ಗಾಜಿಯಾಬಾದ್: ಕಾಮುಕರ ಹಾವಳಿ ಮಿತಿ ಮೀರುತ್ತಿದ್ದು, ತಮ್ಮ ಕಾಮದಾಸೆಯನ್ನು ತೀರಿಸಿಕೊಳ್ಳಲು ಎಲ್ಲೆಂದರಲ್ಲಿ ಖಾಸಗಿ ಭಾಗಗಳನ್ನು ಪ್ರದರ್ಶನ ಮಾಡುವುದು, ಮೂಕ ಪ್ರಾಣಿಗಳ ಮೇಲೂ ಲೈಂಗಿಕ ದೌರ್ಜನ್ಯ ಮಾಡುವುದು… ಹೀಗೆ ನೀಚ ಕೃತ್ಯಗಳನ್ನು ಮಾಡುತ್ತಿದ್ದಾರೆ. ಈಗ ಅವರು ಪವಿತ್ರವಾದ ದೇವಾಲಯದೊಳಗೂ ಈ ನಾಚಿಕೆಗೇಡಿನ ಕೆಲಸಕ್ಕೆ ಮುಂದಾಗಿದ್ದಾರೆ. ಅದಕ್ಕೆ ಸಂಬಂಧಪಟ್ಟ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.
Join Our Telegram: https://t.me/dcgkannada
ಹೌದು, ಉತ್ತರ ಪ್ರದೇಶದ ಒಂದು ದೇವಾಲಯದೊಳಗೆ ಕಾಮುಕ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಫೋನ್‍ನಲ್ಲಿ ಅಶ್ಲೀಲ ವಿಡಿಯೋವನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಆ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗಾಜಿಯಾಬಾದ್ ಪೊಲೀಸರು ಕುಕೃತ್ಯ ನಡೆಸಿದ ವ್ಯಕ್ತಿಯ ಹುಡುಕಾಟ ಆರಂಭಿಸಿದ್ದಾರೆ.
ಈ ವಿಡಿಯೊವನ್ನು ಸಚಿನ್ ಗುಪ್ತಾ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ, ಸಾರ್ವಜನಿಕೆ ಆಕ್ರೋಶಕ್ಕೂ ಕಾರಣವಾಗಿದೆ.
ದೇವಾಲಯದ ಆವರಣದಲ್ಲಿ ವ್ಯಕ್ತಿಯು ಅಶ್ಲೀಲ ಕೃತ್ಯದಲ್ಲಿ ತೊಡಗಿರುವುದನ್ನು ವಿಡಿಯೋ ತೋರಿಸುತ್ತದೆ. ಇದು ಸ್ಥಳೀಯ ಸಮುದಾಯ ಮತ್ತು ಧಾರ್ಮಿಕ ಭಕ್ತರಲ್ಲಿ ಬೇಸರವನ್ನುಂಟು ಮಾಡಿದೆ. ವಿಡಿಯೋ ವೈರಲ್ ಆದ ನಂತರ ಎಚ್ಚೆತ್ತುಕೊಂಡ ಗಾಜಿಯಾಬಾದ್ ಪೊಲೀಸರು ಪ್ರಕರಣ ಗಂಭೀರತೆಯನ್ನು ತಿಳಿದುಕೊಂಡು ದೃಶ್ಯವಳಿಯನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Muda case: ಭಂಡತನ ಬಿಟ್ಟು ರಾಜೀನಾಮೆ ಕೊಡಿ: ಸಿಎಂ ಸಿದ್ದುಗೆ ವಿಜಯೇಂದ್ರ ಆಗ್ರಹ
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಸರ್ಕಾರಿ ನೌಕರ ಗಜೇಂದ್ರ ಸಿಂಗ್ ಎಂಬಾತ ಹಸ್ತಮೈಥುನ ಮಾಡಲು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಳಸಿಕೊಂಡಿದ್ದ. ಅಲ್ಲದೇ ಆತ ತನ್ನ ಕಾಮದಾಹ ತೀರಿಸಿಕೊಳ್ಳಲು ಮೇಕೆಯ ಜೊತೆಗೂ ಕ್ರೂರವಾಗಿ ವರ್ತಿಸಿದ್ದ. ಮೊನ್ನೆ ಮೊನ್ನೆ ತಾನೆ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಮಹಿಳೆಯರ ಎದುರೇ ಮುದುಕನೊಬ್ಬ ಹಸ್ತ ಮೈಥುನ ಮಾಡಿಕೊಂಡುದ್ದ.
उत्तर प्रदेश : गाजियाबाद में मंदिर के अंदर एक व्यक्ति ने मोबाइल पर वीडियो (संभवतः पोर्न) देखते हुए मास्टरबेशन किया। पुलिस अब इसकी तलाश में जुटी हुई है। pic.twitter.com/jvDrIn1oLw
— Sachin Gupta (@SachinGuptaUP) August 16, 2024
ಈ ರೀತಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿವೆ.