26ರೊಳಗೆ ಬಾಕಿ ನೀಡಬೇಕು : ಕಾರ್ಖಾನೆಗಳಿಗೆ ರೈತರ ಗಡವು

26ರೊಳಗೆ ಬಾಕಿ ನೀಡಬೇಕು : ಕಾರ್ಖಾನೆಗಳಿಗೆ ರೈತರ ಗಡವು

Ad
Ad

ಮುಧೋಳ : ಅ.26ರೊಳಗೆ ಎಲ್ಲ ಕಾರ್ಖಾನೆಗಳು 2022ರ ಹೆಚ್ಚುವರಿ 62ರೂ. ಬಾಕಿ ಹಣವನ್ನು ನೀಡಬೇಕು ಎಂದು ರೈತಮುಖಂಡರು ಬುಧವಾರ ನಡೆದ ಸಭೆಯಲ್ಲಿ ಕಾರ್ಖಾನೆಗಳಿಗೆ ಗಡವು ನೀಡಿದರು.
ನಗರದ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕೆಲ ನಿರ್ಣಯ ಕೈಗೊಂಡ ರೈತರು 2022ರ ಸಾಲಿನ ಹೆಚ್ಚುವರಿಯಾಗಿ ಪ್ರತಿ ಟನಗೆ ನೀಡಬೇಕಿದ್ದ 62 ರೂ.ವನ್ನು ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ಪಾವತಿಸಿದ್ದಾರೆ. ಇನ್ನುಳಿದ ಕಾರ್ಖಾನೆಯವರು ಶೀಘ್ರವೇ ಬಾಕಿ ಪಾವತಿಸಬೇಕು ಎಂದು ಸಭೆಯ ಮೂಲಕ‌ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಸಂದೇಶ ರವಾಣಿಸಿದರು.
ಒಂದು ವೇಳೆ ಬಾಕಿ ಹಣ ನೀಡದೆ ಇದ್ದರೆ 26ರಂದು ಮುಂದಿನ ಹೋರಾಟದ ರೂಪರೇಷೆಗಳ ಮತ್ತೊಂದು ಸುತ್ತಿನ ಸಭೆ ಸೇರೋಣ ಎಂದು ನಿರ್ಧರಿಸಿದರು.
ಸಭೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿ ಮಾಡುವ ಕುರಿತು ಚರ್ಚಿಸಲಾಯಿತು.

Ad
Ad

ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೊಮ್ಮಾರ. ಹನಮಂತ ನಬಾಬ. ಸುರೇಶ ಚಿಂಚಲಿ. ನಾಗೇಶ ಗೊಲಶೇಟ್ಟಿ. ಸುಭಾಸ ಶಿರಬೂರ. ಮಹೇಶಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

Latest News

ಎನ್.ಎಸ್.ಎಸ್ ಶಿಬಿರ ಸಮಾರೋಪ:ಯೋಜನೆಗಳ ಯಶಸ್ವಿಗೆ ಸಮಾಜದ ಸಹಭಾಗಿತ್ವ ಅಗತ್ಯ-ಪಾಟೀಲ್

ಎನ್.ಎಸ್.ಎಸ್ ಶಿಬಿರ ಸಮಾರೋಪ:ಯೋಜನೆಗಳ ಯಶಸ್ವಿಗೆ ಸಮಾಜದ ಸಹಭಾಗಿತ್ವ ಅಗತ್ಯ-ಪಾಟೀಲ್

ಮುದ್ದೇಬಿಹಾಳ : ಸರ್ಕಾರಗಳು ಜಾರಿಗೊಳಿಸುವ ಜನಪರ ಯೋಜನೆಗಳ ಯಶಸ್ವಿಗೆ ಸಮಾಜದ ಸಹಕಾರ ಅತ್ಯಗತ್ಯ ಎಂದು

ನಾರಾಯಣಪುರ ಪೊಲೀಸ್ ಠಾಣೆ ಮುಂದೆ ವ್ಯಕ್ತಿಯ ಶವವಿಟ್ಟು ಪ್ರತಿಭಟನೆ

ನಾರಾಯಣಪುರ ಪೊಲೀಸ್ ಠಾಣೆ ಮುಂದೆ ವ್ಯಕ್ತಿಯ ಶವವಿಟ್ಟು ಪ್ರತಿಭಟನೆ

ಹುಣಸಗಿ: ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆ ಮುಂದೆ ವ್ಯಕ್ತಿಯ ಶವವಿಟ್ಟು ಜೋಗಂಡಬಾವಿ ಗ್ರಾಮಸ್ಥರು ಪ್ರತಿಭಟನೆ

ಮಳೆಯಿಂದ ಪಂದ್ಯ ರದ್ದು: ಕೋಲ್ಕತ್ತಾ ಪ್ಲೇ ಆಫ್ ಹಾದಿ ಕಠಿಣ

ಮಳೆಯಿಂದ ಪಂದ್ಯ ರದ್ದು: ಕೋಲ್ಕತ್ತಾ ಪ್ಲೇ ಆಫ್ ಹಾದಿ ಕಠಿಣ

ಕೋಲ್ಕತ್ತಾ: ಮಳೆಯಿಂದ ಪಂಜಾಬ್ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳಿಗೂ

ಯುಪಿಎಸ್‌ಸಿ ಟಾಪರ್‌ಗೆ ಸನ್ಮಾನ

ಯುಪಿಎಸ್‌ಸಿ ಟಾಪರ್‌ಗೆ ಸನ್ಮಾನ

ಮುದ್ದೇಬಿಹಾಳ : ಯುಪಿಎಸ್ಸಿ ಪರೀಕ್ಷೆಯಲ್ಲಿ ಪಟ್ಟಣದ ಯುವಕ ರಾಹುಲ್ ಯರಂತೇಲಿ 462ನೇ ರ‍್ಯಾಂಕ್ ಪಡೆದುಕೊಂಡ

ಗ್ರಾಮ ಪಂಚಾಯತ್ ಉಪ ಚುನಾವಣೆ : ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಗ್ರಾಮ ಪಂಚಾಯತ್ ಉಪ ಚುನಾವಣೆ : ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯದ 265 ಗ್ರಾಮ ಪಂಚಾಯತ್ ಸ್ಥಾನಗಳ ಉಪ‌ ಚುನಾವಣೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದೆ. ಮೇ 25 ರಂದು ಮತದಾನ ನಡೆಯಲಿದ್ದು, 28 ರಂದು ಮತ ಎಣಿಕೆ ನಡೆಯಲಿದೆ. ಮೇ 11 ರಂದು ನಡಯಬೇಕಿದ್ದ ಮತದಾನವನ್ನು ರಾಜ್ಯ ಸರ್ಕಾರದ ಮನವಿಯ ಮೇರೆಗೆ ಚುನಾವಣಾ ಆಯೋಗ ಮೂಂದುಡಿದೆ. ಈಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದೆ. ಮೇ 8 ರಂದು ಉಪಚುನಾವಣೆಯ ಅಧಿಸೂಚನೆ ಪ್ರಕಟಿಸಲಿದ್ದು, ಮೇ 14ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಎಸ್.ಆರ್.ಎಚ್ ವಿರುದ್ಧ ಸೋತ ಚೆನ್ನೈ ಟೂರ್ನಿಯಿಂದ ಔಟ್..!

ಎಸ್.ಆರ್.ಎಚ್ ವಿರುದ್ಧ ಸೋತ ಚೆನ್ನೈ ಟೂರ್ನಿಯಿಂದ ಔಟ್..!

ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸಿ.ಎಸ್.ಕೆ ಹಾಗೂ ಎಸ್.ಆರ್.ಎಚ್ ತಂಡಗಳ ನಡುವಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ 5 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ 19.5 ಓವರ್‌ಗಳಲ್ಲಿ 154 ರನ್‌ಗಳಿಗೆ ಸರ್ವಪತನ ಕಂಡಿತ್ತು. ಹೈದರಾಬಾದ್‌ ತಂಡಕ್ಕೆ ಗೆಲ್ಲಲು 155 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್‌ 18.4 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 155 ರನ್‌ ಕಲೆಹಾಕಿತು.