Channapatna by-election: Explosive bomb exploded by C.P. Yogeshwar

Channapattana by election: ಸ್ಫೋಟಕ ಬಾಂಬ್ ಸಿಡಿಸಿದ ಸಿ.ಪಿ. ಯೋಗೇಶ್ವರ್

Channapattana by election: ಸ್ಫೋಟಕ ಬಾಂಬ್ ಸಿಡಿಸಿದ ಸಿ.ಪಿ. ಯೋಗೇಶ್ವರ್

Ad
Ad

ರಾಮನಗರ : ಚನ್ನಪಟ್ಟಣ ಉಪ ಚುನಾವಣೆಗೆ (Channapattana by election) ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಅಂಗಳಕ್ಕೆ ತಲುಪಿದರೂ ಹೈಡ್ರಾಮಾ ಮುಂದುವರಿದಿದೆ.

Ad
Ad

Join Our Telegram: https://t.me/dcgkannada

ಈ ಬಗ್ಗೆ ಸಿ.ಪಿ.ಯೋಗೇಶ್ವ‌ರ್ ಸ್ಫೋಟಕ ಹೇಳಿಕೆ ನೀಡಿದ್ದು, ಉಪಚುನಾವಣೆಗೆ ನನಗೆ ಟಿಕೆಟ್ ಸಿಗದಿದ್ದರೆ, ಪಕ್ಷೇತರ ಇಲ್ಲವೇ ಬಿಎಸ್ಪಿಯಿಂದ ಸ್ಪರ್ಧಿಸುವುದಾಗಿ‌ ಹೇಳಿಕೊಂಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸದಿದ್ದರೂ ಅವರಿಗೆ ಬಿಎಸ್ಪಿ ಬೆಂಬಲ‌ಸಿಗುವುದು ಪಕ್ಕಾ ಆಗಿದೆ. ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆಂದು ವರದಿಯಾಗಿದೆ.

ಬಿಜೆಪಿ ಅಥವಾ ಜೆಡಿಎಸ್ ನಿಂದಲೂ ತಮಗೆ ಟಿಕೆಟ್ ಸಿಕ್ಕರೂ ಸರಿ. ಹಾಗೊಂದು ವೇಳೆ ಎರಡೂ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ತಾವು BSP ಇಲ್ಲವೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಒತ್ತಿ-ಒತ್ತಿ ಸಭೆಯಲ್ಲಿ ಹೇಳಿದ್ದಾರಂತೆ ಸಿಪಿವೈ.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ (Channapattana by election) ಕ್ಷೇತ್ರಕ್ಕೆ ಮಿತ್ರ ಪಕ್ಷ ಬಿಜೆಪಿಗೆ ದಳಪತಿಗಳು ಕ್ಷೇತ್ರ ಬಿಟ್ಟುಕೊಡುತ್ತಿಲ್ಲ ಎಂದು ಮನಗಂಡಿರುವ ಯೋಗೇಶ್ವ‌ರ್, ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಎನ್ನಲಾಗಿದೆ.

ಇದನ್ನೂ ಓದಿ: Green gram: ಇಂದಿನಿಂದ ಹೆಸರು ಕಾಳು ಖರೀದಿ ಆರಂಭ

ಒಟ್ಟಾರೆ, ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಪಡೆದೇ ತೀರಬೇಕು ಎಂದು ಯೋಗೇಶ್ವರ್ ಹಠಕ್ಕೆ ಬಿದ್ದಿದ್ದಾರೆ. ಕಳೆದ 15 ದಿನಗಳಲ್ಲಿ 3 ಬಾರಿ ದಿಲ್ಲಿಗೆ ಹಾರಿದ್ದಾರೆ. ಅಲ್ಲೇ ಠಿಕಾಣಿ ಹೂಡಿದ್ದು, ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಚನ್ನಪಟ್ಟಣದ ಟಿಕೆಟ್ ಫೈಟ್ ರಣರೋಚಕ ಘಟ್ಟಕ್ಕೆ ತಲುಪಿದೆ‌.

Latest News

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ

ಹೋಳಿ, ರಂಜಾನ್ ಶಾಂತಿಪಾಲನಾ ಸಭೆ:ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬಾರದಂತೆ ಹಬ್ಬದಾಚರಣೆhu ಮಾಡಿ

ಹೋಳಿ, ರಂಜಾನ್ ಶಾಂತಿಪಾಲನಾ ಸಭೆ:ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬಾರದಂತೆ ಹಬ್ಬದಾಚರಣೆhu ಮಾಡಿ

ಮುದ್ದೇಬಿಹಾಳ : ಹೋಳಿ ಹಾಗೂ ರಂಜಾನ್ ಹಬ್ಬಗಳು ಶಾಂತಿ,ಸಹೋದರತೆ ಪ್ರೀತಿ ಹಾಗೂ ಸಹೋದರತೆಯ ಸಂಕೇತಗಳಾಗಿದ್ದು

ಕ್ಷೌರಿಕ ಜನಾಂಗಕ್ಕೆ ಅಪಮಾನ-ಕ್ಷಮೆಯಾಚನೆಗೆ ಆಗ್ರಹ

ಕ್ಷೌರಿಕ ಜನಾಂಗಕ್ಕೆ ಅಪಮಾನ-ಕ್ಷಮೆಯಾಚನೆಗೆ ಆಗ್ರಹ

ಮುದ್ದೇಬಿಹಾಳ : ಪಟ್ಟಣದ ಹೆಸ್ಕಾಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಟಿಸಿ ದುರಸ್ತಿ ಕೇಂದ್ರದ ಉದ್ಘಾಟನಾ¸ ಸಮಾರಂಭದಲ್ಲಿ

ಕುಂಟೋಜಿ ಗ್ರಾಪಂ ಮುಂದೆ ಧರಣಿ: ನಕಲಿ ದಾಖಲೆ ಸೃಷ್ಟಿಸಿ ನೇಮಕವಾದ ವಾಟರ್‌ಮನ್‌ಗಳ ವಜಾಗೆ ಆಗ್ರಹ

ಕುಂಟೋಜಿ ಗ್ರಾಪಂ ಮುಂದೆ ಧರಣಿ: ನಕಲಿ ದಾಖಲೆ ಸೃಷ್ಟಿಸಿ ನೇಮಕವಾದ ವಾಟರ್‌ಮನ್‌ಗಳ ವಜಾಗೆ ಆಗ್ರಹ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೇಮಕಗೊಂಡಿರುವ ಮೂವರು

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಭಾರತೀಯ ಕಿಸಾನ ಸಂಘದ ಬೆಂಬಲ

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಭಾರತೀಯ ಕಿಸಾನ ಸಂಘದ ಬೆಂಬಲ

ಬೀಳಗಿ: ಗ್ರಾಮ ಆಡಳಿತಾಧಿಕಾರಿಗಳು ಮೂರು ದಿನಗಳಿಂದ ರಾಜ್ಯಾದಂತ ತಮ್ಮ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಮುಷ್ಕರ ನಡೆಸಿರುವುದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೀವ್ರ ತೊಂದರೆಯಾಗಿದ್ದು, ಅವರ ಬೇಡಿಕೆಗಳು ನ್ಯಾಯೋಚಿತವಾಗಿದ್ದು ತಕ್ಷಣ ಸರಕಾರ ಸ್ಪಂದಿಸಬೇಕೆಂದು ಅವರ ಹೋರಾಟ ಬೆಂಬಲಿಸಿ ಆಗ್ರಹಿಸಿ ಭಾರತೀಯ ಕಿಸಾನ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ತಹಶೀಲ್ದಾರ ಕಚೇರಿ ಮುಂದೆ ಬೆಂಬಲಿಸಿ ಪ್ರತಿಭಟನೆ ನಡೆಸಿದರು. ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ,

ಇಟಗಿ ಗ್ರಾಮದ ಶರಣಮ್ಮ ಬ. ಪಾಟೀಲ ನಿಧನ

ಇಟಗಿ ಗ್ರಾಮದ ಶರಣಮ್ಮ ಬ. ಪಾಟೀಲ ನಿಧನ

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಶರಣಮ್ಮ ಬಸನಗೌಡ ಪಾಟೀಲ (72) ಅವರು ಬುಧವಾರ ಫೆ.12ರ ಬೆಳಗಿನ ಜಾವ ಸುಮಾರು 12:30ಕ್ಕೆ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ನಾಲ್ವರು ಮೊಮ್ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಫೆ.12ರ ಮಧ್ಯಾಹ್ನ 2 ಗಂಟೆಗೆ ಸ್ವಗ್ರಾಮ ಇಟಗಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.