ ಉದ್ಭವಿಸಬಹುದು.(ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ: ಕೆಲಸದಲ್ಲಿ ಸಂಭವಿಸುವ ಬದಲಾವಣೆಗಳಿಂದ ನೀವು ಪ್ರಯೋಜನ ಪಡೆಯುತ್ತೀರಿ. ನಿಮ್ಮ ದಾರಿಯಲ್ಲಿ ನಿಲ್ಲುವ ಪ್ರತಿಯೊಬ್ಬರು ನಿಮ್ಮ ತಾಳ್ಮೆಯ ವರ್ತನೆಯನ್ನು ಮೆಚ್ಚುತ್ತಾರೆ. ಇದು ಬರಹಗಾರರು, ಶಿಕ್ಷಕರು ಮತ್ತು ವಿಮಾ ಕ್ಷೇತ್ರದ ಜನರಿಗೆ ಅಸಾಧಾರಣ ಪ್ರಯೋಜನಕಾರಿ,ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ.(ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)

ಸಿಂಹ ರಾಶಿ: ಇಂದು ವೃತ್ತಿ ಕ್ಷೇತ್ರದಲ್ಲಿ ಕೆಲಸದ ಹೊರೆ ಹೆಚ್ಚಾಗಲಿದ್ದು ಅದಾಗ್ಯೂ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ನಿಮ್ಮ ಎಲ್ಲಾ ಕಾರ್ಯಗಳನ್ನು ನೀವು ಪೂರ್ಣಗೊಳಿಸಬಹುದು. ನೀವು ಬಯಸಿದಂತೆ ಹೆಚ್ಚಿನ ವಿಷಯಗಳು ನಡೆಯುವಾಗ ಈ ದಿನ ನಿಮಗೆ ಉತ್ತಮವಾಗಿರುತ್ತದೆ. (ಭಕ್ತಿಯಿಂದ ಶ್ರೀ ಕಾಲಭೈರವೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.) Astrology

ಕನ್ಯಾ ರಾಶಿ: ಇಂದು ನಿಮಗೆ ಒಳ್ಳೆಯ ದಿನವಾಗಲಿದ್ದು, ಯಾವುದೇ ಹೊಸ ಆಲೋಚನೆಯು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಸ್ಥಿರ ಆಸ್ತಿಗಳ ಖರೀದಿ ಮತ್ತು ಮಾರಾಟ ಇರಬಹುದು.(ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ: ಸಾಮಾನ್ಯವಾಗಿ ನೀವು ಯಾವುದರ ಬಗ್ಗೆಯೂ ಕೆಟ್ಟ ಭಾವನೆಯನ್ನು ಹೊಂದಿರುವುದಿಲ್ಲ. ವ್ಯಾಪಾರದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಬಂಡವಾಳದ ಸರಿಯಾದ ಹೂಡಿಕೆಯ ಬಗ್ಗೆ ಚಿಂತಿಸಲಾಗುವುದು. ಕಲಾವಿದರಿಗೆ ದಿನವು ವಿಶೇಷವಾಗಿ ಒಳ್ಳೆಯದು.
(ಭಕ್ತಿಯಿಂದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ: ಸ್ಥಗಿತಗೊಂಡ ಕಾಮಗಾರಿಗಳಲ್ಲಿ ಪ್ರಗತಿ ಕಂಡುಬರಲಿದೆ. ಇಂದು ಪ್ರಮುಖ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚಿಸಬಹುದು, ವ್ಯಾಪಾರ ವ್ಯವಹಾರ ಗಳಲ್ಲಿ ಬಹಳ ಎಚ್ಚರಿಕೆ ಅಗತ್ಯ. ನೀವು ವಿಮೆ ಅಥವಾ ಹೂಡಿಕೆಗೆ ಸಂಬಂಧಿಸಿದ ಯಾವುದೇ ಯೋಜನೆಯನ್ನು ಮಾಡುತ್ತಿದ್ದರೆ,ಈ ದಿನವು ನಿಮಗೆ ಮಂಗಳಕರವಾಗಿರುತ್ತದೆ.(ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಧನಸ್ಸು ರಾಶಿ: ಬರಹಗಾರರಿಗೆ ಇಂದು ಬಹಳ ಒಳ್ಳೆಯ ದಿನ. ಕೆಲಸಕ್ಕೆ ಸಂಬಂಧಿಸಿದ ವಿಷಯ ಗಳಲ್ಲಿ ಕ್ರಮೇಣ ಪ್ರಗತಿ ಕಂಡುಬರುವುದು. ಮ್ಯಾನಿಪ್ಯುಲೇ ಷನ್ ಮಾಡುವ ಮೂಲಕ ಕೆಲಸ ಮಾಡುವಿರಿ. ಯಾವುದೇ ದೊಡ್ಡ ವ್ಯಾಪಾರ ಸಂಬಂಧಿತ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಕಾಲ.(ಭಕ್ತಿಯಿಂದ ಶ್ರೀ ಉಮಾ ಮಹೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ: ವ್ಯಾಪಾರದಲ್ಲಿನ ಲಾಭವು ಇಂದು ಅನೇಕ ವ್ಯಾಪಾರಿಗಳು ಮತ್ತು ಉದ್ಯಮಿಗಳ ಮುಖದಲ್ಲಿ ಸಂತೋಷ ವನ್ನು ತರುತ್ತದೆ.ಪ್ರಮುಖ ಜನರೊಂದಿಗೆ ಸಂವಹನ ನಡೆಸುವಾಗ ಜಾಗರೂಕ ರಾಗಿರಿ. ನೀವು ಹಿರಿಯರು ಅಥವಾ ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳಬಹುದು.(ಭಕ್ತಿಯಿಂದ ಶ್ರೀ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ: ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರುವ ವಿಶೇಷ ವ್ಯಕ್ತಿಯನ್ನು ಸ್ನೇಹಿತರು ನಿಮಗೆ ಪರಿಚಯಿಸುತ್ತಾರೆ. ನೀವು ಹಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ನ್ಯಾಯಾಲಯವು ಇಂದು ನಿಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.(ಭಕ್ತಿಯಿಂದ ಶ್ರೀ ಮೃತ್ಯುಂಜಯ ರುದ್ರ ದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ: ನಿಮ್ಮ ಆರ್ಥಿಕ ಸ್ಥಿತಿ ಇಂದು ಅನುಕೂಲಕರ ವಾಗಿರುವುದಿಲ್ಲ ಎಂದು ತೋರುತ್ತಿದೆ.ನೀವು ಹಣವನ್ನು ಉಳಿಸಲು ಕಷ್ಟಪಡುತ್ತೀರಿ. ಸಂವಹನಗಳು ಮತ್ತು ಚರ್ಚೆಗಳು ಸರಿಯಾಗಿ ನಡೆಯದಿದ್ದರೆ ಶಾಂತತೆಯನ್ನು ಕಳೆದುಕೊಳ್ಳ ಬಹುದು. (ಭಕ್ತಿಯಿಂದ ಶ್ರೀ ಅರ್ಧ ನಾರೀಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗು ವುದು.)

ತಿಥಿ : ದ್ವಾದಶಿ/ತ್ರಯೋದಶಿ
ನಕ್ಷತ್ರ : ಪೂರ್ವಾಷಾಡ ನಕ್ಷತ್ರ.

ಈ ದಿನದ ವಿಶೇಷ: 2 ನೇ ಶ್ರಾವಣ ಶನಿವಾರ.

ರಾಹುಕಾಲ:09:00AM ರಿಂದ 10:30AM
ಗುಳಿಕಕಾಲ:06:00AM ರಿಂದ 07:30AM
ಯಮಗಂಡಕಾಲ:01:30PM ರಿಂದ 03:00PM

Latest News

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ಕುಳಗೇರಿ ಕ್ರಾಸ್: ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಇಂಥ

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಬಾದಾಮಿ: ಕಳೆದ ಮಾ.9 ರಂದು ತಾಲೂಕಿನ ಉಗಲವಾಟ ಗ್ರಾಮದ ಕುರಿಗಳ್ಳರಿಂದ ಕೊಲೆಯಾದ ಮೃತ ಕುರಿಗಾಹಿ

ರೇಣುಕಾಚಾರ್ಯರ ಜಯಂತಿ ಆಚರಣೆ

ರೇಣುಕಾಚಾರ್ಯರ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲ್ಲೂಕು ಆಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ಬದ್ಧ ಎಂದು ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು. ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆನ್ನಬಸವಶ್ರೀ ಸ್ಕಾಲರ್‌ಶಿಪ್ ಎಕ್ಸಾಂನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕಷ್ಟಪಟ್ಟು

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2 ನೇ ಸ್ಥಾನದಲ್ಲಿದೆ. 2024-25ರ ಪರಿಷ್ಕೃತ ಅಂದಾಜಿನಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರೂ.ಗಳ ರಾಜಸ್ವವನ್ನು ನಿರೀಕ್ಷಿಸಲಾಗಿದ್ದು ಇದು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ವಾಗಬಹುದು ಎಂದು ತೆರಿಗೆ ಸಲಹೆಗಾರ ಬಿ.ಎನ್.ಹೂಗಾರ ತಿಳಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500