Veerabhadreshwar Jatre: A grand procession of idols

ವೀರಭದ್ರೇಶ್ವರ ಜಾತ್ರೆ : ದೇವರ ಮೂರ್ತಿಗಳ ಅದ್ದೂರಿ ಮೆರವಣಿಗೆ VIDEO

ವೀರಭದ್ರೇಶ್ವರ ಜಾತ್ರೆ : ದೇವರ ಮೂರ್ತಿಗಳ ಅದ್ದೂರಿ ಮೆರವಣಿಗೆ VIDEO

ಮುದ್ದೇಬಿಹಾಳ : ಪಟ್ಟಣದ ಕಿಲ್ಲಾದಲ್ಲಿರುವ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮಂಗಳವಾರ ನಡೆಯಿತು.

ಬೆಳಗ್ಗೆ ಕೃಷ್ಣಾ ನದಿಗೆ ದೇವರ ಮೂರ್ತಿಗಳು, ಪಲ್ಲಕ್ಕಿ, ಕಳಸವು ಗಂಗಸ್ಥಳಕ್ಕೆ ಹೋಗಿ ಬಳಿಕ ಪಿಲೇಕೆಮ್ಮ ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ಪುರವಂತರ ಸೇವೆಯೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.

ವೀರಭದ್ರೇಶ್ವರ ಪಲ್ಲಕ್ಕಿ ಮಹಾ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಕಿಲ್ಲಾದಲ್ಲಿರುವ ದೇವಸ್ಥಾನಕ್ಕೆ ತೆರಳಿತು. ಪುರವಂತರಾದ ಅಪ್ಪಣ್ಣ ಸಿದ್ದಾಪೂರ, ಆನಂದ ಪತ್ತಾರ, ಕಾಂತು ಹೆಬ್ಬಾಳ, ಗುರುಯ್ಯ ಮುದ್ನೂರಮಠ, ಚಂದ್ರಶೇಖರ ಪ್ಯಾಟಿಗೌಡರ, ಶಶಿಕಾಂತ ಮುತ್ತಗಿ, ಮಾಂತು ಪ್ಯಾಟಿಗೌಡರ ಹಾಗೂ ಸೇವಾಕರ್ತರಾದ ಉದಯ ರಾಯಚೂರ, ಅಶೋಕ ಹುರಕಡ್ಲಿ, ಬಸವರಾಜ ನಾಶಿ, ಶ್ರೀಶೈಲ್ ಅಮರಣ್ಣವರ, ರವಿ ಅಮರಣ್ಣವರ, ಶಾಹೀಲ್ ನಾಗಠಾಣ, ಸಿದ್ಧಯ್ಯ ಮಹಾಂತಯ್ಯನಮಠ, ಮಾನಪ್ಪ ಪತ್ತಾರ ಪಾಲ್ಗೊಂಡಿದ್ದರು.

ಮಧ್ಯಾಹ್ನ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ ಅವರು ತಂದೆ ತಾಯಿ ಸ್ಮರಣಾರ್ಥ ಪ್ರಸಾದ ಸೇವೆಯನ್ನು ಭಕ್ತರಿಗೆ ವ್ಯವಸ್ಥೆ ಮಾಡಿದ್ದರು. ಕಿಲ್ಲಾದಲ್ಲಿರುವ ಕಾಳಿಕಾದೇವಸ್ಥಾನ, ವೀರಭದ್ರೇಶ್ವರ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ದೇವಸ್ಥಾನಕ್ಕೆ ಭೇಟಿ ವೀರಭದ್ರೇಶ್ವರ ದೇವರ ದರ್ಶನ ಪಡೆದುಕೊಂಡರು.


ಮೆರವಣಿಗೆಯಲ್ಲಿ ಬೊಂಬೆಗಳ ಕುಣಿತ ಆಕರ್ಷಕವಾಗಿತ್ತು.

Latest News

ಐಪಿಎಲ್‌ ಪಂದ್ಯ ನಿಷೇಧಕ್ಕೆ ಸಚಿವ ಸಂತೋಷ್‌ ಲಾಡ್‌ ಆಗ್ರಹ

ಐಪಿಎಲ್‌ ಪಂದ್ಯ ನಿಷೇಧಕ್ಕೆ ಸಚಿವ ಸಂತೋಷ್‌ ಲಾಡ್‌ ಆಗ್ರಹ

ಬೆಂಗಳೂರು: ಭಾರತ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಪಾಕಿಸ್ತಾನವು ಭಾರತದ ನಾಗರಿಕರನ್ನು ಗುರಿಯಾಗಿರಿಸಿ

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಕೋಲ್ಕತ್ತ: ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ವಿರುದ್ಧ ಸೋಲುವ ಮೂಲಕ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ: ಕೆಎಸ್ಆರ್.ಟಿಸಿ ಬಸ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ಆರೇಶಂಕರ ಕ್ರಾಸ್

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮುದ್ದೇಬಿಹಾಳ : ಪಟ್ಟಣದ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಮುದ್ದೇಬಿಹಾಳ, ಕೋಳೂರು, ಅಡವಿ

ನಿಶ್ಚಿತಾರ್ಥದ ಮನೆಯಿಂದ ಮಸಣದೆಡಗೆ: ಅಪಘಾತದಲ್ಲಿ ಕಮರಿದ ಮದುವೆಯ ಕನಸು

ನಿಶ್ಚಿತಾರ್ಥದ ಮನೆಯಿಂದ ಮಸಣದೆಡಗೆ: ಅಪಘಾತದಲ್ಲಿ ಕಮರಿದ ಮದುವೆಯ ಕನಸು

ನಿಶ್ಚಿತಾರ್ಥದ ಖುಷಿಯಲ್ಲಿ ಪಯಣ ಬೆಳೆಸಿದ ಕುಟುಂಬಕ್ಕೆ ಇಂದು ಬೆಳಗ್ಗಿನ ಜಾವ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನಿಶ್ಚಿತಾರ್ಥ ಮುಗಿಸಿಕೊಂಡು ಬಾಗಲಕೋಟ ಜಿಲ್ಲೆಯ ಕುಳಗೇರಿ ಕ್ರಾಸ್ ಗೆ ತೆರಳುತ್ತಿರುಬ ಕುಟುಂಬ ಅಪಘಾತಕ್ಕೆ ಬಲಿಯಾಗಿದೆ. ಶ್ವೇತಾ ಎಬ ಯುವತಿ ಎರಡು ದಿನಗಳ‌ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಹೊಸ ಬಾಳ‌ ಸಂಗಾತಿ ಹಾಗೂ ಹೊಸ ಜೀವನದ ಕನಸಿನೊಂದಿಗೆ ಕಾರನ್ನೇರಿ ಪಯಣ ಬೆಳೆಸಿದ್ದಳು. ವಿಧಿಯ ಮುಂದೆ, ಅಪಘಾತದಲ್ಲಿ ಕನಸು ನುಚ್ಚು ನೂರಾಗಿದೆ. ಎರಡು ದಿನಗಳ ಹಿಂದೆ ಸಾಗರ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಲಿಂಗಸಗೂರು: ತಾಲ್ಲೂಕಿನ ಚಿತ್ತಾಪೂರ ಗ್ರಾಮದಲ್ಲಿ ಬೋರವೇಲ್ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಗ್ರಾಮದ ಜನರಿಗೆ ಯೋಗ್ಯವಾದ ಕೃಷ್ಣ ನದಿಯ ನೀರನ್ನು ಒದಗಿಸಬೇಕು ಎಂದು ಸಹಾಯಕ ಆಯುಕ್ತರಿಗೆಅಂಬೇಡ್ಕರ ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕಳೆದ ವರ್ಷ ಬೇಸಿಗೆಯಲ್ಲಿ ಚಿತ್ತಾಪೂರ ಗ್ರಾಮದ ಸಂಪೂರ್ಣ ಜನರಿಗೆ ವಾಂತಿ ಬೇಧಿಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದರು. ಇಡೀ ರಾಜ್ಯಾದ್ಯಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಬೇಟಿ ನೀಡಿ, ಹತೋಟಿಗೆ ತರುವ