ಕುಂಟೋಜಿ ಪೈಲ್ವಾನ್ ಶ್ರೀಕಾಂತ ಇನ್ನಿಲ್ಲ

ಕುಂಟೋಜಿ ಪೈಲ್ವಾನ್ ಶ್ರೀಕಾಂತ ಇನ್ನಿಲ್ಲ

ಮುದ್ದೇಬಿಹಾಳ : ರಾಜ್ಯ, ಅಂತರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದ ತಾಲ್ಲೂಕಿನ ಕುಂಟೋಜಿ ಗ್ರಾಮದ ಪೈಲ್ವಾನ್ ಶ್ರೀಕಾಂತ ವಾಲಪ್ಪ ನಾಯಕ(33) ಹೃದಯಾಘಾತದಿಂದ ಗುರುವಾರ ಅಸುನೀಗಿದ್ದಾರೆ.

ತಾಲ್ಲೂಕಿನ ಹಗರಗುಂಡ ತಾಂಡಾಕ್ಕೆ ತಮ್ಮ ಸಂಬಂಧಿಕರನ್ನು ಬಿಟ್ಟು ಬರಲು ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.ಶ್ರೀಕಾಂತ ಅವರು, ಜಾತ್ರೆ, ಉತ್ಸವಗಳಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆಂದರೆ ಅಲ್ಲಿ ಪ್ರಥಮ ಬಹುಮಾನ ಅವರಿಗೆ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿತ್ತು.

230ಕೆಜಿ ತೂಕದ ಉಸುಕಿನ ಚೀಲ ಎತ್ತುವ ಮೂಲಕ ಕರ್ನಾಟಕದಲ್ಲೇ ವಿಶೇಷ ಸ್ಥಾನವನ್ನು ಅವರು ಪಡೆದಿದ್ದರು ಎಂದು ಅವರ ಸ್ನೇಹಿತ ಶಿವರಾಜ ನಾಗೂರ ತಿಳಿಸಿದರು. ಶ್ರೀಕಾಂತ ಅವರಿಗೆ ಪತ್ನಿ,ಪುತ್ರ,ಪುತ್ರಿ ಇದ್ದಾರೆ.

ಅವರ ಅಂತ್ಯಕ್ರಿಯೆ ಜು.26 ರಂದು ಕುಂಟೋಜಿಯಲ್ಲಿ ನಡೆಯಲಿದೆ.

Latest News

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ.

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ:                                       ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ: ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಮುದ್ದೇಬಿಹಾಳ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಈ ಭಾಗದಲ್ಲೂ ಎಫೆಕ್ಟ್ ಆಗಿದ್ದು ಡಿಸೇಲ್,ಪೆಟ್ರೋಲ್‌ಗಾಗಿ ಗ್ರಾಹಕರು

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಎಂ.ಬಿ.ಎಲ್.ಗ್ರೂಪ್ ನಿಂದ ಆಯೋಜಿಸಿದ್ದ ಹಾರ್ಡ್ ಟೆನ್ನಿಸ್

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ:            ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸನ್ 2026-31ನೇ ಅವಧಿಗೆ ತಾಲ್ಲೂಕಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಬಿ.ಎಚ್.ಮುದ್ನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ನಾಗಪ್ಪ ತುರಡಗಿ,ಖಜಾಂಚಿಯಾಗಿ ಭರತೇಶ ಹೊಳಿ, ಉಪಾಧ್ಯಕ್ಷರಾಗಿ ಶಾಂತಪ್ಪ ಬಿರಾದಾರ,ರೇಣುಕಾ ಹಿರೇಮಠ,ಸಹ ಕಾರ್ಯದರ್ಶಿಯಾಗಿ ಈರಯ್ಯ ಹಿರೇಮಠ,ಶೈಲಾ ಗೊಂಗಡಿ,ಸAಘಟನಾ ಕಾರ್ಯದರ್ಶಿಗಳಾಗಿ ಬಸನಗೌಡ ಭಗವತಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಸ್.ಕವಡಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಲು ಆಗ್ರಹಿಸಿ ಜೂನ್ ಮೊದಲ ವಾರದಿಂದ ನಾಗರಬೆಟ್ಟದಲ್ಲಿ ರೈತರೊಡಗೂಡಿ ಹೋರಾಟ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ತಾಲ್ಲೂಕಿನ ನಾಗರಬೆಟ್ಟದ ಮಾರುತೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ದಶಕದಿಂದ ಈ ನೀರಾವರಿ ಯೋಜನೆಯಡಿ ಹೊಲಗಳಿಗೆ ನೀರು ಹರಿದಿಲ್ಲ.ರಾಜಕಾರಣಿಗಳ