ಚಿಗುರು ಕಲಾ ಬಳಗದಿಂದ ಅನ್ನಸಂತರ್ಪಣೆ : ನ.11 ರಂದು ಕನ್ನಡ ರಾಜ್ಯೋತ್ಸವ, ಪುನೀತ್‌ಗೆ ನಮನ

ಚಿಗುರು ಕಲಾ ಬಳಗದಿಂದ ಅನ್ನಸಂತರ್ಪಣೆ : ನ.11 ರಂದು ಕನ್ನಡ ರಾಜ್ಯೋತ್ಸವ, ಪುನೀತ್‌ಗೆ ನಮನ

ಮುದ್ದೇಬಿಹಾಳ : ಸ್ಥಳೀಯ ಕಲಾವಿದರ ನೇತೃತ್ವದಲ್ಲಿ ಚಿಗುರು ಕಲಾ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ ನಮನ ಕಾರ್ಯಕ್ರಮ ನ.11 ರಂದು ಪಟ್ಟಣದ ಪುರಸಭೆಯ ಎದುರಿಗಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಮದ್ಯಾಹ್ನ 1.30 ಗಂಟೆಯಿAದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುವುದು.ಸಾಯಂಕಾಲ 4 ಗಂಟೆಗೆ ಟ್ರ‍್ಯಾಕ್ಸ್, ಕಾರು ಹಾಗೂ ಆಟೋಗಳಿಂದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಯಲಿದೆ ಎಂದು ಬಳಗದ ಸದಸ್ಯ ಗೋಪಾಲ ಹೂಗಾರ, ಶ್ರೀಶೈಲ್ ಹೂಗಾರ ತಿಳಿಸಿದರು.

ಸಂಜೆ 7 ಗಂಟೆಗೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಕಲಾವಿದರಾದ ಮ್ಯೂಜಿಕ್ ಮೈಲಾರಿ ಹಾಗೂ ಗಾಯಕಿ ತೃಪ್ತಿ ಧಾರವಾಡ ಅವರಿಗೆ ಸನ್ಮಾನಿಸಲಾಗುವುದು.ಪಟ್ಟಣದ ಪ್ರೌಢ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಹಾಲಿ, ಮಾಜಿ ಶಾಸಕರು, ಜನಪ್ರತಿನಿಧಿಗಳು,ಸಮಾಜ ಸೇವಕರು, ಗಣ್ಯರು ಆಗಮಿಸುವರು ಎಂದು ಅವರು ತಿಳಿಸಿದರು.

ಕಲಾವಿದರಾದ ಮುನೀರ ಅವಟಗೇರಿ,ವಿನಾಯಕ ಭಟ್, ನಿಜಾಮ್ ಬಾಗೇವಾಡಿ , ಹನಮಂತ ಮಹಾಲಿಂಗಪೂರ, ಮಲ್ಲು ತಟ್ಟಿ, ಸುನೀಲ ಬಿಸನಾಳ, ಅಟೋ ಕುಮಾರ ,ಮೌನೇಶ ಬಡಿಗೇರ, ಪ್ರಸನ್ನ ಪಾಟೀಲ ಇದ್ದರು.

Latest News

ಸಾರ್ವಜನಿಕರು,ವ್ಯಾಪಾರಿಗಳಿಗೆ ನಿತ್ಯ ಕಿರಿಕಿರಿ; ಮಂಗಗಳ ಹಾವಳಿಗೆ ಜನ ಹೈರಾಣು..!

ನಾಲತವಾಡ : ಪಟ್ಟಣದ ಹೃದಯಭಾಗವಾಗಿರುವ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಆಲದ ಮರದಲ್ಲಿ ಬಿಡಾರ ಹೂಡಿರುವ

ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ.

ತಾಳಿಕೋಟಿ: ಸಮಾಜ ಸೇವೆಯ ಹೆಸರಿನಲ್ಲಿ ಕೇವಲ ತಮ್ಮ ಸ್ವಾರ್ಥವನ್ನೇ ಈಡೇರಿಸಿಕೊಳ್ಳುವ ಇಂದಿನ ದಿನಮಾನದಲ್ಲಿ ತಾನು

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ:                       ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ: ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಮುದ್ದೇಬಿಹಾಳ : ಇದೇ ಪ್ರಥಮ ಬಾರಿಗೆ ಲಿಂಗಸುಗೂರಿನಲ್ಲಿ ಜ.11 ರಂದು ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಮುದ್ದೇಬಿಹಾಳ : ಸನ್ 2025-26ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ರೈತರು ಹೊಲಗಳಲ್ಲಿ ಕೃಷಿ

ಹರಿಹರ ತಾಲ್ಲೂಕು ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟಸಭೆ : ಅಶ್ವತ ಟಿ ಮರೀಗೌಡ್ರು.

ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ, ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಈ ಸಭೆಯನ್ನು ಹರಿಹರ ತಾಲ್ಲೂಕಿನ ಹೊಸಪೇಟೆ ಬೀದಿ ಶ್ರೀ ಮುರುಘಾರಾಜೇಂದ್ರ ಕಲ್ಯಾಣ ಮಂಟಪ ಎದುರು ಶ್ರೀ ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘ ಕಛೇರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಅಶ್ವತ ಟಿ ಮರೀಗೌಡ್ರು, ಶಿವಕುಮಾರ್ ಗೌಡ, ರಮೇಶ್, ಲೋಕೇಶ್ ನಾಯಕ, ಹಾಲೇಶ್, ಭೀಮಣ್ಣ, ಶಶಿನಾಯ್ಕ್ , ಶಿವಣ್ಣ, ಪರಶುರಾಮ, ನಾಗರಾಜು,

ವಿದ್ಯುತ್ ಶಾರ್ಟ್ ಸರ್ಕಿಟ್: ಅಪಾರ ಹಾನಿ

ವಿದ್ಯುತ್ ಶಾರ್ಟ್ ಸರ್ಕಿಟ್: ಅಪಾರ ಹಾನಿ

ಮುದ್ದೇಬಿಹಾಳ : ಪಟ್ಟಣದ ವಿಜಯಪುರ ರಸ್ತೆಯ ಸಾಯಿ ಬಡಾವಣೆಯಲ್ಲಿ ಶುಕ್ರವಾರ ಮಧ್ಯರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಮನೆ ಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅಪಾರ ಹಾನಿ ಸಂಭವಿಸಿದ ಘಟನೆ ನಡೆದಿದೆ. ಸಾಯಿ ಬಡಾವಣೆ ನಿವಾಸಿ ಮಹಿಬೂಬ ಕುಮಸಿ ಅವರ ಮನೆಯಲ್ಲಿದ್ದ ಫ್ರಿಜ್, ಫ್ಯಾನ್ ಸೇರಿದಂತೆ ಮನೆ ಬಳಕೆ ವಸ್ತುಗಳು ಹಾನಿಯಾಗಿವೆ ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಠಾಣಾಧಿಕಾರಿ ನಾಗೇಶ ರಾಠೋಡ ನೇತೃತ್ವದಲ್ಲಿ ಬೆಂಕಿ ನಂದಿಸಲಾಯಿತು.