ಕುಂಟೋಜಿ,ಬಿದರಕುಂದಿ ರೈತರಿಂದ ಪ್ರತಿಭಟನೆ: 380 ಎಕರೆ ಜಮೀನಿನ ಮೇಲೆ ವಕ್ಭ್ ಬೋರ್ಡ್ ಹೆಸರು ದಾಖಲು

ಕುಂಟೋಜಿ,ಬಿದರಕುಂದಿ ರೈತರಿಂದ ಪ್ರತಿಭಟನೆ: 380 ಎಕರೆ ಜಮೀನಿನ ಮೇಲೆ ವಕ್ಭ್ ಬೋರ್ಡ್ ಹೆಸರು ದಾಖಲು



ಮುದ್ದೇಬಿಹಾಳ : ಕೆಲವು ಸರ್ವೆಗಳ ಜಮೀನಿನ ಮೇಲೆ ದಾಖಲಾಗಿರುವ ವಕ್ಭ್ ಮಂಡಳಿ, ಕರ್ನಾಟಕ ಸರ್ಕಾರ ಹೆಸರನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಕುಂಟೋಜಿ, ಬಿದರಕುಂದಿ ಗ್ರಾಮದ ರೈತರು ರೈತಪರ ಸಂಘಟನೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಹಾಯ್ದು ತಹಶೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿದರು.ಈ ವೇಳೆ ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿ, ಕುಂಟೋಜಿ ಸರ್ವೆ ನಂಬರ್ 277, 278,279,289, 290,291, 300,301, 303, 304, 305, 311, 312, 313, 466/2ರಲ್ಲಿ ಅಂದಾಜು 380 ಎಕರೆ ಜಮೀನುಗಳನ್ನು ಕೆಲವರು ಖರೀದಿ ಮಾಡಿದ್ದು ಇನ್ನು ಕೆಲವರ ಆಸ್ತಿಗಳು ಪಿತ್ರಾರ್ಜಿತ ಆಸ್ತಿಗಳಿವೆ. ಈ ರೀತಿಯ ಜಮೀನುಗಳಲ್ಲಿ 2019 ಜನವೇರಿಯಲ್ಲಿ ವಕ್ಬ್ ಆಸ್ತಿ ಕರ್ನಾಟಕ ಸರಕಾರ ಅಂತ 11ನೇ ಕಾಲಂನಲ್ಲಿ ನಮೂದಿಸಲಾಗಿದೆ.ಇದರಿಂದ ಸರ್ಕಾರ ಯಾವುದೇ ಸೌಲಭ್ಯ, ಸಾಲ ಪಡೆದುಕೊಳ್ಳುವುದಕ್ಕೆ ನಮಗೆ ತೊಂದರೆಯಾಗಿದ್ದು 1973ರ ಗೆಜೆಟ್‌ನಲ್ಲಿ ನಮೂದಿಸಿರುವ ವಕ್ಭ್ ಆಸ್ತಿ ಹಾಗೂ ಪಹಣಿಗಳಲ್ಲಿನ ವಕ್ಭ್ ಮಂಡಳಿ ಕರ್ನಾಟಕ ಸರ್ಕಾರ ತಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಮುಖಂಡ ಸಿದ್ದು ಹೆಬ್ಬಾಳ ಮಾತನಾಡಿ, ರೈತರ ಜಮೀನುಗಳು ಇನಾಮು ಜಮೀನುಗಳಾಗಿದ್ದು 1961ರಲ್ಲೇ ಇವುಗಳ ಉತಾರೆಯಲ್ಲಿದ್ದ ಸರ್ಕಾರವನ್ನು ವಜಾಗೊಳಿಸಲಾಗಿದೆ.ತಕ್ಷಣ ರೈತರ ಜಮೀನುಗಳ ಮೇಲೆ ಇರುವ ವಕ್ಭ್ ಬೋರ್ಡ್ ಪದವನ್ನು ತಗೆದುಹಾಕಬೇಕು.ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿ ಎದುರಿಗೆ ನ.6 ರಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ. ರೈತರಿಗೆ ತೊಂದರೆಯಾದಾಗ ಎಲ್ಲ ಹೋರಾಟಗಾರರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಆತನೊಂದಿಗೆ ನಿಲ್ಲಬೇಕು ಎಂದು ತಿಳಿಸಿದರು.

ಪ್ರಗತಿಪರ ರೈತ ಭೀಮಸಿ ಹೂಗಾರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಓಡಾಡಿ ಓಟು ಹಾಕಿಸಿಕೊಂಡವರು ಇಂದು ರೈತರಿಗೆ ತೊಂದರೆಯಾಗಿರುವುದರ ಬಗ್ಗೆ ಧ್ವನಿ ಎತ್ತಬೇಕು.ಕ್ಷೇತ್ರದ ಶಾಸಕರು ಈ ವಿಷಯದ ಕುರಿತು ಧ್ವನಿ ಎತ್ತಬೇಕು.ಕೇವಲ ಹಿಂದೂಗಳಷ್ಟೇ ಅಲ್ಲದೇ ಮುಸ್ಲಿಂರ ಜಮೀನುಗಳಲ್ಲೂ ವಕ್ಭ್ ಬೋರ್ಡ್ ಪದ ಸೇರ್ಪಡೆಯಾಗಿದ್ದು ಅದನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರಲ್ಲದೇ ವಕ್ಬ್ ಕಾನೂನು ಸಂವಿಧಾನಕ್ಕಿಂತ ದೊಡ್ಡದಲ್ಲ ಎಂದು ಹೇಳಿದರು.

ರೈತ ಸಂಘದ ಮುಖಂಡ ಸಂಗಣ್ಣ ಬಾಗೇವಾಡಿ ಮಾತನಾಡಿದರು.ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, , ಸಂತೋಷಗೌಡ ಬಿರಾದಾರ , ಗುರುಪಾದ ಹೆಬ್ಬಾಳ , ಮಂಜು ಅಬ್ಬಿಹಾಳಮಠ ಮಲ್ಲಿಕಾರ್ಜುನ ನಾಟಿಕಾರ , ಸಚೀನ ಚಿನ್ನಾಪೂರ , ಈರಣ್ಣ ಹೂಗಾರ , ಸಂಗಣ್ಣ ಕುಂಬಾರ , ದುರ್ಗಪ್ಪ ಕವಡಿಮಟ್ಟಿ ಸೇರಿದಂತೆ ಕುಂಟೋಜಿ ಹಾಗೂ ಬಿದರಕುಂದಿ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದರು.ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ, ಮೇಲಧಿಕಾರಿಗಳಿಂದ ಬರುವ ನಿರ್ದೇಶನದಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಡಿಸಿಜಿ ಕನ್ನಡ Facebook, Dailyhunt, ShareChat, Twitter ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Latest News

ಅರ್ಜುನ ಆಸ್ಪತ್ರೆ ಸಹಯೋಗ:                                     ನವಜಾತ ಶಿಶುಗಳ ನಿಯಮಿತ ಆರೈಕೆ ಅಗತ್ಯ-ಡಾ.ಪರಶುರಾಮ

ಅರ್ಜುನ ಆಸ್ಪತ್ರೆ ಸಹಯೋಗ: ನವಜಾತ ಶಿಶುಗಳ ನಿಯಮಿತ ಆರೈಕೆ ಅಗತ್ಯ-ಡಾ.ಪರಶುರಾಮ

ಮುದ್ದೇಬಿಹಾಳ : ನವಜಾತ ಶಿಶುಗಳ ನಿಯಮಿತ ಆರೈಕೆಯಿಂದ ಆರೋಗ್ಯಪೂರ್ಣವಾದ ಮಗು ಸಮಾಜದಲ್ಲಿ ಬೆಳವಣಿಗೆ ಹೊಂದಲು

ಸಿಂಗಲ್ ಟೆಂಡರ್‌ಗೆ ಅವಕಾಶ ಕೊಡುವುದಿಲ್ಲ:                  ಸುಳ್ಳು ಹೇಳುವುದೇ ಶಾಸಕ ನಾಡಗೌಡರ ಕಾಯಕ-ನಡಹಳ್ಳಿ

ಸಿಂಗಲ್ ಟೆಂಡರ್‌ಗೆ ಅವಕಾಶ ಕೊಡುವುದಿಲ್ಲ: ಸುಳ್ಳು ಹೇಳುವುದೇ ಶಾಸಕ ನಾಡಗೌಡರ ಕಾಯಕ-ನಡಹಳ್ಳಿ

ಮುದ್ದೇಬಿಹಾಳ : ಇವತ್ತಿನ ಶಾಸಕ ಅಪ್ಪಾಜಿ ನಾಡಗೌಡರಿಗೆ ಸರಕಾರದಿಂದ ಹಣ ತರುವ ಯೋಗ್ಯತೆ ಇಲ್ಲ.

ನ.17 ರಂದು ಆಶಾ ಕಾರ್ಯಕರ್ತೆಯರಿಗೆ ನವಜಾತ ಶಿಶುಗಳ ಆರೈಕೆ ಉಚಿತ ತರಬೇತಿ ಶಿಬಿರ

ನ.17 ರಂದು ಆಶಾ ಕಾರ್ಯಕರ್ತೆಯರಿಗೆ ನವಜಾತ ಶಿಶುಗಳ ಆರೈಕೆ ಉಚಿತ ತರಬೇತಿ ಶಿಬಿರ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್

ಕೊಣ್ಣೂರು ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ

ಕೊಣ್ಣೂರು ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಕೊಣ್ಣೂರು ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಗೆ

ಕಬ್ಬು ತುಂಬಿದ್ದ ಟ್ರ್ಯಾಲಿ ಪಲ್ಟಿ: ಕಾರ್ಖಾನೆ ಕಾರ್ಮಿಕ ದುರ್ಮರಣ

ಕಬ್ಬು ತುಂಬಿದ್ದ ಟ್ರ್ಯಾಲಿ ಪಲ್ಟಿ: ಕಾರ್ಖಾನೆ ಕಾರ್ಮಿಕ ದುರ್ಮರಣ

ಮುದ್ದೇಬಿಹಾಳ : ಕಬ್ಬನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಟ್ರ್ಯಾಲಿ ಕಬ್ಬಿನ ರಾಶಿ ಸಮೇತ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಗರಸಂಗಿ ಕ್ರಾಸ್ ಬಳಿ ನ.12ರ ಮಂಗಳವಾರ ಸಂಜೆ ಸುಮಾರು 7 ಗಂಟೆಗೆ ನಡೆದಿದೆ.ತಾಲ್ಲೂಕಿನ ಹಿರೇಮುರಾಳ ಗ್ರಾಮದ ಸಂಗಮೇಶ ಚಲವಾದಿ (35) ಮೃತಪಟ್ಟ ವ್ಯಕ್ತಿ.ಸಂಗಮೇಶ, ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ತನ್ನ ಕೆಲಸ ಮುಗಿದ ನಂತರ ಬೈಕ್ ನಲ್ಲಿ ತನ್ನೂರಿಗೆ ಹೊರಟಿದ್ದರು. ಎದುರಿಗೆ ಕಬ್ಬು

ಮುದ್ದೇಬಿಹಾಳ : ಕುಂಟೋಜಿ ಗ್ರಾ.ಪಂ ಉಪ ಚುನಾವಣೆಈ ಕಾರಣಕ್ಕೆ ಅಭ್ಯರ್ಥಿ ನಾಮಪತ್ರ ರಿಜೆಕ್ಟ್…!

ಮುದ್ದೇಬಿಹಾಳ : ಕುಂಟೋಜಿ ಗ್ರಾ.ಪಂ ಉಪ ಚುನಾವಣೆಈ ಕಾರಣಕ್ಕೆ ಅಭ್ಯರ್ಥಿ ನಾಮಪತ್ರ ರಿಜೆಕ್ಟ್…!

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಆಯ್ಕೆ ಬಯಸಿ ಸಲ್ಲಿಕೆಯಾಗಿದ್ದ ಎರಡು ನಾಮಪತ್ರಗಳಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ಮದ್ಯಾಹ್ನ 1 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ಕಾರ್ಯವನ್ನು ನಾಮಪತ್ರ ಸಲ್ಲಿಸಿದ್ದ ಶಾಂತಾ ಮದರಿ ಹಾಗೂ ಕವಿತಾ ಶಿರಗುಪ್ಪಿ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳು ನಡೆಸಿದರು.ಈ ವೇಳೆ ಕವಿತಾ ಶಿರಗುಪ್ಪಿ ಅವರು ಸಲ್ಲಿಸಿದ್ದ ನಾಮಪತ್ರದ ಜೊತೆಗೆ ಮೀಸಲಾತಿ