ಕಬ್ಬು ಸಾಗಾಣಿಕ ಟ್ರಾಕ್ಟರ್‌ಗಳಿಗೆ ರಿಫ್ಲೆಕ್ಟರ್ ಬ್ಯಾನರ್ : ಕಬ್ಬು ಸಾಗಿಸುವಾಗ ಎಚ್ಚರಿಕೆ ವಹಿಸಿ- ನಂದಗಾವಿ

ಕಬ್ಬು ಸಾಗಾಣಿಕ ಟ್ರಾಕ್ಟರ್‌ಗಳಿಗೆ ರಿಫ್ಲೆಕ್ಟರ್ ಬ್ಯಾನರ್ : ಕಬ್ಬು ಸಾಗಿಸುವಾಗ ಎಚ್ಚರಿಕೆ ವಹಿಸಿ- ನಂದಗಾವಿ

ಮುದ್ದೇಬಿಹಾಳ : ಕಬ್ಬು ಹೇರಿಕೊಂಡು ರಸ್ತೆಯಲ್ಲಿ ಸಾಗಿಸುವಾಗ ಸಂಚಾರಿ ನಿಯಮಗಳನ್ನು ಅನುಸರಿಸಿ ಅಪಘಾತಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಹೇಳಿದರು.

ತಾಲ್ಲೂಕು ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರದಂದು ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಕಬ್ಬು ಸಾಗಾಣಿಕೆ ಮಾಡುವ ವಾಹನಗಳ ಚಾಲಕ ಮತ್ತು ಮಾಲಕರ ಸಭೆಯಲ್ಲಿ ಅವರು ಮಾತನಾಡಿದರು.

ಕಬ್ಬು ಸಾಗಾಣಿಕೆ ಮಾಡುವ ಸಮಯದಲ್ಲಿ ಅನುಸರಿಸಬೇಕಾದ ರಸ್ತೆ ನಿಯಮಗಳ ಬಗ್ಗೆ ತಿಳಿಸಿದರು.ಚಾಲಕರು ರಾತ್ರಿ ವೇಳೆಯಲ್ಲಿ ಚಾಲನೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.

ಕಬ್ಬು ಸಾಗಿಸುವ ಸಮಯದಲ್ಲಿ ಫ್ಯಾಕ್ಟರಿ ಆಡಳಿತ ಮಂಡಳಿಯವರು, ಟ್ರಾö್ಯಕ್ಟರ್ ಚಾಲಕ ಮತ್ತು ಮಾಲೀಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನೋಟಿಸ್ ನೀಡಲಾಯಿತು.
ಅಲ್ಲದೇ ಸುಮಾರು 50 ಟ್ರಾö್ಯಕ್ಟರ್‌ಗಳ ಹಿಂಬದಿಯಲ್ಲಿ ರೆಫ್ಲೆಕ್ಟರ್ ಬ್ಯಾನರ್‌ಗಳನ್ನು ಕಟ್ಟಲಾಯಿತು.ರೇಡಿಯಂಗಳನ್ನು ಹಚ್ಚಲಾಯಿತು.ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಮುದ್ದೇಬಿಹಾಳ ಪಿಎಸ್‌ಐ ಸಂಜಯ ತಿಪರೆಡ್ಡಿ, ತಾಳಿಕೋಟಿ ಪಿಎಸ್‌ಐ ರಾಮನಗೌಡ ಸಂಕನಾಳ,ಬಾಲಾಜಿ ಸಕ್ಕರೆ ಕಾರ್ಖಾನೆ ವಿಭಾಗದ ಅಧಿಕಾರಿಗಳು ಇದ್ದರು.

Latest News

ಮಹೆಬೂಬ ನಗರ-ಬಿದರಕುಂದಿ ನಗರ ಸಾರಿಗೆಗೆ ಚಾಲನೆ

ಮಹೆಬೂಬ ನಗರ-ಬಿದರಕುಂದಿ ನಗರ ಸಾರಿಗೆಗೆ ಚಾಲನೆ

ಮುದ್ದೇಬಿಹಾಳ : ಸಾರ್ವಜನಿಕರ ಬೇಡಿಕೆಯೆ ಮೇರೆಗೆ ಶಾಸಕ ಸಿ.ಎಸ್.ನಾಡಗೌಡ ಅವರ ಸೂಚಿಸಿದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ

ಕಾರು ಅಪಘಾತ ಓರ್ವನಿಗೆ ಗಾಯ

ಕಾರು ಅಪಘಾತ ಓರ್ವನಿಗೆ ಗಾಯ

ಕುಳಗೇರಿ ಕ್ರಾಸ್: ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕಾರು ಕುಳಗೇರಿ ಕ್ರಾಸ್ ನ ನಯರಾ ಪೆಟ್ರೋಲ್

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಇಳಕಲ್ಲ: ತಾಲೂಕಿನ ಗಡಿಸುಂಕಾಪುರ ಗ್ರಾಮದ ಹತ್ತಿರ ಇಳಕಲ್ ದತ್ತ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿಯ ಜಾಗೆಯ ಕುರಿತು ಕಲಬುರ್ಗಿ ಉಚ್ಛ ನ್ಯಾಯಾಲಯ ಸರ್ವೆ ನಂ.98ಕ್ಕೆ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ಹುನಗುಂದ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ ನಾಗೂರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹೊಸಮನಿ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಕರ್ತರ ಸಂಘದ ನೂತನ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಹರ್ಷಕುಮಾರ ದೇಸಾಯಿ, ಬಸವರಾಜ ನಿಡಗುಂದಿ ಹಾಗೂ ದೇವೇಂದ್ರಪ್ಪ ಕುರಿ (ಖಜಾಂಚಿ), ಮಲ್ಲಿಕಾರ್ಜುನ ಬಂಡರಗಲ್ (ಸಹ ಕಾರ್ಯದರ್ಶಿ) ಸ್ಥಾನಕ್ಕೆ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಪಾಟೀಲ, ಬಸವರಾಜ ಕಮ್ಮಾರ, ಚಂದ್ರು ಗಂಗೂರ,

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ಹುನಗುಂದ : ಕಾಶಪ್ಪನವರ ಮನೆತನದ ಹೆಸರು ಹುನಗುಂದ ವಿಧಾನ ಸಭಾ ಮತಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗದೇ ಇಂದು ಜಿಲ್ಲೆ, ರಾಜ್ಯ, ದೇಶ ವಿದೇಶಗಳಲ್ಲಿ ಗುರುತಿಸುವಂತೆ ಬೆಳೆದು ನಿಂತಿರುವ ಮಾಜಿ ಸಚಿವ ದಿ. ಎಸ್. ಆರ್. ಕಾಶಪ್ಪನವರ ಮಾಡಿದ ಸಾರ್ವಜನಿಕ, ರೈತ ಪರವಾದ ಯೋಜನೆಯಾದ ಮರೋಳ ಏತ ನೀರಾವರಿ, ಹನಿ ನೀರಾವರಿ, ಏಷ್ಯಾ ಖಂಡದಲ್ಲಿಯೇ ಇಂದು ಈ ಯೋಜನೆ ಮಹತ್ವದಿಂದ ಹುನಗುಂದ ಕ್ಷೇತ್ರ ಗುರುತಿಸುವಂತಾಗಲೂ ಕಾಶಪ್ಪನವರ ದೂರದ ದೃಷ್ಟಿಯಿಂದ ಸಾಧ್ಯವಾಗಿದೆ. ತಂದೆ ಮಾಜಿ