The land records given to lease were altered and purchased by crooks: Veeranna Charantimath accused

Hunagund: ಲೀಸ್ ಗೆ ನೀಡಿದ್ದ ಭೂ ದಾಖಲೆ ತಿದ್ದಿ ಖರೀದಿಸಿದ ದುರುಳರು: ವೀರಣ್ಣ ಚರಂತಿಮಠ ಆರೋಪ

Hunagund: ಲೀಸ್ ಗೆ ನೀಡಿದ್ದ ಭೂ ದಾಖಲೆ ತಿದ್ದಿ ಖರೀದಿಸಿದ ದುರುಳರು: ವೀರಣ್ಣ ಚರಂತಿಮಠ ಆರೋಪ

ಹುನಗುಂದ: ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶಾಲೆಯ ಆವರಣಕ್ಕೆ 99 ವರ್ಷ ಮೂರು ಎಕರೆ ಆರು ಗುಂಟೆ ಲೀಸ್ ನೀಡಿದ ಜಾಗೆಯನ್ನು ಖಾಸಗಿ ಇಬ್ಬರು ವ್ಯಕ್ತಿಗಳು ಅಧಿಕಾರ ದುರಪಯೋಗ ಪಡಿಸಿಕೊಂಡು ಲೀಸ್ ಅಂತ ಇದ್ದಿದನ್ನು ಅಳಿಸಿ ಖುಷ್ಕಿ ಜಮೀನು ಅಂತ ಜಾಗೆಯನ್ನು ಖರೀದಿ ಮಾಡಿಕೊಂಡಿದ್ದಾರೆ ಎಂದು ವಿ.ಮ.ವಿ.ವ ಸಂಘದ ಕಾಯಾಧ್ಯಕ್ಷ ವೀರಣ್ಣ ಚರಂತಿಮಠ ಆರೋಪಿಸಿದರು.

Join Our Telegram: https://t.me/dcgkannada

ಪಟ್ಟಣದ ವಿ.ಮ.ವಿ.ವ ಸಂಘದ ಕಾರ್ಯಾಲಯದಲ್ಲಿ ಗುರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಲಕಲ್ಲ ವಿಜಯ ಮಹಾಂತೇಶ ಸ್ವಾಮಿಗಳು ಅದರ ಅಧ್ಯಕ್ಷತೆಯಲ್ಲಿ ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ನಡೆಯುತ್ತಿದ್ದು, ನೂರಾರು ವರ್ಷಗಳ ಇತಿಹಾಸ ಹೊಂದಿದ ಈ ಸಂಸ್ಥೆ ಒಂದು ಸಾರ್ವಜನಿಕವಾದ ಈ ಸಂಸ್ಥೆಯಾಗಿದೆ ಎಂದರು.

ನಾಲ್ಕು ಕ್ಯಾಂಪಸ್‌ಗಳನ್ನು ಹೊಂದಿದ್ದು ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘಕ್ಕೆ 99 ವರ್ಷಗಳ ವರೆಗೆ ಲೀಸ್ ನೀಡಿದ ಬಿಂದುರಾವ್ ಕುಲಕರ್ಣಿ ನೀಡಿದ ರಿ.ಸ.ನಂ ೪೫೮/೧ ಕ್ಷೇತ್ರ ೩ ಎಕರೆ ೬ ಗುಂಟೆ ಮೊದಲು ಲೀಸ್ ಜಮೀನು ಇದ್ದು, ಶಾಲೆಯ ಆಟದ ಮೈದಾನ ಎಂದು ನೊಂದನೆಯಾಗಿದೆ ಎಂದರು.

ಕುಲಕರ್ಣಿಯವರ ಕುಟುಂಬಸ್ಥರು ನಾಲ್ಕು ಜನರು ಸಂಸ್ಥೆಗೆ ೨೦೦೧ ರಲ್ಲಿ ೫೦ ಸಾವಿರವನ್ನು ತೆಗೆದುಕೊಂಡು ಸಂಸ್ಥೆಗೆ ಬಿಟ್ಟು ಕೊಟ್ಟಿದ್ದಾರೆ. ಇದರ ಮಧ್ಯೆ ಇಬ್ಬರು ಖಾಸಗಿ ವ್ಯಕ್ತಿಗಳು ಇನ್ನೂ ೨೨ ವರ್ಷ ಲೀಸ್ ಇದ್ದರೂ ಈ ರೀತಿಯಾಗಿ ಉದ್ದಟತನದ ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ಕೋರ್ಟನಲ್ಲಿ ರಾಜೀಯಾಗಿ ಡಿಗ್ರಿಯಾಗಿದೆ. ಸಂಸ್ಥೆಯ ಆವರಣ ಅಂತ ಆಗಿದೆ. ಅಧಿಕಾರ ಇದೆ ಅಂತ ಯಾವುದೇ ಉದ್ದಟತನ ಕೆಲಸವನ್ನು ಯಾರೂ ಮಾಡಬಾರದು ಈಗಾಗಲೇ ಕರ್ನಾಟಕ ಹೈಕೋಟ್ ತಡೆಯಾಜ್ಞೆಯನ್ನು ನೀಡಿದೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕರಿಗೆ ಇಬ್ಬರಿಗೆ ಬೋಗಸ್ ಅಟ್ರಾಸಿಟಿ ಕೇಸ್ ಅವರು ಮಾಡಲಾಗಿದ್ದು. ಬೋಗಸ್ ಇದ್ದಾಗ ಯಾರನ್ನು ಅರೆಸ್ಟ್ ಮಾಡಲು ಬರುವುದಿಲ್ಲ ಕಾನೂನು ಕೇಳಿದ್ದೇವೆ. ಗುರವಾರ ರಾತ್ರಿ ಏಕಾಏಕಿಯಾಗಿ ಶಾಲೆಯ ಕೌಂಪೋಡನ್ನು ಎರಡು ಜೆಸಿಬಿ ಮತ್ತು ಹಿಟ್ಯಾಚಿಯಿಂದ ನಂಬರ ಪ್ಲೇಟ್ ತೆಗೆದು ಕೌಂಪೋಡ್ ಒಡೆಯುವ ಕೆಲಸವನ್ನು ಮಾಡಿದ್ದಾರೆ ಎಂದರು.

ಅವರ ಮೇಲೆ ನೂರಕ್ಕೆ ನೂರರಷ್ಟು ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇವೆ. ನ್ಯಾಯಾಲಯದ ತಡೆಯಾಜ್ಞೆ ಇರುವಾಗ ಈ ರೀತಿಯಾಗಿ ಮಾಡಿದಾಗ ಅವರ ಮೇಲೆ ಸೂಕ್ತ ಕ್ರಮವಹಿದ್ದೇವೆ ಎಂದರು.

ಅಧಿಕಾರಿಗಳು ಯಾರದೋ ಮಾತು ಕೇಳಿ ಕಾನೂನು ಬಿಟ್ಟು ಕೆಲಸ ಮಾಡಿದರೆ, ಅವರ ಮೇಲೆಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕಾನೂನು ಬದ್ಧವಾದ ಕೆಲಸವನ್ನು ಮಾತ್ರ ಮಾಡಬೇಕು. ಅಧಿಕಾರ ಮತ್ತು ಸರ್ಕಾರ ಇಂದು ಇರುತ್ತೇ ನಾಳೆ ಹೋಗುತ್ತೆದೆ. ಆದ್ದರಿಂದ ಅಧಿಕಾರಿಗಳು ಕಾನೂನು ಮೀರಿ ಕೆಲಸವನ್ನು ಯಾವುದೇ ಕಾರಣಕ್ಕೆ ಮಾಡಬಾರದು ಎಂದರು.

ಬೇರೆಯವರ ಮಾತು ಕೇಳಿ ಕೆಲಸವನ್ನು ಮಾಡಿದರೆ ಅಧಿಕಾರಿಗಳೇ ನೇರ ಹೋಣೆಯನ್ನು ಮಾಡಲಾಗುವುದು. ಕಾನೂನು ಬಿಟ್ಟು ನಾವು ಏನು ಮಾಡುವುದಿಲ್ಲ ಕಾನೂನು ಪ್ರಕಾರ ಕ್ರಮವಹಿಸಿ ಕೆಲ¸ವನ್ನು ಸಂಸ್ಥೆಯ ಹಿತದೃಷ್ಟಿಯಿಂದ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Astrology: ಹಣದ ವಿಚಾರದಲ್ಲಿ ಇಂದು ನೀವು ಜಾಗರೂಕರಾಗಿ ಇರುವುದು ಉತ್ತಮ

ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ, ನಿರ್ದೇಶಕರಾದ ಅರುಣೋದಯ ದುದ್ಗಿ, ರವಿ ಹುಚನೂರ , ಬಸವರಾಜ ಕೆಂದೂರ, ಮಹಾಂತೇಶ ಕತ್ತಿ ಇತರರು ಇದ್ದರು.

Latest News

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ :                 ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ : ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಒಳ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮುದ್ದೇಬಿಹಾಳ : ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ಸಮಾನ ಮನಸ್ಕರ ಯುವ ಬಳಗದ ಸಹಯೋಗದಲ್ಲಿ 4 ರಂದು ಬೆಳಗ್ಗೆ 8 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಪಟ್ಟಣದ ಹುಡ್ಕೋದಲ್ಲಿರುವ ಗವಿಸಿದ್ದೇಶ್ವರ ವೇದಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮುದ್ದೇಬಿಹಾಳದ ಎಲ್ಲಾ ಬಾಂಧವರು ತಮ್ಮ ಮಕ್ಕಳನ್ನು ಕರೆತಂದು ಈ ಕಾರ್ಯಕ್ರಮದಲ್ಲಿ ತೊಡಗಿಸಿ ಹೋಳಿ ಆಚರಣೆ ಯಶಸ್ವಿಗೊಳಿಸುವಂತೆ ಬಳಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಮುದ್ದೇಬಿಹಾಳ : ಪಟ್ಟಣಕ್ಕೆ ಕುಡಿವ ನೀರು ಪೂರೈಕೆ ಎರಡು ದಿನ ವಿಳಂಬವಾಗಿದ್ದು ಮಾ.3 ರಿಂದ ಯತಾಸ್ಥಿತಿಯಲ್ಲಿ ವಿವಿಧ ವಾರ್ಡಗಳಿಗೆ ಸರದಿ ಮೇಲೆ ಪೂರೈಕೆ ಆಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿವ ನೀರು ಪೂರೈಕೆ ವಿಭಾಗದ ಉಸ್ತುವಾರಿ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ದಿನಗಳಿಂದ ಇಲ್ಲಿನ ಜ್ಞಾನ ಭಾರತಿ ಶಾಲೆ ಮುಂದೆ ಮುಖ್ಯ ಕೊಳವೆ ಪೈಪ್‌ನಲ್ಲಿ ಸೋರಿಕೆ ಕಂಡು ಬಂದಿತ್ತು.ಅದನ್ನು