ಮೈಸೂರು : ಬೆಂಗಳೂರಲ್ಲಿ ಯುವತಿಯ ಮೇಲೆ ಅತ್ಯಾಚಾರ (Rape case) ನಡೆದ ಪ್ರಕರಣದ ಬಳಿಕ ಇದೀಗ ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ.
ಹೌದು, ತಾಯಿಯನ್ನು ಕೊಲೆ ಮಾಡುವುದಾಗಿ ಹೆದರಿಸಿ, ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ (Rape case) ಘಟನೆ ಮೈಸೂರು ಜಿಲ್ಲೆಯ ನಂಜನಗೂಡಲ್ಲಿ ಸಂಭವಿಸಿದೆ.
Join Our Telegram: https://t.me/dcgkannada
10ನೇ ತರಗತಿ ಓದುತ್ತಿರುವ ಬಾಲಕಿಯ ಹಿಂದೆ ಬೈಕ್ನಲ್ಲಿ ಫಾಲೋ ಮಾಡಿದ ಆರೋಪಿ, ಆಕೆಯನ್ನು ಒಲೈಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆದರೆ, ಸ್ಪಂದಿಸದಿದ್ದಾಗ ಹೇಳಿದಂತೆ ಕೇಳದಿದ್ದರೆ ನಿನ್ನ ತಾಯಿಯನ್ನು ಸಾಯಿಸುತ್ತೇನೆ ಎಂದು ಹೆದರಿಸಿದ್ದಾನೆ. ಆಗ ಭಯಗೊಂಡ ಬಾಲಕಿ ಆತ ಕರೆದೆಡೆಗೆ ಹೋಗಿದ್ದಾಳೆ. ಬಳಿಕ ಅವಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ನಂಜನಗೂಡು ಪಟ್ಟಣದ ಯುವಕನೇ ಬಂಧಿತ ಆರೋಪಿ ಎಂದೂ ತಿಳಿದುಬಂದಿದೆ. ಈತ 15 ವರ್ಷದ ಅಪ್ರಾಪ್ತೆಗೆ ಬೆದರಿಕೆ ಹಾಕಿ, ಅತ್ಯಾಚಾರ ಎಸಗಿದ್ದಾನೆ.
ಅಲ್ಲದೆ, ನಗ್ನ ಫೋಟೋಗಳನ್ನು,
ಅಪ್ರಾಪ್ತೆಯ ಅಶ್ಲೀಲ ಫೋಟೋಗಳನ್ನು ಸೆರೆಹಿಡಿದು, ಬಾಲಕಿಯ ಶಾಲಾ ಮುಖ್ಯಸ್ಥರಿಗೆ ಕಳಿಸಿದ್ದಾನೆ. ತದನಂತರ, ಶಾಲೆಯ ಮುಖ್ಯಸ್ಥರು ಬಾಲಕಿಯ ತಾಯಿಯನ್ನು ಕರೆಯಿಸಿ ಮಾಹಿತಿ ನೀಡಿದ್ದಾರೆ. ಆಗ ಕುಕೃತ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Death news: ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಇನ್ನಿಲ್ಲ.. ಸಿಎಂ ಸಂತಾಪ
ಮಗಳನ್ನು ಲೈಂಗಿಕವಾಗಿ ಬಳಸಿಕೊಂಡು, ಫೋಟೋಗಳನ್ನು ಶೇರ್ ಮಾಡಿದ ಯುವಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಾಯಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.