ಗೂಡ್ಸ್ ವಾಹನ ಪಲ್ಟಿ-ಮಹಿಳೆ ಸಾವು ಎಂಟು ಜನರಿಗೆ ಗಾಯ

ಗೂಡ್ಸ್ ವಾಹನ ಪಲ್ಟಿ-ಮಹಿಳೆ ಸಾವು ಎಂಟು ಜನರಿಗೆ ಗಾಯ

Ad
Ad

ಮುದ್ದೇಬಿಹಾಳ : ಕೂಲಿ ಕೆಲಸಕ್ಕೆ ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ವಾಹನವೊಂದು ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಎಂಟು ಜನ ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಭಾನುವಾರ ತಾಲೂಕಿನ ತಂಗಡಗಿಯ ಕೃಷ್ಣಾ ನದಿ ಬಳಿಯ ಅಮರಗೋಳ ಕ್ರಾಸನಲ್ಲಿ ನಡೆದಿದೆ.

Ad
Ad

ಮೃತ ಮಹಿಳೆ ಕೋಳೂರು ಗ್ರಾಮದ ಮಾಲನಬಿ ಖಾದರಬಾಷಾ ಹವಾಲ್ದಾರ್ (35) ಎಂದು ಗುರುತಿಸಲಾಗಿದೆ. ಆಟೋದಲ್ಲಿದ್ದ ಕೋಳೂರು ಗ್ರಾಮದ ವಸಂತಿ ಕತ್ತಿ, ಶರಣಮ್ಮ ಹಗಟಗಿ, ಲಾಲಮಾ ಮತ್ತೇದಾರ, ಬಸಮ್ಮ ತಾರನಾಳ, ಚೆನ್ನಮ್ಮ ತಂಗಡಗಿ, ನಿಂಗಮ್ಮ ಮಡಿವಾಳರ, ಶಂಕ್ರಮ್ಮ ಪಾಟೀಲ,ರೇಖಾ ಮಡಿವಾಳರ ಗಾಯಗೊಂಡವರು.

ಹುನಗುಂದ ತಾಲೂಕು ವ್ಯಾಪ್ತಿಯ ಕೂಡಲಸಂಗಮದ ಜಮೀನುಗಳಲ್ಲಿ ಈರುಳ್ಳಿ ಬಿಡಿಸಲು ಕಾರ್ಮಿಕರನ್ನು ಆಟೋದಲ್ಲಿ ಕರೆದೊಯ್ಯಲಾಗುತ್ತಿತ್ತು.ಹೆದ್ದಾರಿಯಲ್ಲಿ ಓವರಟೇಕ್ ಮಾಡಲು ಹೋಗಿ ಮುಂದೆ ಬರುತ್ತಿದ್ದ ವಾಹನಕ್ಕೆ ದಾರಿ ಬಿಟ್ಟುಕೊಡುವ ಅವಸರದಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗೂಡ್ಸ್ ವಾಹನದ ಚಾಲಕ ನಾಗರಾಜ ಚಲವಾದಿ ವಿರುದ್ಧ ಕೋಳೂರು ಗ್ರಾಮದ ಇಬ್ರಾಹಿಂ ಹಾಲ್ಯಾಳ ದೂರು ನೀಡಿದ್ದಾರೆ.ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜಯ ತಿಪರೆಡ್ಡಿ ಭೇಟಿ ನೀಡ ಪರಿಶೀಲನೆ ನಡೆಸಿದರು.

Latest News

ಪಹಲ್ಗಾಂನಲ್ಲಿ ಉಗ್ರರ ದಾಳಿ: ರಾಜ್ಯದ 178 ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತಂದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಪಹಲ್ಗಾಂನಲ್ಲಿ ಉಗ್ರರ ದಾಳಿ: ರಾಜ್ಯದ 178 ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತಂದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಸಚಿವ ಲಾಡ್‌ ಕಾರ್ಯಕ್ಕೆ ಪ್ರವಾಸಿಗರಿಂದ ಕೃತಜ್ಞತೆ ಬೆಂಗಳೂರು, ಏಪ್ರಿಲ್‌ 24: ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರನ್ನು

ಕಾಶ್ಮೀರದಿಂದ ರಾಜ್ಯಕ್ಕೆ ಮರಳು ಪ್ರವಾಸಿಗರಿಗೆ ನೆರವು ನೀಡುತ್ತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್

ಕಾಶ್ಮೀರದಿಂದ ರಾಜ್ಯಕ್ಕೆ ಮರಳು ಪ್ರವಾಸಿಗರಿಗೆ ನೆರವು ನೀಡುತ್ತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್

ಪಹಲ್ಗಾಮ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದಕರ ದಾಳಿ ನಂತರ ಕರ್ನಾಟಕ

ದೇಶದ ಋಣ ತೀರಿಸಲು ಯುವಕರು ಮುಂದೆ ಬನ್ನಿ : ಚಕ್ರವರ್ತಿ ಸೂಲಿಬೆಲೆ

ದೇಶದ ಋಣ ತೀರಿಸಲು ಯುವಕರು ಮುಂದೆ ಬನ್ನಿ : ಚಕ್ರವರ್ತಿ ಸೂಲಿಬೆಲೆ

ಗುಳೆದಗುಡ್ಡ : ನಮ್ಮ ಹಿರಿಯರು 5 ಋಣಗಳನ್ನು ತೀರಿಸಲು ಹೆಳಿದ್ದಾರೆ. ಅವುಗಳೆಂದರೆ ದೇವರ ಋಣ,

ಭಾರೀ ಬಿರುಗಾಳಿ,ಆಲಿಕಲ್ಲು ಮಳೆ:4000 ಪಪ್ಪಾಯಿ ಗಿಡಗಳು ನಾಶ, ದ್ರಾಕ್ಷಿ ಬೆಳೆಗೂ ಹಾನಿ

ಭಾರೀ ಬಿರುಗಾಳಿ,ಆಲಿಕಲ್ಲು ಮಳೆ:4000 ಪಪ್ಪಾಯಿ ಗಿಡಗಳು ನಾಶ, ದ್ರಾಕ್ಷಿ ಬೆಳೆಗೂ ಹಾನಿ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದಲ್ಲಿ ಬುಧವಾರ ಸಂಜೆ ಬೀಸಿದ ಭಾರಿ ಬಿರುಗಾಳಿ, ಅಕಾಲಿಕ ಆಲಿಕಲ್ಲು

ಸಿಎಂ, ಗೃಹ ಸಚಿವರು ಕ್ಷಮೆಯಾಚಿಸಲು ನಡಹಳ್ಳಿ ಆಗ್ರಹ

ಸಿಎಂ, ಗೃಹ ಸಚಿವರು ಕ್ಷಮೆಯಾಚಿಸಲು ನಡಹಳ್ಳಿ ಆಗ್ರಹ

ಮುದ್ದೇಬಿಹಾಳ : ಸಿಇಟಿ ಪರೀಕ್ಷೆ ಬರೆಯುವುದಕ್ಕೆ ತೆರಳಿದ್ದ ಜನಿವಾರ ಸಮಾಜದವರೊಂದಿಗೆ ಅನುಚಿತವಾಗಿ ನಡೆದುಕೊಂಡ ಘಟನೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ಪರಮೇಶ್ವರ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು. ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.‌ ಜನಿವಾರ ವಿಪ್ರ ಸಮಾಜವೂ ಸೇರಿ ಹಲವು ಸಮಾಜದವರ ಪ್ರಾತಿನಿಧಿಕ ಸಂಕೇತವಾಗಿದ್ದು ಅದಕ್ಕೆ

ನಿವೃತ ಪೊಲೀಸ್ ಅಧಿಕಾರಿ ಪತ್ನಿಯಿಂದಲೇ ಹತ್ಯೆ

ನಿವೃತ ಪೊಲೀಸ್ ಅಧಿಕಾರಿ ಪತ್ನಿಯಿಂದಲೇ ಹತ್ಯೆ

ಬೆಂಗಳೂರುಃ ಕರ್ನಾಟಕದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಓಂ ಪ್ರಕಾಶ್ ಅವರನ್ನು ಅವರ ಪತ್ನಿಯಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾರೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಿವಾಸದಲ್ಲಿ ಈ ಕೊಲೆ ನಡೆದಿದೆ. ನಿವೃತ ಅಧಿಕಾರಿ ಓಂ ಪ್ರಕಾಶ್ ಕೊಲೆ ಬಗ್ಗೆ ಅವರ ಪತ್ನಿಯೇ ಮಾಹಿತಿಯನ್ನು ನೀಡಿದ್ದಾರೆ. ಸ್ವತಃ ಓಂ ಪ್ರಕಾಶ್ ಅವರ ಪತ್ನಿಯೇ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಕೊಲೆಯಾದ ಬಳಿಕ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು.