ಪ್ರಚಾರಕ್ಕೆ ಸೀಮಿತವಾದ ಪ್ರವೇಶ ಪರೀಕ್ಷೆ ?: 3,555 ವಿದ್ಯಾರ್ಥಿಗಳಲ್ಲಿ ನಾಲ್ವರಿಗೆ ಮಾತ್ರ ಉಚಿತ ಶಿಕ್ಷಣದ ಭರವಸೆ..!

ಪ್ರಚಾರಕ್ಕೆ ಸೀಮಿತವಾದ ಪ್ರವೇಶ ಪರೀಕ್ಷೆ ?: 3,555 ವಿದ್ಯಾರ್ಥಿಗಳಲ್ಲಿ ನಾಲ್ವರಿಗೆ ಮಾತ್ರ ಉಚಿತ ಶಿಕ್ಷಣದ ಭರವಸೆ..!

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ) : ತಮ್ಮ ಮಕ್ಕಳು ಡಾಕ್ಟರ್ ಆಗಬೇಕು, ಎಂಜೀನಿಯರ್ ಆಗಬೇಕು ಎಂಬ ಆಸೆ ಇಟ್ಟುಕೊಂಡು ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತದೆ, ಉತ್ತಮ ಭವಿಷ್ಯ ರೂಪಿಸಲು ಹಲವಾರು ಕನಸುಗಳನ್ನು ಕಟ್ಟಿಕೊಂಡು ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿಗೆ ಭಾನುವಾರ ಆಗಮಿಸಿದ್ದ ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ಪಾಲಕರಿಗೆ ಭಾನುವಾರ ನಿರಾಸೆ ಅನುಭವಿಸಬೇಕಾಯಿತು.

ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಟ್ಯಾಲೆಂಟ್ ಸರ್ಚ್ ಪರೀಕ್ಷೆ ನಿಜವಾಗಲೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ರೂಪಿಸಿದ ಪರೀಕ್ಷೆಯೋ ಅಥವಾ ಕಾಲೇಜಿನ ಪ್ರಚಾರಕ್ಕೆಂದು ರೂಪಿಸಿದ ಕಾರ್ಯಕ್ರಮವೋ ಎಂಬುದು ಗೊತ್ತಾಗಲಿಲ್ಲ ಎಂದು ದಾವಣಗೆರೆಯಿಂದ ಬಂದಿದ್ದ ಪಾಲಕರೊಬ್ಬರು ದೂರಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 3555 ವಿದ್ಯಾರ್ಥಿಗಳು, ಅವರೊಂದಿಗೆ ಪಾಲಕರು ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಕಾಲೇಜಿನಿಂದ ಮುಂಚಿತವಾಗಿ ಪ್ರಕಟಣೆ ಕೊಟ್ಟಂತೆ ನಿಗದಿತ ಶೇ.ವಾರು ಅಂಕ ಪಡೆದುಕೊಳ್ಳುವಲ್ಲಿ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ವೈಫಲ್ಯತೆ ಅನುಭವಿಸಿದರು.

ಫಲಿತಾಂಶ ಪ್ರಕಟಿಸುವ ಸಮಯದಲ್ಲಿ ಆರಂಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ್, 3555 ವಿದ್ಯಾರ್ಥಿಗಳಲ್ಲಿ ಕೇವಲ ನಾಲ್ವರಿಗೆ ಎರಡು ವರ್ಷದ ಉಚಿತ ಊಟ, ವಸತಿ,ಶಿಕ್ಷಣ ನೀಡುವುದಾಗಿ ಹೇಳಿ ಹುನಗುಂದ ಆರ್.ಎಂ.ಎಸ್.ಎ ಶಾಲೆಯ ಮಲ್ಲಿಕಾರ್ಜುನ ಕತನಿ(ಶೇ.58.33),ಶಹಾಪೂರಿನ ನಿಸರ್ಗ ಪೊಲೀಸಪಾಟೀಲ (ಶೇ.49.58),ಮುಂಡರಗಿ ಆರ್.ಎಂ.ಎಸ್.ಎ ಶಾಲೆಯ ಕಾವ್ಯಾ ಉಪ್ಪಾರ (ಶೇ.46.66), ಆತನೂರು ಆರ್.ಎಂ.ಎಸ್.ಎ ಶಾಲೆಯ ನಾಗೇಶ ಬಡಿಗೇರ(ಶೇ.46.25) ಅವರ ಹೆಸರುಗಳನ್ನು ಘೋಷಿಸಲಾಯಿತು.

ಇದಾದ ಬಳಿಕ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ್ ಮತ್ತೆ ಮಧ್ಯೆಪ್ರವೇಶಿಸಿ, ಫಲಿತಾಂಶ ಪ್ರಕಟಿಸುತ್ತಿದ್ದ ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರು ಇಸ್ಮಾಯಿಲ್ ಮನಿಯಾರ ಅವರಿಂದ ಅತೀ ಹೆಚ್ಚು ಅಂಕ ಪಡೆದ ಮೊದಲ 16 ವಿದ್ಯಾರ್ಥಿಗಳ ಹೆಸರುಗಳನ್ನು ಘೋಷಿಸಿದರು.ಅಲ್ಲದೇ ಅವರಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿಯೂ ತಿಳಿಸಿದರು.ಆದರೆ ಎಷ್ಟು ರಿಯಾಯಿತಿ ಕೊಡಲಾಗುತ್ತದೆ ಎಂಬುದನ್ನು ಬಹಿರಂಗವಾಗಿ ಹೇಳಲಿಲ್ಲ.ಒಟ್ಟಾರೆ ಟ್ಯಾಲೆಂಟ್ ಸರ್ಚ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಋಣಾತ್ಮಕ ಅಂಕಗಳನ್ನು ಇಟ್ಟಿದ್ದು ಹಾಗೂ ಪ್ರಶ್ನೆಗಳು ಅತೀ ಕಠಿಣವಾಗಿದ್ದರಿಂದಲೇ ವಿದ್ಯಾರ್ಥಿಗಳು ನಿರೀಕ್ಷಿತ ಅಂಕ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.ಸಂಸ್ಥೆಯವರಿAದ ಇದೊಂದು ಪ್ರಚಾರದ ಗಿಮಿಕ್ ಆಯಿತೇ ? ಎಂಬ ಮಾತುಗಳು ಪರೀಕ್ಷೆಗೆ ದೂರದ ಧಾರವಾಡ, ಬಾಗಲಕೋಟ,ವಿಜಯಪುರ,ಯಾದಗಿರಿ,ಕೊಪ್ಪಳ, ಗದಗ, ಗಂಗಾವತಿ ಭಾಗಗಳಿಂದ ಬಂದಿದ್ದ ಪೋಷಕರಿಂದ ಕೇಳಿ ಬಂದವು.

Latest News

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜು

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜು

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜುಮುದ್ದೇಬಿಹಾಳ : ಹಿಂದೂ ಧರ್ಮವನ್ನು ಒಪ್ಪಿಕೊಂಡಿರುವ ಎಲ್ಲ

ಜಿಪಂ ಸದಸ್ಯೆ ಪ್ರೇಮಾಬಾಯಿ ಚವ್ಹಾಣರ ಸೊಸೆ:       ಹುಲ್ಲೂರು ತಾಂಡಾದ ದೀಪಾ ಸಿನ್ನೂರಗೆ ಡಾಕ್ಟರೇಟ್

ಜಿಪಂ ಸದಸ್ಯೆ ಪ್ರೇಮಾಬಾಯಿ ಚವ್ಹಾಣರ ಸೊಸೆ: ಹುಲ್ಲೂರು ತಾಂಡಾದ ದೀಪಾ ಸಿನ್ನೂರಗೆ ಡಾಕ್ಟರೇಟ್

ಮುದ್ದೇಬಿಹಾಳ (ವಿಜಯಪುರ ) : ಪ್ರಸ್ತುತ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ

ಅಸ್ಕಿ ಫೌಂಡೇಶನ್ ಜನಸೇವೆ ಶ್ಲಾಘನೀಯ:              ಪವನಸುತನ ನಾಡಲ್ಲಿ ಅಸ್ಕಿ ಫೌಂಡೇಶನ್ ದಿನದರ್ಶಿಕೆ ಬಿಡುಗಡೆ

ಅಸ್ಕಿ ಫೌಂಡೇಶನ್ ಜನಸೇವೆ ಶ್ಲಾಘನೀಯ: ಪವನಸುತನ ನಾಡಲ್ಲಿ ಅಸ್ಕಿ ಫೌಂಡೇಶನ್ ದಿನದರ್ಶಿಕೆ ಬಿಡುಗಡೆ

ಆಲಮಟ್ಟಿ : ಇಲ್ಲಿಗೆ ಸಮೀಪದ ಯಲಗೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ,

ಮುದ್ದೇಬಿಹಾಳ ಸಾರಿಗೆ ಘಟಕಕ್ಕೆ ಕೆಕೆಆರ್‌ಟಿಸಿ ಎಂ.ಡಿ ಭೇಟಿ: 40 ಲಕ್ಷ ರೂ.ವೆಚ್ಚದಲ್ಲಿ ನಿಲ್ದಾಣದ ಕಾಂಕ್ರಿಟ್,ಶೌಚಗೃಹ ನಿರ್ಮಾಣ

ಮುದ್ದೇಬಿಹಾಳ ಸಾರಿಗೆ ಘಟಕಕ್ಕೆ ಕೆಕೆಆರ್‌ಟಿಸಿ ಎಂ.ಡಿ ಭೇಟಿ: 40 ಲಕ್ಷ ರೂ.ವೆಚ್ಚದಲ್ಲಿ ನಿಲ್ದಾಣದ ಕಾಂಕ್ರಿಟ್,ಶೌಚಗೃಹ ನಿರ್ಮಾಣ

ಮುದ್ದೇಬಿಹಾಳ : ಪಟ್ಟಣದ ಸಾರಿಗೆ ಘಟಕದಲ್ಲಿ ಶೌಚಾಲಯ ನಿರ್ಮಾಣ ಹಾಗೂ ನಿಲ್ದಾಣದ ಆವರಣದಲ್ಲಿ ಕಾಂಕ್ರಿಟ್

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಮುಖ್ಯಮಂತ್ರಿ,  ಉಪ ಮುಖ್ಯಮಂತ್ರಿಗಳಿಂದ ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ವಿಜಯಪುರ : ಬಸ್ ನಿಲ್ದಾಣದ ಆವರಣದಲ್ಲಿ  ಪ್ರತಿಷ್ಠಾಪಿಸಿರುವ ವೀರರಾಣಿ ಕಿತ್ತೂರ ಚೆನ್ನಮ್ಮನವರ ಪುತ್ಥಳಿ ಅನಾವರಣ ಸೇರಿದಂತೆ ಜಿಲ್ಲೆಯ ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭವು ಇಂದು ನಗರದ ವಿ.ಬಿ ದರ್ಬಾರ ಮೈದಾನದ ಆವರಣದಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ 11:45ಕ್ಕೆ ನಡೆಯುವ ಜಿಲ್ಲೆಯ ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ. ಉಪ

ಪಿಪಿಪಿ ಮೆಡಿಕಲ್ ಕಾಲೇಜು ವಿರೋಧಿಸಿದ್ದವರ ಬಂಧನ-ಬಿಡುಗಡೆಗೆ ಆಗ್ರಹ

ಪಿಪಿಪಿ ಮೆಡಿಕಲ್ ಕಾಲೇಜು ವಿರೋಧಿಸಿದ್ದವರ ಬಂಧನ-ಬಿಡುಗಡೆಗೆ ಆಗ್ರಹ

ಮುದ್ದೇಬಿಹಾಳ : ಜಿಲ್ಲೆಯಲ್ಲಿ ಖಾಸಗಿ ಸ್ವಾಮ್ಯದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸದೇ ಸರ್ಕಾರಿ ಸ್ವಾಮ್ಯದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡಲು ಆಗ್ರಹಿಸಿ ನಡೆಸಿದ್ದ ಹೋರಾಟ ಈಚೇಗೆ ಸಚಿವ ಎಂ.ಬಿ.ಪಾಟೀಲರ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಂಧಿಸಿದ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕ ಎಸ್.ಎಂ.ನೆರಬೆoಚಿ ಆಗ್ರಹಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ತಿಂಗಳಿAದ ಪಿಪಿಪಿ ಮಾದರಿ