Death news: ನೀರಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ

Death news: ನೀರಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ

Ad
Ad

ನೆಲಮಂಗಲ: ಬಹಿರ್ದೆಸೆಗೆ ಹೋದ ಬಾಲಕರು ನೀರಿನಲ್ಲಿ ಮುಳುಗಿ ಮೃತ (Death news) ಪಟ್ಟಿರುವ ಘಟನೆ ಮಂಗಳವಾರ ರಾತ್ರಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂಡೆಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.

Ad
Ad

ಮೃತರನ್ನು ರಾಯಚೂರು ಜಿಲ್ಲೆಯವರಾದ ಅಭಿಲಾಷ (09 ವರ್ಷ), ಸಂತೋಷ (07 ವರ್ಷ) ಎಂದು ಗುರುತಿಸಲಾಗಿದೆ.

Join Our Telegram: https://t.me/dcgkannada

ದಾಸನಪುರ ಹೋಬಳಿ ಸೊಂಡೆಕೊಪ್ಪ ಬಳಿ ಇರುವ ಬಿಕೆ ನಗರದಲ್ಲಿ ವಾಸವಾಗಿದ್ದ ಹುಡುಗರು ಮಂಗಳವಾರ ರಾತ್ರಿ ಬಹಿರ್ದೆಸೆಗೆ ಹೋಗಿ ನೀರಿನ ಹೊಂಡಕೆ ಬಿದ್ದು ಮೃತ ಪಟ್ಟಿದ್ದಾರೆ (Death news) ಎನ್ನಲಾಗಿದೆ.

ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Astrology: ನಿಮಗೆ ಹಣದ ಸಮಸ್ಯೆ ಉಂಟಾಗುವ ಸಾಧ್ಯತೆ.. ದಿನ ಭವಿಷ್ಯ: ಬುಧವಾರ, ಆಗಸ್ಟ್ 21, 2024, ದೈನಂದಿನ ರಾಶಿ ಭವಿಷ್ಯ

ಯುವಕನ ಮರ್ಮಾಂಗವನ್ನೇ ಕತ್ತರಿಸಿದ ತೃತೀಯ ಲಿಂಗಿಗಳು!

ಬೆಂಗಳೂರು: ಯುವಕನೊಬ್ಬನನ್ನು ತೃತೀಯಲಿಂಗಿಯಾಗಿ ಪರಿವರ್ತನೆಯಾಗುವಂತೆ ಒತ್ತಾಯಿಸಿ ಬಲವಂತವಾಗಿ ಆತನ ಪ್ರಜ್ಞೆ ತಪ್ಪಿಸಿ ಮರ್ಮಾಂಗ ಕತ್ತರಿಸಿ ಹಿಂಸೆ ನೀಡಿದ ಆರೋಪದಲ್ಲಿ ಐವರು ತೃತೀಯ ಲಿಂಗಿಗಳ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿತ್ರಾ, ಅಶ್ವಿನಿ, ಕಾಜಲ್, ಪ್ರೀತಿ ಹಾಗೂ ಮುಗಿಲ ಎಂಬ ತೃತೀಯ ಲಿಂಗಿಗಳ ವಿರುದ್ಧ ಪೊಲೀಸರು ಎಫ್‌ಐಆ‌ರ್ ದಾಖಲಿಸಿ ಬಲೆ ಬೀಸಿದ್ದಾರೆ.

ಏನಿದು ಪ್ರಕರಣ?:

ದೂರುದಾರ ಯುವಕ 3 ವರ್ಷದ ಹಿಂದೆ ಅಂಬೇಡ್ಕರ್ ಕಾಲೇಜು ಬಳಿ ಟೀ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಆರೋಪಿಗಳು ಟೀ ಕುಡಿಯಲು ಆಗಾಗ ಅಂಗಡಿಗೆ ಬರುತ್ತಿದ್ದರು. ಈ ವೇಳೆ ಯುವಕನನ್ನು ಪರಿಚಯಿಸಿ ಕೊಂಡು, ನೀನು ನಮ್ಮ ಜತೆ ಬಂದರೆ ಒಳ್ಳೆಯ ಮನೆ ಹೆಣ್ಣಾದರೆ ಹೆಚ್ಚು ದುಡಿಯುವೆ ಎಂದು ಯುವಕನಿಗೆ ಒತ್ತಾಯ ಅದಕ್ಕೆ ಇಂಜೆಕ್ಷನ್ ನೀಡಿ ಶಸ್ತ್ರಚಿಕಿತ್ಸೆಯಲ್ಲಿ ಇರಿಸಿ ಸಂಪಾದನೆಗೆ ದಾರಿ ಮಾಡಿಕೊಡುವು ದಾಗಿ ಪುಸಲಾಯಿಸಿದ್ದಾರೆ. ಯುವಕ ನಾನು ಬರು ವುದಿಲ್ಲ ಎಂದರೂ ಬಲವಂತವಾಗಿ ಟ್ಯಾನರಿ ರಸ್ತೆಯ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ.

ಪೋಷಕರ ಕೊಲೆ ಮಾಡುವುದಾಗಿ ಬೆದರಿಕೆ:

ನೀನು ಭಿಕ್ಷಾಟನೆ ಮಾಡದಿದ್ದರೆ, ನಿನ್ನ ಮನೆಯವರನ್ನು ಕೊಲೆ ಮಾಡುವುದಾಗಿ ಯುವಕನನ್ನು ಬೆದರಿಸಿದ್ದಾರೆ. ಬಲವಂತವಾಗಿ 3 ವರ್ಷಗಳ ಕಾಲ ಯುವಕನಿಂದ ಭಿಕ್ಷಾಟನೆ ಮಾಡಿಸಿ ಹಣ ಪಡೆದಿದ್ದಾರೆ. ಕಳೆದ ಜು.17ರಂದು ನೀನು ಗಂಡಸಾಗಿ ರುವಾಗಲೇ ಪ್ರತಿ ದಿನ 2000 ರು. ದುಡಿದು ಕೊಡುತ್ತಿರುವೆ. ನೀನು ಹೆಣ್ಣಾದರೆ ಹೆಚ್ಚು ದುಡಿಯಬಹುದು ಎಂದಿದ್ದಾರೆ.

ಪ್ರಜ್ಞೆ ತಪ್ಪಿಸಿ ಮರ್ಮಾಂಗ ಕತ್ತರಿಸಿದರು: ಬಳಿಕ ಆರೋಪಿಗಳು ಗಾಂಜಾ, ಮದ್ಯ ಸೇವಿಸಿ ಮಹಿಳೆ ಯೊಬ್ಬಳನ್ನು ಮನೆಗೆ ಕರೆಸಿಕೊಂಡು ಬಲವಂತವಾಗಿ ಯುವಕನಿಗೆ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಆತನ ಮರ್ಮಾಂಗ ಕತ್ತರಿಸಿದ್ದಾರೆ. ಆತ ಎಚ್ಚರಗೊಂಡಾಗ ಮರ್ಮಾಂಗದ ಬಳಿ ರಕ್ತಗಾಯ ವಾಗಿದ್ದು, ಪೈಪ್‌ವೊಂದನ್ನು ಅಳವಡಿಸಿರುವುದು ಕಂಡು ಬಂದಿದೆ. ಬಳಿಕ ಆರೋಪಿಗಳು ಯುವಕನನ್ನು ಆ.3ರ ವರೆಗೂ ಆ ಮನೆಯಲ್ಲೇ ಕೂಡಿ ಹಾಕಿ ಬಳಿಕ ಬೇರೆಡೆ ಕರೆದೊಯು ಪೂಜೆ ಮಾಡಿಸಿದ್ದಾರೆ.

ಲೈಂಗಿಕ ಕಾರ್ಯಕರ್ತೆ ಕೆಲಸಕ್ಕೆ ಒತ್ತಾಯ:

ಇನ್ನು ಮುಂದೆ ನೀನು ಭಿಕ್ಷಾಟನೆ ಮಾಡುವುದರ ಜತೆಗೆ ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಯುವಕ ಒಪ್ಪದಿದ್ದಾಗ 5 ಲಕ್ಷ ರು. ಕೊಡುವಂತೆ ಒತ್ತಾಯಿಸಿದ್ದಾರೆ. ಆರೋಪಿ ಗಳ ಹಿಂಸೆ ತಾಳಲಾರದೆ ತಪ್ಪಿಸಿಕೊಂಡುದೂರು ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest News

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ಕುಳಗೇರಿ ಕ್ರಾಸ್: ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಇಂಥ

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಬಾದಾಮಿ: ಕಳೆದ ಮಾ.9 ರಂದು ತಾಲೂಕಿನ ಉಗಲವಾಟ ಗ್ರಾಮದ ಕುರಿಗಳ್ಳರಿಂದ ಕೊಲೆಯಾದ ಮೃತ ಕುರಿಗಾಹಿ

ರೇಣುಕಾಚಾರ್ಯರ ಜಯಂತಿ ಆಚರಣೆ

ರೇಣುಕಾಚಾರ್ಯರ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲ್ಲೂಕು ಆಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ಬದ್ಧ ಎಂದು ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು. ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆನ್ನಬಸವಶ್ರೀ ಸ್ಕಾಲರ್‌ಶಿಪ್ ಎಕ್ಸಾಂನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕಷ್ಟಪಟ್ಟು

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2 ನೇ ಸ್ಥಾನದಲ್ಲಿದೆ. 2024-25ರ ಪರಿಷ್ಕೃತ ಅಂದಾಜಿನಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರೂ.ಗಳ ರಾಜಸ್ವವನ್ನು ನಿರೀಕ್ಷಿಸಲಾಗಿದ್ದು ಇದು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ವಾಗಬಹುದು ಎಂದು ತೆರಿಗೆ ಸಲಹೆಗಾರ ಬಿ.ಎನ್.ಹೂಗಾರ ತಿಳಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500