ಕುಂದಗೋಳ: ಪಟ್ಟಣದ ಎಪಿಎಂಸಿ ಆವರಣ ಹಾಗೂ ಯಲಿವಾಳದ ಪಿಕೆಪಿಎಸ್ ಆವರಣದಲ್ಲಿ ಆ.30ರಿಂದ ಹೆಸರು ಕಾಳು (Green gram) ಖರೀದಿಸಲಾಗುತ್ತದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ರಾಜು ಮಾವರಕರ ತಿಳಿಸಿದರು.
Join Out Telegram: https://t.me/dcgkannada
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
2024- 25ನೇ ಸಾಲಿನ ಎಫ್‌ಎಕ್ಕೂ ಗುಣಮಟ್ಟದ ಹೆಸರು ಕಾಳು (Green gram) ಖರೀದಿಸಲಾಗುತ್ತದೆ. ಪ್ರತಿ ಕ್ವಿಂಟಾಲ್ 8582 ರೂಪಾಯಿ ಹಾಗೂ ಒಬ್ಬ ರೈತನಿಂದ ಗರಿಷ್ಠ 10 ಕ್ವಿಂಟಾಲ್ (ಪ್ರತಿ ಎಕರೆಗೆ 2 ಕ್ವಿಂಟಾಲ್) ಮಾತ್ರ ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ರೈತರು ಏನು ಮಾಡಬೇಕು?
ರೈತರು ಆಧಾರ್ ಕಾರ್ಡ್, ಆರ್‌ಟಿಸಿ ಎಫ್‌ಐಡಿ ಸಂಖ್ಯೆ, ಬ್ಯಾಂಕ್ ಪಾಸ್‌ಬುಕ್‌ಗಳ ಜೆರಾಕ್ಸ್ ಪ್ರತಿಗಳನ್ನು ಸಂಬಂಧಿಸಿದ ಹೆಸರು ಕೇಂದ್ರದಲ್ಲಿ ನೀಡಿ ಹೆಸರು ನೋಂದಾಯಿಸಿಕೊಂಡ ನಂತರ 3-4 ದಿನಗಳಲ್ಲಿ ಹೆಸರು ಕಾಳು ಖರೀದಿಸಲಾಗುತ್ತದೆ ಎಂದು ತಿಳಿಸಿದರು.
ಕುಂದಗೋಳ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ರಾಜು ಮಾವರಕರ ನೇತೃತ್ವದಲ್ಲಿ ಗುರುವಾರ ಸಭೆ ನಡೆಯಿತು.
20 ಕ್ವಿಂಟಾಲ್ ಖರೀದಿಗೆ ಒತ್ತಾಯ:
ಇದೇ ಸಂದರ್ಭದಲ್ಲಿ ರೈತ ಮುಖಂಡರು ತಾಲೂಕಿನ ಸಂತಿಗ್ರಾಮದಲ್ಲಿ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಬೇಕು. ಪ್ರತಿ ರೈತರಿಂದ 20 ಕ್ವಿಂಟಾಲ್ ಹೆಸರು ಖರೀದಿಸಬೇಕು ಎಂದು ತಹಸೀಲ್ದಾರ್‌ಗೆ ಮನವಿಯನ್ನೂ ಸಲ್ಲಿಸಿದರು.
ಇದನ್ನೂ ಓದಿ: Hunagund: ಇದುವೇ ಯಶಸ್ಸಿನ ಜೀವಾಳ: ಶಾಸಕ ಕಾಶಪ್ಪನವರ
ಕೃಷಿ ಸಹಾಯಕ ನಿರ್ದೇಶಕಿ ಭಾರತಿ ಮೆಣಸಿನಕಾಯಿ, ಅರವಿದಪ್ಪ ಕಟಗಿ, ಸೋಮರಾವ ದೇಸಾಯಿ, ರಮೇಶ ಕೊಪ್ಪದ, ವೈ.ಜಿ. ಪಾಟೀಲ, ಮಲ್ಲಿಕಾರ್ಜುನ ಕುನ್ನೂರ, ಮಾಣಿಕ್ಯ ಚಿಲ್ಲೂರ, ಮಾರುದ್ರಪ್ಪ ಮೂಲಿಮನಿ, ಶೇಖಪ್ಪ ಕಂಬಳಿ, ಶಂಕರಗೌಡ ದೊಡ್ಡಮನಿ, ಬಸವರಾಜ ಯೋಗಪ್ಪನವರ, ಬಾಬಾಜಾನ ಮುಲ್ಲಾ ಇತರರಿದ್ದರು.