Viral news Garbage sweeper has crores of property in uttarapradesh

Viral news: ಕಸ ಗುಡಿಸುವನ ಬಳಿ ಇದೆ ಕೋಟಿ ಕೋಟಿ ಆಸ್ತಿ..!

Viral news: ಕಸ ಗುಡಿಸುವನ ಬಳಿ ಇದೆ ಕೋಟಿ ಕೋಟಿ ಆಸ್ತಿ..!

ಉತ್ತರ ಪ್ರದೇಶ: ಇಲ್ಲಿನ ಗೊಂಡಾ ಜಿಲ್ಲೆಯ ನೈರ್ಮಲ್ಯ ಕಾರ್ಮಿಕ ಸಂತೋಷ್ ಜೈಸ್ವಾಲ್ ಎಂಬುವವರ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದ್ದು, ಈತನ ಸುದ್ದಿ ವೈರಲ್ (Viral news) ಆಗಿದೆ.

ಜೈಸ್ವಾಲ್ ನಕಲಿ ದಾಖಲೆಯೊಂದಿಗೆ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾನೆ. ಅಲ್ಲದೇ, ಆತನ ಬಳಿ ಇನ್ನು ಅನೇಕ ಐಷಾರಾಮಿ ಕಾರುಗಳು ಇವೆಯಂತೆ. ಇಂತಹ ಸ್ವತ್ತು ಹೊಂದಿರುವ ಈತ ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ.

Join Our Telegram: https://t.me/dcgkannada

ಜೈಸ್ವಾಲ್ ಮೊದಲು ನಜೀರ್ ಎಂಬ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದಾನೆ. ಈತ ತನ್ನ ಆಸ್ತಿಗೆ ಸಂಬಂಧಪಟ್ಟ ಫೈಲ್‌ಗಳನ್ನು ತಿರುಚಿದ್ದಾನೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಆಗಿನ ಆಯುಕ್ತ ಯೋಗೇಶ್ವ‌ರ್ ರಾಮ್ ಮಿಶ್ರಾ ತನಿಖೆ ನಡೆಸಿದ್ದರು. ತನಿಖೆಯ ವರದಿ ಈಗ ಬಹಿರಂಗವಾದ ಕಾರಣ ಆತನನ್ನು ಅಮಾನತುಗೊಳಿಸಲಾಯಿತು. ಇದೀಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಸಂತೋಷ್ ಜೈಸ್ವಾಲ್ ಸ್ವಿಫ್ಟ್ ಡಿಜೈರ್, ಎರ್ಟಿಗಾ ಮಾರುತಿ ಸುಜುಕಿ, ಮಹೀಂದ್ರಾ ಸ್ಕಾರ್ಪಿಯೋ, ಇನ್ನೋವಾ ಮತ್ತು ಮಹೀಂದ್ರಾ ಕೈಲೋ ಹೊಂದಿದ್ದಾನೆ. ಇತ್ತ, ಅವರ ಸಹೋದರ ಉಮಾಶಂಕ‌ರ್ ಜೈಸ್ವಾಲ್ ಎರ್ಟಿಗಾ ಮಾರುತಿ ಸುಜುಕಿ ಮತ್ತು ಅವರ ಪತ್ನಿ ಬೇಬಿ ಜೈಸ್ವಾಲ್‌ ಟೊಯೋಟಾ ಇನ್ನೋವಾ ಹೊಂದಿದ್ದಾರೆ.

ಇದನ್ನೂ ಓದಿ: Viral Video: ದೇವಾಲಯದೊಳಗೇ ಹಸ್ತಮೈಥುನ‌ ಮಾಡಿಕೊಂಡ ಭೂಪ..! (ವೈರಲ್ ವಿಡಿಯೋ ನೋಡಿ)

ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುವಾಗ ಜೈಸ್ವಾಲ್ ಕಡಿಮೆ ವೇತನದೊಂದಿಗೆ ಹೇಗೆ ಅಕ್ರಮವಾಗಿ ಕೋಟಿ ಕೋಟಿ ಆಸ್ತಿಯನ್ನು ಸಂಪಾದಿಸಿದ್ದಾನೆ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. (Viral news)

ರಾಜ್ಯಪಾಲರ ನಡೆ ಖಂಡಿಸಿ ನಾಳೆ ಕಾಂಗ್ರೆಸ್ ಪ್ರತಿಭಟನೆ : ಡಿಕೆಶಿ

ಬೆಂಗಳೂರು : ರಾಜ್ಯಪಾಲರು ವಿವಾದವೇ ಅಲ್ಲದ ವಿಚಾರವನ್ನು ವಿವಾದ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿದ್ದಾರೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ರಾಜ್ಯಪಾಲರ ನಡೆಯನ್ನು ಖಂಡಿಸಿ ಪಕ್ಷವು ರಾಷ್ಟ್ರಪತಿಗೆ ಮನವಿಯನ್ನು ಸಲ್ಲಿಸಲಿದೆ. ಯಾವುದೇ ದಾಂದಲೆ ಇಲ್ಲದೆ ಶಾಂತಿಯುತವಾಗಿ ಎಚ್ಚರಿಕೆಯಿಂದ ಪ್ರತಿಭಟನೆ ನಡೆಸಲಾಗುವುದು. ಗಾಂಧಿ ಪ್ರತಿಪಾದಿಸಿದ ಶಾಂತಿ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ ದೇಶಕ್ಕೆ ಸಂದೇಶ ನೀಡುವುದಾಗಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ರಾಜ್ಯಪಾಲರು ತೀರ್ಮಾನ ಸರಿಯಾಗಿ ಮಾಡಿಲ್ಲ. ಸಚಿವ ಸಂಪುಟ, ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿದೆ. ಹಿಂದಿನ ಸಂಪುಟ ಸಭೆಯಲ್ಲ ನಾವು ಕೈಗೊಂಡ ನಿರ್ಣಯವನ್ನು ರಾಜ್ಯಪಾಲರು ಸ್ವೀಕರಿಸಿಲ್ಲ. ರಾಜಭವನವನ್ನು ದುರಪಯೋಗ ಮಾಡಿ ನಿರ್ಧಾರ ಹೊರಡಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದ್ದರು.

Latest News

ಆ.1 ರಂದು ಕುಂಟೋಜಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

ಆ.1 ರಂದು ಕುಂಟೋಜಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಬಸ್ ನಿಲ್ದಾಣದಲ್ಲಿ ಆ.1 ರಂದು ಬೆಳಗ್ಗೆ 10 ಕ್ಕೆ

ನಾನು ಅವಕಾಶವಾದಿ ರಾಜಕಾರಣಿಯಲ್ಲ: ನಾಡಗೌಡ

ನಾನು ಅವಕಾಶವಾದಿ ರಾಜಕಾರಣಿಯಲ್ಲ: ನಾಡಗೌಡ

ಮುದ್ದೇಬಿಹಾಳ : ಅಧಿಕಾರಕ್ಕಾಗಿ ನಾನು ಪಕ್ಷನಿಷ್ಠೆ ಬದಲಿಸುವ ಜಾಯಮಾನ ನನ್ನದಲ್ಲ. ನಾನು ಅವಕಾಶವಾದಿ ರಾಜಕಾರಣಿಯಲ್ಲ

ಅಸಂಘಟಿತ ಕಾರ್ಮಿಕರ ಮಂಡಳಿಗೆ ಡೀಸೆಲ್ ಸೆಸ್ ನಲ್ಲಿ ಪಾಲು : ಸಚಿವ ಸಂತೋಷ್‌ ಎಸ್‌ ಲಾಡ್‌

ಅಸಂಘಟಿತ ಕಾರ್ಮಿಕರ ಮಂಡಳಿಗೆ ಡೀಸೆಲ್ ಸೆಸ್ ನಲ್ಲಿ ಪಾಲು : ಸಚಿವ ಸಂತೋಷ್‌ ಎಸ್‌ ಲಾಡ್‌

ಕಾರವಾರ, ಜು.29 :- ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯ ಸಾಮಾಜಿಕ ಭದ್ರತಾ ಯೋಜನೆಗಳನ್ನು

ಬಸ್ ಸ್ಟೇರಿಂಗ್ ಕಟ್ : 22 ಜನ ಪ್ರಯಾಣಿಕರು ಪಾರು

ಬಸ್ ಸ್ಟೇರಿಂಗ್ ಕಟ್ : 22 ಜನ ಪ್ರಯಾಣಿಕರು ಪಾರು

ಲಿಂಗಸಗೂರ ಘಟಕದ ಕೆ.ಎಸ್.ಆರ್.ಟಿ.ಸಿ. ಬಸ್ ಲಿಂಗಸಗೂರನಿಂದ ಮುದ್ದೇಬಿಹಾಳಕ್ಕೆ ತೆರಳುವಾಗ ಬಸ್ ಸ್ಟೇರಿಂಗ್ ಕಟ್ ಆಗಿದೆ.

ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ಆಚರಣೆ

ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ಆಚರಣೆ

ಹುಣಸಗಿ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಯಾದಗಿರಿ ಮತ್ತು ಹುಣಸಗಿ ಪಟ್ಟಣದ ಮುಖಂಡರು ಸೇರಿ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಜಿಲ್ಲೆಯ ಎಲ್ಲಾ ಸೇನಾಪಡೆಯ ಅಧಿಕೃತ ಮಾಜಿ ಸೈನಿಕರು 1971ರ ಯುದ್ಧದಲ್ಲಿ ಭಾಗವಹಿಸಿದ, ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಸೈನಿಕರು ಸೇರಿದಂತೆ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಹುಣಸಗಿ ತಾಲೂಕಿನ ಮುಖಂಡರು, ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು, ಹುಣಸಗಿ ಪಟ್ಟಣದ ಎಲ್ಲಾ ಜನ ಸಾಮಾನ್ಯರು ಅಕ್ಕ ತಂಗಿಯರು,

ಹಸಿವಿನಿಂದ ಬಳಲುತ್ತಿರುವ ಮಕ್ಕಳಿಗೆ ಅನ್ನ‌ ನೀಡಿ, ವ್ಯರ್ಥ ಮಾಡಬೇಡಿ : ಬಸವರಾಜ ಕೋರಿ

ಹಸಿವಿನಿಂದ ಬಳಲುತ್ತಿರುವ ಮಕ್ಕಳಿಗೆ ಅನ್ನ‌ ನೀಡಿ, ವ್ಯರ್ಥ ಮಾಡಬೇಡಿ : ಬಸವರಾಜ ಕೋರಿ

ಮುದ್ದೇಬಿಹಾಳ: ಹಸಿವಿನಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅನ್ನ ನೀಡುವ ಕೆಲಸ ಮಾಡಬೇಕೇ ಹೊರತೂ ಅಮೂಲ್ಯವಾದ ಆಹಾರ ಪದಾರ್ಥಗಳನ್ನು ವ್ಯರ್ಥ ಹಾಳು ಮಾಡಬಾರದು ಎಂದು ಪಟ್ಟಣದ ಮಹಾಮನೆ ಬಳಗದ ಅಧ್ಯಕ್ಷ ಬಸವರಾಜ ಕೋರಿ ಹೇಳಿದರು. ಅವರು ಶನಿವಾರ ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ತೋರಣ ಬಳಗದಿಂದ ನಾಗರ ಪಂಚಮಿ ನಿಮಿತ್ತ ಹಮ್ಮಿಕೊಂಡಿದ್ದ ಬಸವ ಪಂಚಮಿಯ "ಹಾಲು ಕುಡಿಯುವ ಹಬ್ಬ"ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲ್ಲಿನ ನಾಗರಕ್ಕೆ