ವಿಜಯಪುರ : ಕ್ರೈಂ ರೆಕಾರ್ಡ್ ಬ್ಯೂರೋದ ಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮಣ ನಿಂಬರಗಿ ಅವರನ್ನು ಸರ್ಕಾರ ವಿಜಯಪುರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಗಳನ್ನಾಗಿ ವರ್ಗಾಯಿಸಿ ಆದೇಶ ಹೊರಡಿಸಿದೆ.
2014 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ನಿಂಬರಗಿ ಅವರಿಗೆ ವಿಜಯಪುರ ಜಿಲ್ಲೆಯ ಜವಾಬ್ದಾರಿ ವಹಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ ಪರೀಟ್ ಆದೇಶಿಸಿದ್ದಾರೆ.

ವಿಜಯಪುರಕ್ಕೆ ನೂತನ ಎಸ್ಪಿಯಾಗಿ ಲಕ್ಷ್ಮಣ ನಿಂಬರಗಿ ವರ್ಗಾವಣೆ
ವಿಜಯಪುರಕ್ಕೆ ನೂತನ ಎಸ್ಪಿಯಾಗಿ ಲಕ್ಷ್ಮಣ ನಿಂಬರಗಿ ವರ್ಗಾವಣೆ
Latest News
ನಂದವಾಡಗಿ ಗ್ರಾಮದಲ್ಲಿ ಜೋಡಿ ಕೊಲೆ : ಆಸ್ತಿಗಾಗಿ ಗಂಡನ ಅಣ್ಣನಿಂದ ತಾಯಿ ಮಗನ ಹತ್ಯೆ
ಇಳಕಲ್ಲ.(ಗ್ರಾ). ಅರವತ್ತು ವರ್ಷದ ವ್ಯಕ್ತಿಯೊಬ್ಬ ಆಸ್ತಿ ವಿಷಯವಾಗಿ ತನ್ನ ತಮ್ಮನ ಹೆಂಡತಿ ಮತ್ತು ಮಗನನ್ನು
ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ
ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ತಾಂಡಾದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ತೆರಬಂಡಿ ಸ್ಪರ್ಧೆಯಲ್ಲಿ
ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.
ಬಾಗಲಕೋಟೆ :ಮುರನಾಳ ಗ್ರಾಮದ ಶ್ರೀ ಗದಿಗೆಪ್ಪಗೌಡ ವೆಂಕಪ್ಪ ಕೋನಪ್ಪನವರ ( ೮೩ ) ಇವರು
ಸೇನೆಯಿಂದ ತುರ್ತು ಕರೆ: ಹುಲ್ಲೂರು ತಾಂಡಾದ ಎಂಟು ಜನ ಯೋಧರಿಗೆ ಬೀಳ್ಕೊಡುಗೆ
ಮುದ್ದೇಬಿಹಾಳ : ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೇನೆಯಿಂದ
ಧರ್ಮಶಾಲಾದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯ ರದ್ದು
ಧರ್ಮಶಾಲಾ: ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ರದ್ದು ಮಾಡಲಾಗಿದೆ. ಪಂಜಾಬ್ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 9 ಗಂಟೆ 29 ನಿಮಿಷಕ್ಕೆ ಮೈದಾನದ ದೀಪಗಳನ್ನು ಆಫ್ ಮಾಡಲಾಯಿತು. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಮೈದಾನದಲ್ಲಿದ್ದ ಆಟಗಾರರು ಪೆವಿಲಿಯನ್ ನತ್ತ ಧಾವಿಸಿದರೆ, ಪ್ರೇಕ್ಷಕರು ಮೈದಾನದಿಂದ ನಿರ್ಗಮಿಸುತ್ತಿದ್ದಾರೆ. ಪಂದ್ಯ ರದ್ದಾದ ವಿಷಯವನ್ನು ಐಪಿಎಲ್ ಅಧ್ಯಕ್ಷರಾದ ಅರುಣ್ ಧುಮಾಲ್ ಅವರೇ ಖಚಿತಪಡಿಸಿದ್ದಾರೆ.
ಐಪಿಎಲ್ ಪಂದ್ಯ ನಿಷೇಧಕ್ಕೆ ಸಚಿವ ಸಂತೋಷ್ ಲಾಡ್ ಆಗ್ರಹ
ಬೆಂಗಳೂರು: ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಪಾಕಿಸ್ತಾನವು ಭಾರತದ ನಾಗರಿಕರನ್ನು ಗುರಿಯಾಗಿರಿಸಿ ದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಆಟಗಾರರು ಮತ್ತು ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಐಪಿಎಲ್ ಪಂದ್ಯಗಳನ್ನು ತಕ್ಷಣದಿಂದಲೇ ನಿಷೇಧಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಆಗ್ರಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ಹೆಸರಿನ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಪ್ರತಿಯಾಗಿ