A girl who had gone to see Ganesha was electrocuted and died

ಗಣೇಶನ ನೋಡಲು ತೆರಳಿದ್ದ ಬಾಲಕಿ ವಿದ್ಯುತ್ ಸ್ಪರ್ಶಿಸಿ ಸಾವು..!

ಗಣೇಶನ ನೋಡಲು ತೆರಳಿದ್ದ ಬಾಲಕಿ ವಿದ್ಯುತ್ ಸ್ಪರ್ಶಿಸಿ ಸಾವು..!

ದೊಡ್ಡಬಳ್ಳಾಪುರ; ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿಯನ್ನು ನೋಡಲು ತೆರಳಿದ್ದ ಬಾಲಕಿ ವಿದ್ಯುತ್ ಸ್ಪರ್ಶಿಸಿ ಸಾವನಪ್ಪಿರುವ ದುರ್ಘಟನೆ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಸಂಭವಿಸಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಮೃತ ಬಾಲಕಿಯನ್ನು ಶ್ರೀನಿವಾಸ್ ಎನ್ನುವವರ ಪುತ್ರಿ 13 ವರ್ಷದ ಚೇತನ ಎಂದು ಗುರುತಿಸಲಾಗಿದೆ.

ಭಾನುವಾರ ಬೆಳಗ್ಗೆ ಗಣೇಶ ಮೂರ್ತಿಯನ್ನು ನೋಡಲು ತೆರಳಿದ್ದ ವೇಳೆ, ವಿದ್ಯುತ್ ಅಲಂಕಾರ ಮಾಡಲು ಅಳವಡಿಸಿದ್ದ ವೈರ್ ಸ್ಕಿನ್ ಔಟ್ ಆಗಿದ್ದು, ಬಾಲಕಿ ಚೈತ್ರ ಗಮನಿಸದೆ ತುಳಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ತಿಳಿಸಿದ್ದಾರೆ.

ಕೂಡಲೇ ಬಾಲಕಿಯನ್ನು ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕುಡಿತ ಮತ್ತಿನಲ್ಲಿ ಹೆತ್ತಮ್ಮನ ಕುತ್ತಿಗೆಗೆ ಚುಚ್ಚಿ ಕೊಲೆಗೈದ ಪಾಪಿ ಮಗ..!

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Latest News

ನೀತಿ ವಿಜ್ಞಾನ ಬೋಧನೆಗೆ ನಿರ್ಧಾರ:ಮೇ.29 ರಿಂದ ಶಾಲೆಗಳು ಆರಂಭ-ಸಚಿವ ಬಂಗಾರಪ್ಪ

ನೀತಿ ವಿಜ್ಞಾನ ಬೋಧನೆಗೆ ನಿರ್ಧಾರ:ಮೇ.29 ರಿಂದ ಶಾಲೆಗಳು ಆರಂಭ-ಸಚಿವ ಬಂಗಾರಪ್ಪ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ) : ಮೇ.29 ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭಗೊಳ್ಳಲಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು

ಹೊಸ ಜೀವನ ಆರಂಭವಾಗುವ ಮೊದಲೇ, ಬದುಕಿಗೆ ಕೊನೆ ವಿದಾಯ ಹೇಳಿದ ವಿಧಿ

ಹೊಸ ಜೀವನ ಆರಂಭವಾಗುವ ಮೊದಲೇ, ಬದುಕಿಗೆ ಕೊನೆ ವಿದಾಯ ಹೇಳಿದ ವಿಧಿ

ಜಮಖಂಡಿ: ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲಿ ವರ ಸಾವನಪ್ಪಿರುವ ಘಟನೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ

ಮೇ.18 ರಂದು ಕಲ್ಯಾಣ ಮಹೋತ್ಸವ :ಪುತ್ರನ ಮದುವೆಯೊಂದಿಗೆ 46 ಜೋಡಿ ಸಾಮೂಹಿಕ ವಿವಾಹ

ಮೇ.18 ರಂದು ಕಲ್ಯಾಣ ಮಹೋತ್ಸವ :ಪುತ್ರನ ಮದುವೆಯೊಂದಿಗೆ 46 ಜೋಡಿ ಸಾಮೂಹಿಕ ವಿವಾಹ

ಮುದ್ದೇಬಿಹಾಳ : ಸಮಾಜ ಸೇವಕ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್.ಮದರಿ

ಮುದ್ದೇಬಿಹಾಳದಲ್ಲಿ ಭಾರೀ ಮಳೆ: ಶೆಡ್‌ಗೆ ನುಗ್ಗಿದ ಮಳೆ ನೀರು

ಮುದ್ದೇಬಿಹಾಳದಲ್ಲಿ ಭಾರೀ ಮಳೆ: ಶೆಡ್‌ಗೆ ನುಗ್ಗಿದ ಮಳೆ ನೀರು

ಮುದ್ದೇಬಿಹಾಳ : ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಭರ್ಜರಿ ಮಳೆ ಸುರಿಯಿತು. ಒಂದು ತಾಸಿಗೂ ಹೆಚ್ಚು

ಗ್ರಾಮದೇವತೆ ಜಾತ್ರೆ ಯಶಸ್ವಿಗೆ ಅಧಿಕಾರಿಗಳು ಕೈ ಜೋಡಿಸಿ : ಶಾಸಕ ನಾಡಗೌಡ

ಗ್ರಾಮದೇವತೆ ಜಾತ್ರೆ ಯಶಸ್ವಿಗೆ ಅಧಿಕಾರಿಗಳು ಕೈ ಜೋಡಿಸಿ : ಶಾಸಕ ನಾಡಗೌಡ

ಮುದ್ದೇಬಿಹಾಳ : ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಮುದ್ದೇಬಿಹಾಳ ಪಟ್ಟಣದಲ್ಲಿ ಮೇ.30 ರಿಂದ ಆರಂಭಗೊಳ್ಳಲಿರುವ ಗ್ರಾಮದೇವತೆ ಜಾತ್ರೆಯನ್ನು ಯಶಸ್ವಿಗೊಳಿಸಲು ತಾಲ್ಲೂಕು ಆಡಳಿತ ಸಂಪೂರ್ಣ ತೊಡಗಿಸಿಕೊಳ್ಳುವ ಮೂಲಕ ಸಹಕಾರ ನೀಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದ ದಾಸೋಹ ಭವನದಲ್ಲಿ ಮಂಗಳವಾರ ಗ್ರಾಮದೇವತೆ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಇದು ಸಾರ್ವತ್ರಿಕವಾಗಿ ಎಲ್ಲ ಧರ್ಮೀಯರು ಸೇರಿಕೊಂಡು ಮಾಡುವ ಜಾತ್ರೆಯಾಗಿದ್ದು ಸರ್ಕಾರ ಎಂದರೆ ಸಾರ್ವಜನಿಕರು, ಸಾರ್ವಜನಿಕರೆಂದರೆ ಸರ್ಕಾರ

ಸಿಡಿಲು ಬಡಿದು ರೈತ ಸಾವು

ಸಿಡಿಲು ಬಡಿದು ರೈತ ಸಾವು

ಮುದ್ದೇಬಿಹಾಳ : ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ರೈತ ಮಲ್ಲಪ್ಪ ಗುರುಶಾಂತಪ್ಪ ತಾಳಿಕೋಟಿ(47) ಹೊಲಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ. ಹೊಲದಲ್ಲಿದ್ದ ಹುಣಸೆ ಮರದ ಕೆಳಗಡೆ ಆಶ್ರಯ ಪಡೆದುಕೊಂಡಾಗ ಸಿಡಿಲು ಬಡಿದು ರೈತ ಸ್ಥಳದಲ್ಲೇ ಅಸುನೀಗಿದ್ದಾನೆ. ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ, ನೇಬಗೇರಿ, ಗೆದ್ದಲಮರಿ, ಶಿರೋಳ, ಮುದ್ನಾಳ, ಮುದ್ದೇಬಿಹಾಳ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ