ಮುದ್ದೇಬಿಹಾಳ : ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.1 ರಿಂದ 23 ವರೆಗೆ ಬಯಲು ಶೌಚ ಮುಕ್ತ ಪ್ರದೇಶ ಎಂದು ಘೋಷಿಸಿಕೊಳ್ಳಲಾಗಿದ್ದು ಸಾರ್ವಜನಿಕ ಸ್ಥಳದಲ್ಲಿ ಮಲ/ಮೂತ್ರ ವಿಸರ್ಜನೆ ಮಾಡುವುದು, ಉಗುಳುವುದು, ಕಸ ಹಾಕುವುದು, ವಾಣಿಜ್ಯ ಮಳಿಗೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ನ್ನು ಬಳಕೆ ಮಾಡುವುದು ಹಾಗೂ ಮಾರಾಟ ಪ್ರಕ್ರಿಯೆ ಮಾಡಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಕಿರಿಯ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯಲ್ಲಿ ಮ್ಯಾನುವಲ್ ಸ್ಕಾö್ಯವೆಂರ‍್ಸ್ನ ಕಾಯ್ದೆಯಂತೆ ಬರಿಗೈಯಿಂದ ಮಲ ಮೂತ್ರಗಳನ್ನು ಸ್ವಚ್ಛತೆಯನ್ನು ಮಾಡಿಸುವಂತಿಲ್ಲ.ಬದಲಿಗೆ ನಿಮ್ಮ ಮನೆಯ ಶೌಚಗುಂಡಿಗಳನ್ನು ಡಿ-ಸ್ಲಡ್ಜಿಂಗ್ ಮೆಷಿನ್‌ನಿಂದ ಸ್ವಚ್ಛಗೊಳಿಸಲು ಪುರಸಭೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ ರೂ.200 ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆ/ಮಾರಾಟ ಮಾಡಿದರೆ 100ರೂ. ರಿಂದ 5000ರೂದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.