ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?; ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ..?

ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?; ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ..?

Ad
Ad

ಮುದ್ದೇಬಿಹಾಳ : ಪಟ್ಟಣದ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಜ.೮ ರಂದು ನಡೆಯಲಿದೆ.
ಅಧ್ಯಕ್ಷ, ಉಪಾಧ್ಯಕ್ಷರು ಯಾರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.ಹಿಂದಿನ ಅಧ್ಯಕ್ಷ ಸತೀಶ ಓಸ್ವಾಲ ಈಗಾಗಲೇ ಎರಡು ಬಾರಿ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದು ಸಾಮಾನ್ಯ ನಿರ್ದೇಶಕರಾಗಿ ಮುಂದುವರೆಯುವ ಸಾಧ್ಯತೆ ಇದೆ.

Ad
Ad

ಡಿಸಿಜಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಅಧ್ಯಕ್ಷನಾಗಬೇಕು ಎಂಬ ಆಸೆ ಇಲ್ಲ.ಊರಿನ ಹಿರಿಯರು ಈಗಾಗಲೇ ನನ್ನನ್ನು ಬ್ಯಾಂಕಿನ ಎರಡು ಅವಧಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.ಮುಂಬರುವ ದಿನಗಳಲ್ಲಿ ಹಿರಿಯರ ಮಾತಿಗೆ ತಲೆಬಾಗಿ ಮುನ್ನಡೆಯುತ್ತೇನೆ ಎಂದು ಉತ್ತರಿಸಿದರು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಸಂಗನಗೌಡ ಬಿರಾದಾರ(ಜಿಟಿಸಿ), ರಾಜಶೇಖರ ಕರಡ್ಡಿ ಹಾಗೂ ಪ್ರಭುರಾಜ ಕಲ್ಬುರ್ಗಿ ಇದ್ದಾರೆ.ಈ ಮೂವರಲ್ಲಿ ಒಬ್ಬರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ.ಆದರೆ ಆಯ್ಕೆಯ ಜವಾಬ್ದಾರಿ ಹೊತ್ತಿರುವ ಹಿರಿಯರೊಬ್ಬರು, ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ.ಚುನಾವಣೆಯ ದಿನದಂದು ಬೆಳಗ್ಗೆ ಎಲ್ಲರ ಅಭಿಪ್ರಾಯ ಪಡೆದುಕೊಂಡು ಸರ್ವರ ಸಮ್ಮತಿಯೊಂದಿಗೆ ಸೂಕ್ತ ವ್ಯಕ್ತಿಗೆ ಅಧ್ಯಕ್ಷರಾಗಲು ಸೂಚಿಸುವ ಬಯಕೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಮೂವರಲ್ಲಿ ಇಬ್ಬರಿಗೆ ಅಧ್ಯಕ್ಷ ಹುದ್ದೆಯ ಅವಧಿಯನ್ನು ಎರಡು ಅವಧಿಗೆ ವಿಭಜಿಸಿ ನೀಡುವ ಮೂಲಕ ಅಧಿಕಾರ ಹಂಚಿಕೆ ಸೂತ್ರ ಅನುಸರಿಸಲಿದ್ದಾರೆಯೇ ಎಂಬ ಮಾತುಗಳು ಕೇಳಿ ಬಂದಿವೆ.ಸಹಕಾರಿ ಕ್ಷೇತ್ರದಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ,ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ನಿರ್ದೇಶಕರೂ ಆಗಿರುವ ಸತೀಶ ಓಸ್ವಾಲ್ ಅವರು ಬ್ಯಾಂಕಿಗೆ ಮಾರ್ಗದರ್ಶಕರಾಗಿರಲಿದ್ದು ಹೊಸಬರನ್ನು ಆಯ್ಕೆ ಮಾಡುವಲ್ಲಿ ಅವರ ಮಾತಿಗೂ ಪ್ರಾಶಸ್ತö್ಯ ಇರಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಒಟ್ಟಾರೆ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ಒಂದು ತಿಂಗಳು ನಡೆದ ಚುನಾವಣೆಯ ಕೊನೆಯ ಘಟ್ಟ ತಲುಪಿದ್ದು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಆಯ್ಕೆ ಮೂಲಕ ನಾಳೆ ತೆರೆ ಬೀಳಲಿದೆ.

ಮಹಿಳೆಯರ ಆಯ್ಕೆಯಾಗಿಲ್ಲ :
ಬ್ಯಾಂಕಿನ ಇತಿಹಾಸದಲ್ಲಿ ಈವರೆಗೂ ಮಹಿಳೆಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿಲ್ಲ.ಅಧ್ಯಕ್ಷ ಹುದ್ದೆ ಇರಲಿ, ಕೊನೆಯ ಪಕ್ಷ ಉಪಾಧ್ಯಕ್ಷ ಸ್ಥಾನಕ್ಕಾದರೂ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂಬ ಮಾತುಗಳು ಕೇಳಿ ಬಂದಿವೆ.ಒಟ್ಟಾರೆ ಹಿರಿಯರು ಕೈಗೊಳ್ಳುವ, ಆಯ್ಕೆಯಾದ ನಿರ್ದೇಶಕರ ಸಮ್ಮತಿಯಂತೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.

Latest News

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ಕುಳಗೇರಿ ಕ್ರಾಸ್: ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಇಂಥ

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಬಾದಾಮಿ: ಕಳೆದ ಮಾ.9 ರಂದು ತಾಲೂಕಿನ ಉಗಲವಾಟ ಗ್ರಾಮದ ಕುರಿಗಳ್ಳರಿಂದ ಕೊಲೆಯಾದ ಮೃತ ಕುರಿಗಾಹಿ

ರೇಣುಕಾಚಾರ್ಯರ ಜಯಂತಿ ಆಚರಣೆ

ರೇಣುಕಾಚಾರ್ಯರ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲ್ಲೂಕು ಆಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ಬದ್ಧ ಎಂದು ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು. ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆನ್ನಬಸವಶ್ರೀ ಸ್ಕಾಲರ್‌ಶಿಪ್ ಎಕ್ಸಾಂನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕಷ್ಟಪಟ್ಟು

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2 ನೇ ಸ್ಥಾನದಲ್ಲಿದೆ. 2024-25ರ ಪರಿಷ್ಕೃತ ಅಂದಾಜಿನಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರೂ.ಗಳ ರಾಜಸ್ವವನ್ನು ನಿರೀಕ್ಷಿಸಲಾಗಿದ್ದು ಇದು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ವಾಗಬಹುದು ಎಂದು ತೆರಿಗೆ ಸಲಹೆಗಾರ ಬಿ.ಎನ್.ಹೂಗಾರ ತಿಳಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500