ಕುಡಿವ ನೀರು ಪೂರೈಸುವ ವಾಲ್ವ್ ನಲ್ಲಿ ಕೊಳೆತ ನಾಯಿ ಕಳೆಬರ ಪತ್ತೆ-ಗ್ರಾಮಸ್ಥರಲ್ಲಿ ಆತಂಕ

ಕುಡಿವ ನೀರು ಪೂರೈಸುವ ವಾಲ್ವ್ ನಲ್ಲಿ ಕೊಳೆತ ನಾಯಿ ಕಳೆಬರ ಪತ್ತೆ-ಗ್ರಾಮಸ್ಥರಲ್ಲಿ ಆತಂಕ

ಮುದ್ದೇಬಿಹಾಳ : ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮಕ್ಕೆ ಕುಡಿವ ನೀರು ಪೂರೈಸುವ ವಾಲ್ವ್ ಒಂದರಲ್ಲಿ ಸತ್ತಿರುವ ನಾಯಿಯ ಕೊಳೆತ ಕಳೆಬರ ಪತ್ತೆಯಾಗಿದ್ದು ನೀರು ಕುಡಿದಿರುವ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದೆ.

ತಾಲ್ಲೂಕಿನ ಇಂಗಳಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಜಮ್ಮಲದಿನ್ನಿ ಗ್ರಾಮಕ್ಕೆ ಜೆ.ಜೆ.ಎಂ ಕಾಮಗಾರಿಯಡಿ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ.ಕಳೆದ ಹದಿನೈದು ದಿನಗಳ ಹಿಂದೆಯೇ ನಾಯಿ ಸತ್ತು ಬಿದ್ದಿರುವ ಅನುಮಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಅದೇ ನೀರನ್ನು ಸೇವನೆ ಮಾಡಿದ್ದಾರೆ.ಇದರಿಂದ 8-10 ಜನರಿಗೆ ವಾಂತಿ ಬೇಧಿ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಜಮ್ಮಲದಿನ್ನಿ ಗ್ರಾಮಕ್ಕೆ ಕುಡಿವ ನೀರು ಪೂರೈಸುವ ಜಮ್ಮಲದಿನ್ನಿ ಕ್ರಾಸ್ ಬಳಿ ಇರುವ ವಾಲ್ ನಲ್ಲಿ ನಾಯಿ ಸತ್ತು ಬಿದ್ದಿದೆ.ಇದನ್ನು ಗಮನಿಸದೇ ವಾಟರ್ ಮನ್, ಪಂಚಾಯಿತಿ ಅಧಿಕಾರಿಗಳು ನೀರು ಪೂರೈಸಿದ್ದಾರೆ.ಇದರಿಂದ ಗ್ರಾಮದಲ್ಲಿ ಈ ನೀರು ಕುಡಿದಿರುವ ಹಲವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿದ್ದು ಆಸ್ಪತ್ರೆ ಸೇರಿದ್ದಾರೆ. ಆದರೆ ಸಂಬಂಧಿಸಿದ ಗ್ರಾಪಂ ಪಿಡಿಒ, ಅಧ್ಯಕ್ಷರು, ವಾಟರಮನ್ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಲ್ಲದೇ ಆರೋಗ್ಯ ಇಲಾಖೆಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಅಯ್ಯಪ್ಪ ಇಚಲಾಳ, ಆನಂದ ಮಂಗ್ಯಾಳ, ಸಂಗಣ್ಣ ನಾಗಾವಿ, ಬಸನಗೌಡ ಬಿರಾದಾರ, ಬಸವರಾಜ ಮಂಗ್ಯಾಳ ದೂರಿದ್ದಾರೆ.
ಈ ಕಲುಷಿತ ನೀರು ಕುಡಿದ ಗ್ರಾಮಸ್ಥರಿಗೆ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಅದಕ್ಕೆ ಪಂಚಾಯಿತಿ ಅಧ್ಯಕ್ಷ,ಪಿಡಿಒ,ವಾಟರಮನ್ ಹೊಣೆಗಾರಾಗುತ್ತಾರೆ ಎಂದು ತಿಳಿಸಿದ್ದಾರೆ.

ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಮಲ್ಲಪ್ಪ ಹಿರೇಕುರಬರ, ಪ್ರಭು ನಾಗಾವಿ, ಶ್ರೀಕಾಂತ ಗಬಸಾವಳಗಿ, ಸಿದ್ದಲಿಂಗಯ್ಯ ನಿಡಗುಂದಿಮಠ , ಯಲ್ಲಪ್ಪ ಸರೂರ, ಶ್ರೀಶೈಲ್ ಬಿರಾದಾರ, ದೇಸು ಮಾಲಗತ್ತಿ, ಚೆನ್ನಪ್ಪ ಹಾದಿಮನಿ, ಚಂದ್ರಶೇಖರ ತಳವಾರ ಆಗ್ರಹಿಸಿದ್ದಾರೆ.

ಕೊಳೆತ ನಾಯಿಯ ಕಳೆಬರ ಪತ್ತೆಯಾಗಿದ್ದರೂ ಸಂಬಂಧಿಸಿದ ಪಂಚಾಯಿತಿ ನೀರು ಪೂರೈಕೆ ಸಿಬ್ಬಂದಿ ಗಮನಿಸದೇ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ

.

Latest News

ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ವೈದ್ಯರ ಸೂಚನೆ : ಉಲ್ಬಣಗೊಂಡ ನೆಗಡಿ,ಕೆಮ್ಮು,ಜ್ವರ : ದಿನಕ್ಕೆ 600 ಜನರ ತಪಾಸಣೆ

ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ವೈದ್ಯರ ಸೂಚನೆ : ಉಲ್ಬಣಗೊಂಡ ನೆಗಡಿ,ಕೆಮ್ಮು,ಜ್ವರ : ದಿನಕ್ಕೆ 600 ಜನರ ತಪಾಸಣೆ

ಮುದ್ದೇಬಿಹಾಳ : ಹೆಚ್ಚುತ್ತಿರುವ ಶೀತಗಾಳಿ,ಜ್ವರದಿಂದ ಮಕ್ಕಳು,ವೃದ್ಧರು,ಮಹಿಳೆಯರಲ್ಲಿ ನೆಗಡಿ,ಕೆಮ್ಮು,ಜ್ವರ ಉಲ್ಬಣಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಲು

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಮುಖ್ಯಮಂತ್ರಿ,  ಉಪ ಮುಖ್ಯಮಂತ್ರಿಗಳಿಂದ ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ವಿಜಯಪುರ : ಬಸ್ ನಿಲ್ದಾಣದ

ಪಿಪಿಪಿ ಮೆಡಿಕಲ್ ಕಾಲೇಜು ವಿರೋಧಿಸಿದ್ದವರ ಬಂಧನ-ಬಿಡುಗಡೆಗೆ ಆಗ್ರಹ

ಪಿಪಿಪಿ ಮೆಡಿಕಲ್ ಕಾಲೇಜು ವಿರೋಧಿಸಿದ್ದವರ ಬಂಧನ-ಬಿಡುಗಡೆಗೆ ಆಗ್ರಹ

ಮುದ್ದೇಬಿಹಾಳ : ಜಿಲ್ಲೆಯಲ್ಲಿ ಖಾಸಗಿ ಸ್ವಾಮ್ಯದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸದೇ ಸರ್ಕಾರಿ ಸ್ವಾಮ್ಯದಲ್ಲಿ ಮೆಡಿಕಲ್

ಮಹಿಳೆಯರು ಹಿಂದೂ ಸಮ್ಮೇಳನ ಯಶಸ್ವಿಗೊಳಿಸಿ-ಕಾಶೀಬಾಯಿ ರಾಂಪೂರ

ಮಹಿಳೆಯರು ಹಿಂದೂ ಸಮ್ಮೇಳನ ಯಶಸ್ವಿಗೊಳಿಸಿ-ಕಾಶೀಬಾಯಿ ರಾಂಪೂರ

ಮುದ್ದೇಬಿಹಾಳ : ಪಟ್ಟಣದಲ್ಲಿ ಜ.11 ರಂದು ನಡೆಯಲಿರುವ ಹಿಂದೂ ಮಹಾ ಸಮ್ಮೇಳನ ಯಶಸ್ವಿಗೊಳಿಸುವಂತೆ ವೀರಶೈವ

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ:                       ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ: ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಮುದ್ದೇಬಿಹಾಳ : ಇದೇ ಪ್ರಥಮ ಬಾರಿಗೆ ಲಿಂಗಸುಗೂರಿನಲ್ಲಿ ಜ.11 ರಂದು ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಕಾಲೇಜಿನಿಂದ ಮಾಸ್ಟರ್ ಮೈಂಡ್ ಆವಾರ್ಡ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಎಂ.ಪಾಟೀಲ ತಿಳಿಸಿದ್ದಾರೆ. ಪರೀಕ್ಷೆಯನ್ನು 10ನೇ ತರಗತಿ ಸ್ಟೇಟ್ ಬೋರ್ಡ್,ಐಸಿಎಸ್‌ಇ,ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪರೀಕ್ಷೆ ತಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ 50 ಸಾವಿರ,ದ್ವಿತೀಯ ಸ್ಥಾನ 40 ಸಾವಿರ, ಮೂರನೇ ಸ್ಥಾನ

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಮುದ್ದೇಬಿಹಾಳ : ಸನ್ 2025-26ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ರೈತರು ಹೊಲಗಳಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಮುದ್ದೇಬಿಹಾಳ,ನಾಲತವಾಡ,ಢವಳಗಿ ಹಾಗೂ ತಾಳಿಕೋಟಿ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.