HD Kumaraswamy thundered that a hundred Siddaramaiahs should come to arrest me

ನನ್ನನ್ನು ಬಂಧಿಸಲು ನೂರು ಜನ ಸಿದ್ದರಾಮಯ್ಯರು ಬರಬೇಕು ಎಂದು ಗುಡುಗಿದ HD Kumaraswamy

ನನ್ನನ್ನು ಬಂಧಿಸಲು ನೂರು ಜನ ಸಿದ್ದರಾಮಯ್ಯರು ಬರಬೇಕು ಎಂದು ಗುಡುಗಿದ HD Kumaraswamy

ಬೆಂಗಳೂರು: ನನಗೆ ಭಯ ಶುರುವಾಗಿದೆಯಾ? ನನ್ನ ನೋಡಿದರೆ ನಿಮಗೆ ಹಾಗೆ ಅನಿಸುತ್ತಾ? ಸಿಎಂ ಕಳೆದ ವಾರದಿಂದ ಹೇಗೆ ನಡೆದುಕೊಡಿದ್ದಾರೆ ನೋಡಿದ್ದೀರಲ್ಲಾ? ನನ್ನನ್ನು ಬಂಧಿಸಲು ನೂರು ಜನ ಸಿದ್ದರಾಮಯ್ಯಗಳು ಬರಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಸವಾಲು ಹಾಕಿದರು.

Join Our Telegram: https://t.me/dcgkannada

ಅಗತ್ಯವಿದ್ದರೆ ಕುಮಾರಸ್ವಾಮಿಯನ್ನು ಮುಲಾಜಿಲ್ಲದೆ ಬಂಧಿಸುತ್ತೇವೆ ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ಕೊಟ್ಟರು.

ಮೈಸೂರಿನ ಮೂಡಾ ದಾಖಲೆ ಇದೆಯಲ್ಲ. ಮುಡಾ ಆಸ್ತಿಯನ್ನು ನನ್ನ ಆಸ್ತಿ ಎಂದು ಹೇಳುತ್ತಿದ್ದಾರೆ. ಇಂತಹ ಭಂಡತನ ಯಾವ ಸಿಎಂ ಕೂಡ ತೋರಿಲ್ಲ. ನನ್ನ ಬಂಧನ ಮಾಡುವುದಕ್ಕೆ ನೂರು ಜನ ಸಿದ್ದರಾಮಯ್ಯರು ಬರಬೇಕು ಎಂದು HD Kumaraswamy ವಾಗ್ದಾಳಿ ನಡೆಸಿದರು.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಪ್ರಕರಣದ ಬಗ್ಗೆ ಕೇಂದ್ರ ಸಚಿವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಸಿಎಂ ಮೇಲಿನಂತೆ ಹೇಳಿಕೆ ನೀಡಿದ್ದರು.

ಇದಕ್ಕೆ ಖಾರವಾಗಿ ತಿರುಗೇಟು ಕೊಟ್ಟ ಸಚಿವರು, ನನಗೆ ಯಾವುದೇ ಭಯ ಇಲ್ಲ. ನನ್ನ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮೋದನೆಗೆ ಕೋರಿದ್ದಾರೆ. ಅನುಮತಿ ಕೋರಿರೋದು 2023 ನವೆಂಬರ್‌ನಲ್ಲಿ. ಸುಮಾರು ಹತ್ತು ತಿಂಗಳಾಗಿದೆ ಎಂದು ಹೇಳಿದರು.

ಇದನ್ನೂ ಓದಿ: CM vs HDK: ಕುಮಾರಸ್ವಾಮಿ ಬಂಧನ ಮಾಡ್ತೇವೆ ಎಂದ ಸಿಎಂ.. ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇನೆ ಎಂದ ಕೇಂದ್ರ ಸಚಿವ!

Latest News

ಅಣ್ಣ-ತಂಗಿ ಲವ್ವಿಡವ್ವಿ.. ಸಾ*ವಿನಲ್ಲಿ ಅಂತ್ಯ

ಕಾಮದ ಮುಂದೆ ಈ ಕಾಲದಲ್ಲಿ ಸಂಬಂಧಕ್ಕೆ ಬೆಲೆನೆ ಇಲ್ಲವಾಗಿದೆ.. ಇಲ್ಲೊಂದು ಪ್ರೇಮದ ಕತೆಯೂ ಇದೆ

ಸಾರ್ವಜನಿಕರು,ವ್ಯಾಪಾರಿಗಳಿಗೆ ನಿತ್ಯ ಕಿರಿಕಿರಿ; ಮಂಗಗಳ ಹಾವಳಿಗೆ ಜನ ಹೈರಾಣು..!

ನಾಲತವಾಡ : ಪಟ್ಟಣದ ಹೃದಯಭಾಗವಾಗಿರುವ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಆಲದ ಮರದಲ್ಲಿ ಬಿಡಾರ ಹೂಡಿರುವ

ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ.

ತಾಳಿಕೋಟಿ: ಸಮಾಜ ಸೇವೆಯ ಹೆಸರಿನಲ್ಲಿ ಕೇವಲ ತಮ್ಮ ಸ್ವಾರ್ಥವನ್ನೇ ಈಡೇರಿಸಿಕೊಳ್ಳುವ ಇಂದಿನ ದಿನಮಾನದಲ್ಲಿ ತಾನು

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ:                       ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ: ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಮುದ್ದೇಬಿಹಾಳ : ಇದೇ ಪ್ರಥಮ ಬಾರಿಗೆ ಲಿಂಗಸುಗೂರಿನಲ್ಲಿ ಜ.11 ರಂದು ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್

ಹೆಬ್ಬಾಳ ಪಬ್ಲಿಸಿಟಿ-ಜನರಕೂಗು ನ್ಯೂಸ್ ಕ್ಯಾಲೆಂಡರ್ ಬಿಡುಗಡೆ:                                                                               ಸತ್ಯ ಸಂಗತಿಗಳಿಗೆ ಮಾಧ್ಯಮ ಧ್ವನಿಯಾಲಿ-ಸಿದ್ಧಲಿಂಗ ದೇವರು

ಹೆಬ್ಬಾಳ ಪಬ್ಲಿಸಿಟಿ-ಜನರಕೂಗು ನ್ಯೂಸ್ ಕ್ಯಾಲೆಂಡರ್ ಬಿಡುಗಡೆ: ಸತ್ಯ ಸಂಗತಿಗಳಿಗೆ ಮಾಧ್ಯಮ ಧ್ವನಿಯಾಲಿ-ಸಿದ್ಧಲಿಂಗ ದೇವರು

ತಾಳಿಕೋಟಿ : ಮಾಧ್ಯಮಗಳು ಸಮಾಜದಲ್ಲಿ ನಡೆದಿರುವ ಸತ್ಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಇಲ್ಲಿನ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ದೇವರು ನುಡಿದರು. ಪಟ್ಟಣದ ತಾಳಿಕೋಟೆ ಖಾಸ್ಗತೇಶ್ವರ ಮಠದಲ್ಲಿ ಭಾನುವಾರ ಸಂಜೆ ಹೆಬ್ಬಾಳ ಪಬ್ಲಿಸಿಟಿ ಹಾಗೂ ಜನರಕೂಗು ಸುದ್ದಿ ವಾಹಿನಿ ಬಳಗದ 2026 ನೇ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು. ಮಠಗಳು ನಡೆಸುವ ಶೈಕ್ಷಣಿಕ,ಧಾರ್ಮಿಕ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಧ್ಯಮ ಮಾಡಬೇಕಿದೆ.ಮಾಧ್ಯಮ ಕ್ಷೇತ್ರದಲ್ಲಿರುವವರಲ್ಲಿ ಅಸೂಯೆ

ಹರಿಹರ ತಾಲ್ಲೂಕು ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟಸಭೆ : ಅಶ್ವತ ಟಿ ಮರೀಗೌಡ್ರು.

ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ, ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಈ ಸಭೆಯನ್ನು ಹರಿಹರ ತಾಲ್ಲೂಕಿನ ಹೊಸಪೇಟೆ ಬೀದಿ ಶ್ರೀ ಮುರುಘಾರಾಜೇಂದ್ರ ಕಲ್ಯಾಣ ಮಂಟಪ ಎದುರು ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘ ಕಛೇರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಅಶ್ವತ ಟಿ ಮರೀಗೌಡ್ರು, ಶಿವಕುಮಾರ್ ಗೌಡ, ರಮೇಶ್, ಲೋಕೇಶ್ ನಾಯಕ, ಹಾಲೇಶ್, ಭೀಮಣ್ಣ, ಶಶಿನಾಯ್ಕ್ , ಶಿವಣ್ಣ, ಪರಶುರಾಮ, ನಾಗರಾಜು,