ಮುದ್ದೇಬಿಹಾಳ : ವಕ್ಭ್ ಕಾಯ್ದೆ ರದ್ದುಗೊಳಿಸಿ ರೈತರ ಜಮೀನುಗಳಲ್ಲಿ ವಕ್ಭ್ ಹೆಸರು ಕಡಿಮೆ ಮಾಡಿ ಹೊಸ ಪಹಣಿಗಳನ್ನು ಸರ್ಕಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಶಿವಯೋಗೆಪ್ಪ ರಾಂಪೂರ ಆಗ್ರಹಿಸಿದರು.
ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ,ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ಸೋಮವಾರ ವಕ್ಭ್ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಒಂದು ಸಮುದಾಯದ ಓಲೈಕೆಗಾಗಿ ರಚಿಸಿರುವ ವಕ್ಭ್ ಬೋರ್ಡ್ ರದ್ದುಗೊಳಿಸಬೇಕು. ರೈತರಿಗೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದಲ್ಲಿ ಅಳಿಗಾಲ ಶುರುವಾಗಿದೆ ಎಂದು ಹೇಳಿದರು.
ಮಾಜಿ ಸೈನಿಕ ಪಿ.ಜಿ.ಬಿರಾದಾರ ಮಾತನಾಡಿ, ಕುಂಟೋಜಿ, ಬಿದರಕುಂದಿ, ಬಿಜ್ಜೂರ, ನಾಲತವಾಡ ಭಾಗದಲ್ಲಿ ಹಲವು ಜಮೀನುಗಳಲ್ಲಿ ವಕ್ಭ್ ಹೆಸರು ದಾಖಲಾಗಿದೆ.ಪ್ರಜಾಪ್ರಭುತ್ವ ಸರ್ಕಾರ ಎಂದು ಹೇಳಿಕೊಂಡೇ ಪ್ರಜೆಗಳ ಹಕ್ಕುಗಳನ್ನು ದಮನ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಪ್ರಭು ಕಡಿ ಮಾತನಾಡಿದರು.ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಸಂಜೀವ ಬಾಗೇವಾಡಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾನಪ್ಪ ನಾಯಕ, ರವೀಂದ್ರ ಬಿರಾದಾರ, ಪುನೀತ ಹಿಪ್ಪರಗಿ, ಸಂಗಮೇಶ ಹತ್ತಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಿರೀಶ ಪಾಟೀಲ್ ಇದ್ದರು.ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ರಾಮನಗೌಡ ಸಂಕನಾಳ ಭದ್ರತೆ ಒದಗಿಸಿದ್ದರು.ಅಂಬೇಡ್ಕರ ಸರ್ಕಲ್‌ನಲ್ಲಿ ಹೋರಾಟಗಾರರು ಕೆಲಕಾಲ ರಸ್ತಾ ರೋಕೋ ಚಳವಳಿ ನಡೆಸಿದರು.ಎತ್ತು ಹಾಗೂ ಗಾಡಿಗಳೊಂದಿಗೆ ಹೋರಾಟದಲ್ಲಿ ರೈತ ಸಂಘಟನೆಯವರು ಪಾಲ್ಗೊಂಡಿದ್ದರು.ಮುದ್ದೇಬಿಹಾಳ : ವಕ್ಭ್ ಕಾಯ್ದೆ ರದ್ದುಗೊಳಿಸಿ ರೈತರ ಜಮೀನುಗಳಲ್ಲಿ ವಕ್ಭ್ ಹೆಸರು ಕಡಿಮೆ ಮಾಡಿ ಹೊಸ ಪಹಣಿಗಳನ್ನು ಸರ್ಕಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಶಿವಯೋಗೆಪ್ಪ ರಾಂಪೂರ ಆಗ್ರಹಿಸಿದರು.
ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ,ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ಸೋಮವಾರ ವಕ್ಭ್ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಒಂದು ಸಮುದಾಯದ ಓಲೈಕೆಗಾಗಿ ರಚಿಸಿರುವ ವಕ್ಭ್ ಬೋರ್ಡ್ ರದ್ದುಗೊಳಿಸಬೇಕು. ರೈತರಿಗೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದಲ್ಲಿ ಅಳಿಗಾಲ ಶುರುವಾಗಿದೆ ಎಂದು ಹೇಳಿದರು.
ಮಾಜಿ ಸೈನಿಕ ಪಿ.ಜಿ.ಬಿರಾದಾರ ಮಾತನಾಡಿ, ಕುಂಟೋಜಿ, ಬಿದರಕುಂದಿ, ಬಿಜ್ಜೂರ, ನಾಲತವಾಡ ಭಾಗದಲ್ಲಿ ಹಲವು ಜಮೀನುಗಳಲ್ಲಿ ವಕ್ಭ್ ಹೆಸರು ದಾಖಲಾಗಿದೆ.ಪ್ರಜಾಪ್ರಭುತ್ವ ಸರ್ಕಾರ ಎಂದು ಹೇಳಿಕೊಂಡೇ ಪ್ರಜೆಗಳ ಹಕ್ಕುಗಳನ್ನು ದಮನ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಪ್ರಭು ಕಡಿ ಮಾತನಾಡಿದರು.ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಸಂಜೀವ ಬಾಗೇವಾಡಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾನಪ್ಪ ನಾಯಕ, ರವೀಂದ್ರ ಬಿರಾದಾರ, ಪುನೀತ ಹಿಪ್ಪರಗಿ, ಸಂಗಮೇಶ ಹತ್ತಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಿರೀಶ ಪಾಟೀಲ್ ಇದ್ದರು.ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ರಾಮನಗೌಡ ಸಂಕನಾಳ ಭದ್ರತೆ ಒದಗಿಸಿದ್ದರು.ಅಂಬೇಡ್ಕರ ಸರ್ಕಲ್‌ನಲ್ಲಿ ಹೋರಾಟಗಾರರು ಕೆಲಕಾಲ ರಸ್ತಾ ರೋಕೋ ಚಳವಳಿ ನಡೆಸಿದರು.ಎತ್ತು ಹಾಗೂ ಗಾಡಿಗಳೊಂದಿಗೆ ಹೋರಾಟದಲ್ಲಿ ರೈತ ಸಂಘಟನೆಯವರು ಪಾಲ್ಗೊಂಡಿದ್ದರು.