Muda Case Reaction: Conspiracy behind permission for investigation against CM: Sangita Nad Gowda accused

Muda Case Reaction: ಸಿಎಂ ವಿರುದ್ಧ ತನಿಖೆಗೆ ಅನುಮತಿ ಹಿಂದೆ ಷಡ್ಯಂತ್ರ: ಸಂಗೀತಾ ನಾಡಗೌಡ ಆರೋಪ

Muda Case Reaction: ಸಿಎಂ ವಿರುದ್ಧ ತನಿಖೆಗೆ ಅನುಮತಿ ಹಿಂದೆ ಷಡ್ಯಂತ್ರ: ಸಂಗೀತಾ ನಾಡಗೌಡ ಆರೋಪ

Ad
Ad

ಮುದ್ದೇಬಿಹಾಳ : ಪ್ರಸ್ತುತ ರಾಜ್ಯಪಾಲರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕುರಿತು ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿರುವುದು ಏಕಪಕ್ಷೀಯ ಹಾಗೂ ನಿರಾಧಾರವಾಗಿದೆ. ಅದು ಖಂಡನೀಯ ಎಂದು ಕಾಂಗ್ರೆಸ್ ನಾಯಕಿ ಸಂಗೀತಾ ನಾಡಗೌಡ ಅವರು ಪ್ರತಿಕ್ರಿಯೆ (Muda Case Reaction) ನೀಡಿದ್ದಾರೆ.

Ad
Ad

Join Our Telegram: https://t.me/dcgkannada

ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯಪಾಲರಿಗೆ ಈ ಅಧಿಕಾರವನ್ನು ನಮ್ಮ ಸಂವಿಧಾನ ನೀಡಿದ್ದರೂ, ಪ್ರಕರಣದ ಪೂರ್ವಾಪರಗಳನ್ನು ಪರಾಮರ್ಶಿಸದೇ ತರಾತುರಿಯಲ್ಲಿ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ಹಲವಾರು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ ಎಂದಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ, ರಾಜ್ಯಪಾಲರು ತಾವು ನೀಡಿದ ಹದಿನಾರು ಪುಟಗಳ ವರದಿಯಲ್ಲಿಯೇ, “ಮೇಲ್ನೋಟಕ್ಕೆ ಮಾತ್ರ ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಕೇಳಿ ಬರುತ್ತಿದೆ… ” ಎಂದು ಸ್ಪಷ್ಟವಾಗಿ ಉಲ್ಲೇಖಸಿರುವುದು, ಸನ್ಮಾನ್ಯ ರಾಜ್ಯಪಾಲರು ಯಾವುದೋ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಮನವರಿಕೆಯಾಗಿದೆ ಎಂದು (Muda Case Recation) ತಿಳಿಸಿದ್ದಾರೆ.

ಇದನ್ನೂ ಓದಿ: CM Siddaramaiah ದೆಹಲಿಗೆ, ಕುತೂಹಲ ಮೂಡಿಸಿದ ಸಿಎಂ ರಾಜಕೀಯ ನಡೆ!

ಬೇರೆ ಪಕ್ಷದ ಹಲವಾರು ನಾಯಕರ ವಿರುದ್ಧ ಹಲವಾರು ಪ್ರಕರಣಗಳು ರಾಜ್ಯಪಾಲರ ಮುಂದೇ ಇದ್ದರೂ, ಇದೇ ಒಂದು ಪ್ರಕರಣದಲ್ಲಿ ರಾಜ್ಯಪಾಲರಿಗೆ ಏಕಿಷ್ಟು ಆಸಕ್ತಿ ಎಂಬುದು ಸಧ್ಯದ ಪ್ರಶ್ನೆಯಾಗಿದೆ. ತಮ್ಮ ಸುಧೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಹೊಂದಿರದ ಸಿದ್ದರಾಮಯ್ಯನವರು ಕಾನೂನು ಪ್ರಕ್ರಿಯೆಯಲ್ಲಿ ಮತ್ತೆ ಪುಟಕ್ಕಿಟ್ಟ ಚಿನ್ನದಂತೆ ಹೊರಬರುವುದು ಮಾತ್ರ ಸತ್ಯವಾಗಿದೆ‌. ರಾಜ್ಯಪಾಲರ ಈ ನಡೆ ಮಾತ್ರ ಖಂಡನೀಯ ಎಂದು ಸಂಗೀತಾ ನಾಡಗೌಡ ತಿಳಿಸಿದ್ದಾರೆ.

Latest News

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ಕುಳಗೇರಿ ಕ್ರಾಸ್: ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಇಂಥ

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಬಾದಾಮಿ: ಕಳೆದ ಮಾ.9 ರಂದು ತಾಲೂಕಿನ ಉಗಲವಾಟ ಗ್ರಾಮದ ಕುರಿಗಳ್ಳರಿಂದ ಕೊಲೆಯಾದ ಮೃತ ಕುರಿಗಾಹಿ

ರೇಣುಕಾಚಾರ್ಯರ ಜಯಂತಿ ಆಚರಣೆ

ರೇಣುಕಾಚಾರ್ಯರ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲ್ಲೂಕು ಆಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ಬದ್ಧ ಎಂದು ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು. ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆನ್ನಬಸವಶ್ರೀ ಸ್ಕಾಲರ್‌ಶಿಪ್ ಎಕ್ಸಾಂನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕಷ್ಟಪಟ್ಟು

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2 ನೇ ಸ್ಥಾನದಲ್ಲಿದೆ. 2024-25ರ ಪರಿಷ್ಕೃತ ಅಂದಾಜಿನಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರೂ.ಗಳ ರಾಜಸ್ವವನ್ನು ನಿರೀಕ್ಷಿಸಲಾಗಿದ್ದು ಇದು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ವಾಗಬಹುದು ಎಂದು ತೆರಿಗೆ ಸಲಹೆಗಾರ ಬಿ.ಎನ್.ಹೂಗಾರ ತಿಳಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500