
ಮುದ್ದೇಬಿಹಾಳ : ತಮ್ಮ ರಾಜಕೀಯ ಗುರು, ಮಾರ್ಗದರ್ಶಕರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣಾ ಅವರ ಪಾರ್ಥೀವ ಶರೀರಕ್ಕೆ ಬುಧವಾರ ಬೆಂಗಳೂರಿನಲ್ಲಿ ಮತಕ್ಷೇತ್ರದ ಶಾಸಕ, ಕೆ.ಎಸ್.ಡಿ.ಎಲ್ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅಂತಿಮ ನಮನ ಸಲ್ಲಿಸಿದರು.ನಾಡಗೌಡರ ಪರ 2008ರಲ್ಲಿ ಎಸ್.ಎಂ.ಕೃಷ್ಣಾ ಅವರು ಪಾಂಚಜನ್ಯ ಯಾತ್ರೆ ಕೈಗೊಂಡಿದ್ದ ಸಂದರ್ಭದಲ್ಲಿ ಪ್ರಚಾರ ನಡೆಸಿದ್ದರು.ಆಗ ನಾಡಗೌಡರು ಗೆಲುವು ಸಾಧಿಸಿದ್ದರು.ಇಂದಿಗೂ ಹತ್ತಾರು ವೇದಿಕೆಗಳಲ್ಲಿ ನಾಡಗೌಡರು ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣಾ ಅವರು ಎಂದು ಸ್ಮರಿಸಿಕೊಳ್ಳುತ್ತಿರುತ್ತಾರೆ.
