Cement Garlic Now cement garlic has hit the market

Cement Garlic: ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಸಿಮೆಂಟ್ ಬೆಳ್ಳುಳ್ಳಿ!

Cement Garlic: ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಸಿಮೆಂಟ್ ಬೆಳ್ಳುಳ್ಳಿ!

Ad
Ad

ನವದೆಹಲಿ: ಯಾವುದೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದಾಗ ಅದರ ನಕಲು ಮಾಡಿ ಮಾರಾಟ ಮಾಡುವುದು ಅಪರಾಧ ಜಗತ್ತಿನಲ್ಲಿ ಹೊಸ ಬೆಳವಣಿಗೆ ಅಲ್ಲ. ಇಂಥದ್ದೇ ಆತಂಕಕಾರಿ ಬೆಳವಣಿಗೆಯೊಂದಲ್ಲಿ ಸಿಮೆಂಟ್‌ನಲ್ಲಿ ಬೆಳ್ಳುಳ್ಳಿ (Cement Garlic) ಪ್ರತಿಕೃತಿ ಮಾಡಿ, ಅದನ್ನು ನಿಜವಾದ ಬೆಳ್ಳುಳ್ಳಿ ಜೊತೆ ಮಾರಾಟ ಮಾಡುತ್ತಿರುವ ಪ್ರಕರಣ ಮಹಾರಾಷ್ಟ್ರದ ಹಲವು ಕಡೆ ಬೆಳಕಿಗೆ ಬಂದಿದೆ.

Ad
Ad

Join Our Telegram: https://t.me/dcgkannada

ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆ.ಜಿ.ಗೆ 300-350 ರು. ತಲುಪಿರುವ ಬೆನ್ನಲ್ಲೇ, ಮಹಾರಾಷ್ಟ್ರದ ಮಾರುಕಟ್ಟೆಗಳಲ್ಲಿ ಸಿಮೆಂಟ್ ಬೆಳ್ಳುಳ್ಳಿ ಮಾರಾಟದ ಪ್ರಕರಣಗಳು ಪತ್ತೆಯಾಗಿವೆ. ಆಕೋಲಾದಲ್ಲಿ ಬಿಕರಿಗೆ ಇಟ್ಟಿದ್ದ ನೈಜ ಬೆಳ್ಳುಳ್ಳಿ ನಡುವೆ ನೈಜ ಬೆಳ್ಳುಳ್ಳಿಯನ್ನೇ ಹೋಲುವ ಸಿಮೆಂಟ್ ಬೆಳ್ಳುಳ್ಳಿ (Cement Garlic) ಪತ್ತೆಯಾಗಿದೆ. ಸಿಮೆಂಟ್ ಬಳಸಿ ಪ್ರತಿಮೆಗಳನ್ನು ನಿರ್ಮಿಸುವಂತೆ ಬೆಳ್ಳುಳ್ಳಿ ಪ್ರತಿಕೃತಿ ಮಾಡಿ ಅದಕ್ಕೆ ಬಿಳಿಯ ಬಣ್ಣ ಹಚ್ಚಲಾಗಿದೆ.

ಸುಭಾಷ್ ಪಾಟೀಲ್ ಎಂಬ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಮಾರುಕಟ್ಟೆಯಿಂದ 250 ಗ್ರಾಂ ಬೆಳ್ಳುಳ್ಳಿ ಖರೀದಿಸಿ ಮನೆಗೆ ತಂದಿದ್ದರು. ಮನೆಯಲ್ಲಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸಲು ಹೋದಾಗ ಆಗಿಲ್ಲ. ಬಳಿಕ ಚಾಕುವಿನಿಂದ ಕತ್ತರಿಸಿದಾಗ ಒಳಗೆ ಸಿಮೆಂಟ್ ಕಂಡುಬಂದಿದೆ. ಇದೇ ರೀತಿ ಹಲವು ಗ್ರಾಹಕರು ತಾವು ವಂಚನೆಗೆ ಒಳಗಾಗಿದ್ದರ ಕುರಿತು ಮಾಹಿತಿ ಹಂಚಿ ಕೊಂಡಿದ್ದಾರೆ.

ಇದನ್ನೂ ಓದಿ: Rape case: ಕರುನಾಡಿನಲ್ಲಿ ಮತ್ತೊಂದು ಕುಕೃತ್ಯ.. ತಾಯಿ ಕೊಲೆಗೈಯುವಾಗಿ ಹೆದರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ..!

ನೈಜ ಬೆಳ್ಳುಳ್ಳಿ ಜೊತೆಗೆ ಈ ನಕಲಿ ಬೆಳ್ಳುಳ್ಳಿ ಸೇರಿಸುವಮೂಲಕ ತೂಕ ಹೆಚ್ಚಿಸುವ ತಂತ್ರಕ್ಕೆ ವ್ಯಾಪಾರಿಗಳು ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಖರೀದಿಸಿದ ಹಲವು ವ್ಯಕ್ತಿಗಳು ನಕಲಿ ಬೆಳ್ಳುಳ್ಳಿ ಒಡೆದಾಗ ಒಳಗಿನಿಂದ ಸಿಮೆಂಟ್ ಪುಡಿ ಉದುರುತ್ತದೆ.

Latest News

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ಕುಳಗೇರಿ ಕ್ರಾಸ್: ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಇಂಥ

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಬಾದಾಮಿ: ಕಳೆದ ಮಾ.9 ರಂದು ತಾಲೂಕಿನ ಉಗಲವಾಟ ಗ್ರಾಮದ ಕುರಿಗಳ್ಳರಿಂದ ಕೊಲೆಯಾದ ಮೃತ ಕುರಿಗಾಹಿ

ರೇಣುಕಾಚಾರ್ಯರ ಜಯಂತಿ ಆಚರಣೆ

ರೇಣುಕಾಚಾರ್ಯರ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲ್ಲೂಕು ಆಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ಬದ್ಧ ಎಂದು ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು. ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆನ್ನಬಸವಶ್ರೀ ಸ್ಕಾಲರ್‌ಶಿಪ್ ಎಕ್ಸಾಂನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕಷ್ಟಪಟ್ಟು

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2 ನೇ ಸ್ಥಾನದಲ್ಲಿದೆ. 2024-25ರ ಪರಿಷ್ಕೃತ ಅಂದಾಜಿನಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರೂ.ಗಳ ರಾಜಸ್ವವನ್ನು ನಿರೀಕ್ಷಿಸಲಾಗಿದ್ದು ಇದು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ವಾಗಬಹುದು ಎಂದು ತೆರಿಗೆ ಸಲಹೆಗಾರ ಬಿ.ಎನ್.ಹೂಗಾರ ತಿಳಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500