ಸಮಾಜಕ್ಕೆ ಡಿಜಿಟಲ್ ಮಾಧ್ಯಮದಿಂದ ನ್ಯಾಯಾಂಗ ಸೇವೆ-ನ್ಯಾ.ಇ.ಎಸ್.ಇಂದಿರೇಶ್

ಸಮಾಜಕ್ಕೆ ಡಿಜಿಟಲ್ ಮಾಧ್ಯಮದಿಂದ ನ್ಯಾಯಾಂಗ ಸೇವೆ-ನ್ಯಾ.ಇ.ಎಸ್.ಇಂದಿರೇಶ್

ಮುದ್ದೇಬಿಹಾಳ : ನ್ಯಾಯಾಂಗ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದು ಸಮಾಜಕ್ಕೆ ನ್ಯಾಯಾಲಯದ ವಿವಿಧ ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ತಲುಪಿಸುವ ಮಹತ್ವದ ಉದ್ದೇಶವನ್ನು ಇ-ಸೇವಾ ಕೇಂದ್ರ ಹೊಂದಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ವಿಜಯಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜಿಲ್ಲಾ ನ್ಯಾಯಾಂಗ ವಿಜಯಪುರ ಮತ್ತು ನ್ಯಾಯವಾದಿಗಳ ಸಂಘ ಮುದ್ದೇಬಿಹಾಳ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿದ ಇ-ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಇ-ಸೇವಾ ಕೇಂದ್ರದಿoದ ಪ್ರಕರಣಗಳ ಸ್ಥಿತಿ, ಮುಂದಿನ ವಿಚಾರಣೆಯ ದಿನಾಂಕ, ಆದೇಶ ಪ್ರತಿಗಳು, ತೀರ್ಪುಗಳ ಮಾಹಿತಿ, ಅರ್ಜಿ ಸಲ್ಲಿಕೆ ಸೇರಿದಂತೆ ಹಲವು ಸೇವೆಗಳನ್ನು ಸಾರ್ವಜನಿಕರು ಸುಲಭವಾಗಿ ಪಡೆಯಬಹುದು.ಸಂವಿಧಾನದ ಆಶಯದಂತೆ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಬೇಕು ಎಂದರು.

ವಿಜಯಪುರ ಜಿಲ್ಲಾ ಸತ್ರ ನ್ಯಾಯಾಧೀಶ ಹರೀಶ್ ಎ. ಮಾತನಾಡಿ, ಇ-ಸೇವಾ ಕೇಂದ್ರ ನ್ಯಾಯಾಲಯದ ಹೃದಯವಿದ್ದಂತೆ. ಇ-ಸೇವಾ ಕೇಂದ್ರದ ಮೂಲಕ ವ್ಯಾಜ್ಯದಾರರು ತಮ್ಮ ಪ್ರಕರಣದ ಪ್ರಸ್ತುತ ಸ್ಥಿತಿ, ಮುಂದಿನ ವಿಚಾರಣೆಯ ದಿನಾಂಕ ಹಾಗೂ ಇತರೆ ಪ್ರಮುಖ ವಿವರಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದರು.

ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಪ್ರಾಸ್ತಾವಿಕ ಮಾತನಾಡಿ,ಜೈಲಿನಲ್ಲಿರುವ ಸಂಬoಧಿಕರನ್ನು ಭೇಟಿಯಾಗಲು ಅಪಾಯಿಂಟ್‌ಮೆoಟ್ ಬುಕ್ ಮಾಡಲು ಹಾಗೂ ಉಚಿತ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಲು ಮಾಹಿತಿ ಸಿಗುತ್ತದೆ.ಮುದ್ದೇಬಿಹಾಳ ದಿವಾಣಿ ನ್ಯಾಯಲಯ ಸ್ಥಾಪನೆ ಮತ್ತು ತಾಳಿಕೋಟೆ ತಾಲ್ಲೂಕಿನಲ್ಲಿ ಪೂರ್ಣ ಪ್ರಮಾಣದ ನ್ಯಾಯಾಲಯ ಸ್ಥಾಪಿಸಲು ನ್ಯಾಯಮೂರ್ತಿಗಳಲ್ಲಿ ವಿನಂತಿಸಿದರು.

ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಸಚಿನ್ ಕೌಶಿಕ್ ಆರ್.ಎನ್ , ಹಿರಿಯ ದಿವಾಣಿ ಹಾಗೂ ಜೆಎಂಎಫ್‌ಸಿ ನ್ಯಾಯಧೀಶ ರವೀಂದ್ರಕುಮಾರ ಕಟ್ಡಿಮನಿ, ದಿವಾಣಿ ಹಾಗೂ ಜೆಎಂಎಫ್‌ಸಿ ನ್ಯಾಯದೀಶ ರಾಮಮೂರ್ತಿ ಆರ್.ಎನ್, ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಪಿ.ಬಿ. ಗೌಡರ, ಬಿ.ಪಿ ಮ್ಯಾಗೇರಿ,ಖಜಾಂಚಿ ಎಸ್.ಈ.ಹಿರೇಮಠ ಸೇರಿದಂತೆ ಜಿಲ್ಲಾ ಮತ್ತು ತಾಲೂಕುಗಳ ನ್ಯಾಯವಾದಿ ಸಂಘಗಳ ಅಧ್ಯಕ್ಷರು, ಹಿರಿಯ ಹಾಗೂ ಯುವ ನ್ಯಾಯವಾದಿಗಳು, ಕ್ಷಕ್ಷಿದಾರರು ಸಾರ್ವಜನಿಕರು, ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನ್ಯಾಯವಾದಿ ಸಂಘದ ಉಪಾಧ್ಯಕ್ಷ ಎಚ್.ಎ.ನಾಗೋಡ ಸ್ವಾಗತಿಸಿದರು. ನ್ಯಾಯವಾದಿ ಎನ್.ಆರ್. ಮೊಕಾಶಿ, ಶಿಕ್ಷಕ ಎಂ.ಬಿ ಗುಡಗುಂಟಿ ನಿರೂಪಿಸಿದರು.ಸಂಗಮೇಶ ಶಿವಣಗಿ ಗಾಯನ ಬಳಗದಿಂದ ವಂದೇಮಾತರo ಹಾಗೂ ನಾಡಗೀತೆ ಹಾಡಿದರು.

Latest News

ಸುಣಕಲ್‌ನ ಆರ್.ಬಿ.ಶುಗರ‍್ಸ; ಇನ್ನೂ ಆರಂಭವಾಗದ ಕಬ್ಬು ನುರಿಸುವ ಕಾರ್ಯ

ಸುಣಕಲ್‌ನ ಆರ್.ಬಿ.ಶುಗರ‍್ಸ; ಇನ್ನೂ ಆರಂಭವಾಗದ ಕಬ್ಬು ನುರಿಸುವ ಕಾರ್ಯ

ಮುದ್ದೇಬಿಹಾಳ : ಪಕ್ಕದ ಲಿಂಗಸ್ಗೂರು ತಾಲ್ಲೂಕಿನ ಸುಣಕಲ್‌ನಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ನೇತೃತ್ವದಲ್ಲಿ

ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿ-ಡಿವೈಎಸ್ಪಿ ನಂದರೆಡ್ಡಿ

ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿ-ಡಿವೈಎಸ್ಪಿ ನಂದರೆಡ್ಡಿ

ಮುದ್ದೇಬಿಹಾಳ : ಮಕ್ಕಳನ್ನು ಶೈಕ್ಷಣಿಕವಾಗಿ ಸದೃಢಗೊಳಿಸುವುದರ ಜೊತೆಗೆ ದೈಹಿಕವಾಗಿಯೂ ಸದೃಢಗೊಳಿಸಲು ಕ್ರೀಡೆಗಳು ಮುಖ್ಯ. ಕ್ರೀಡೆಗಳಲ್ಲಿ

ಆರ್.ಬಿ. ಶುಗರ್ಸ್’ರಿಂದ ಕಬ್ಬು ದರ ಘೋಷಣೆಗೆ ಆಗ್ರಹ:             ದರ ಪ್ರಕಟಿಸದೆ ಕಬ್ಬು ನುರಿಸುವ ಕಾರ್ಯ ಆರಂಭ ; ರೈತರಲ್ಲಿ ಆತಂಕ

ಆರ್.ಬಿ. ಶುಗರ್ಸ್’ರಿಂದ ಕಬ್ಬು ದರ ಘೋಷಣೆಗೆ ಆಗ್ರಹ: ದರ ಪ್ರಕಟಿಸದೆ ಕಬ್ಬು ನುರಿಸುವ ಕಾರ್ಯ ಆರಂಭ ; ರೈತರಲ್ಲಿ ಆತಂಕ

ತಾಳಿಕೋಟಿ : ಮುದ್ದೇಬಿಹಾಳ ತಾಲ್ಲೂಕಿನ ಹಲವು ರೈತರು ರಾಯಚೂರು ಜಿಲ್ಲೆಯಲ್ಲಿರುವ ಆರ್.ಬಿ. ಶುಗರ್ಸ್ ಕಾರ್ಖಾನೆಗೆ

ಫಲ ನೀಡಿದ ಶಾಸಕರ ಪತ್ರ ವ್ಯವಹಾರ :                                   ಒಣಗುವ ಮೆಣಸಿಣಕಾಯಿ ಬೆಳೆಗೆ ಎಎಲ್‌ಬಿಸಿ ಕಾಲುವೆ ನೀರು

ಫಲ ನೀಡಿದ ಶಾಸಕರ ಪತ್ರ ವ್ಯವಹಾರ : ಒಣಗುವ ಮೆಣಸಿಣಕಾಯಿ ಬೆಳೆಗೆ ಎಎಲ್‌ಬಿಸಿ ಕಾಲುವೆ ನೀರು

ಮುದ್ದೇಬಿಹಾಳ : ಆಲಮಟ್ಟಿ ನೀರಾವರಿ ಸಲಹಾ ಸಮೀತಿ ಅಧ್ಯಕ್ಷ,ಸಚಿವ ವಿಜಯಾನಂದ ಕಾಶಪ್ಪನವರ ಹಾಗೂ ಸಂಬoಧಿಸಿದ

ಮುದ್ದೇಬಿಹಾಳ : ನ.25 ರಂದು ಬೃಹತ್ ರಕ್ತದಾನ ಶಿಬಿರ

ಮುದ್ದೇಬಿಹಾಳ : ನ.25 ರಂದು ಬೃಹತ್ ರಕ್ತದಾನ ಶಿಬಿರ

ಮುದ್ದೇಬಿಹಾಳ : ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ನ.25ರಂದು ಬೆಳಿಗ್ಗೆ 9:30 ಗಂಟೆಗೆ ಮುದ್ದೇಬಿಹಾಳದ ಎಂ.ಜಿ.ವಿ.ಸಿ ಮಹಾವಿದ್ಯಾಲಯದಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವಿಜಯಪುರ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ತಾಲೂಕು ಸಾರ್ವಜನಿಕ ಆಸ್ಪತ್ರೆ ಮುದ್ದೇಬಿಹಾಳ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ವಿಜಯಪುರ, ಎಂ.ಜಿ.ವಿ.ಸಿ ಮಹಾವಿದ್ಯಾಲಯ ಹಾಗೂ ನಗರದ

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ:                                 ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ: ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ವಿಶೇಷ ವರದಿ : ಶಂಕರ್ ಹೆಬ್ಬಾಳ ಮುದ್ದೇಬಿಹಾಳ : ಹಲವು ಆಶಾಭಾವನೆ ಹಾಗೂ ಭರವಸೆಗಳೊಂದಿಗೆ ಆರಂಭಗೊoಡಿರುವ ಲಿಂಗಸುಗೂರು ತಾಲ್ಲೂಕಿನ ಸುಣಕಲ್‌ನಲ್ಲಿರುವ ಮಾಜಿ ಸಚಿವ ಆರ್.ಬಿ. ತಿಮ್ಮಾಪೂರ ಒಡೆತನದ ಆರ್.ಬಿ. ಶುಗರ್ಸ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಆದರೆ ಕಾರ್ಖಾನೆ ಆರಂಭವಾಗಿ ಕಬ್ಬು ನುರಿಸುವಿಕೆ ಪ್ರಗತಿಯಲ್ಲಿದ್ದರೂ ಟನ್ ಕಬ್ಬಿಗೆ ಎಷ್ಟು ದರ ನೀಡಲಾಗುತ್ತದೆ ಎಂಬುದನ್ನು ಆಡಳಿತ ಮಂಡಳಿ ಈವರೆಗೂ ಅಧಿಕೃತವಾಗಿ ಘೋಷಿಸದಿರುವುದು ಕಬ್ಬು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಮುದ್ದೇಬಿಹಾಳ