ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಅಧಿಕಾರಿಗಳೇ ಗೈರು ಹಾಜರಿ

ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಅಧಿಕಾರಿಗಳೇ ಗೈರು ಹಾಜರಿ

Ad
Ad

ಬೀಳಗಿ: ನಮ್ಮೆಲ್ಲರ ಸಂಘಟಿತ ಹೋರಾಟದ ಫಲವಾಗಿ 7ನೇ ವೇತನ ಆಯೋಗ ಯಥಾವತ್ತಾಗಿ ಜಾರಿಗೆ ಬಂದಿದಲ್ಲದೆ, ನಮ್ಮ ಕುಟುಂಬ ವರ್ಗದಲ್ಲಿ ಅನಾರೋಗ್ಯಕೀಡಾದ ಸಂದರ್ಭದಲ್ಲಿ ಉಚಿತ ಚಿಕಿತ್ದೆಗಾಗಿ ಆರೋಗ್ಯ ಸಂಜವೀನಿ ಅನುಷ್ಟಾನಗೊಳಿಸಲು ಯಶಸ್ಬಿಯಾಗಿದ್ದು, 2006 ರಿಂದ ನೇಮಕಗೊಂಡ ಸರಕಾರಿ ನೌಕರರ ಹಿತ ದೃಷ್ಡಿಯಿಂದ ಸರಕಾರ ಜಾರಿಗೊಳಿಸಿದ ಎನ್ ಪಿ ಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿಯಾಗಲು ಹೋರಾಟ ಮಾಡಿ ಯಶಸ್ವಿಯಾಗಲು ಪ್ರತಿಯೊಬ್ಬರು ಸಂಘಟೀತರಾಗೋಣ ಎಂದು ಕ.ರಾ.ಸ. ನೌಕರರ ಸಂಘದ ಜಿಲ್ಲಾಧ್ಯಕ್ಷ ಎಮ್. ಬಿ. ಬಳ್ಳಾರಿ ಸರಕಾರಿ ನೌಕರರಿಗೆ ಕರೆ ನೀಡಿದರು.

Ad
Ad

ಪಟ್ಟಣದ ರುದ್ರಗೌಡ ಪಾಟೀಲ ಸರಕಾರಿ ಪಥಮ ದರ್ಜೇ ಕಾಲೇಜು ಸಭಾಂಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಯೊಬ್ಬ ನೌಕರರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ನೌಕರರ ಸಂಘ 22 ಕೋಟಿ ಹಣವನ್ನು ಎಪ್.ಡಿ. ಮಾಡಿದ್ದು, ಕ್ರೀಡಾಕೂಟ ಹಾಗೂ ಮಹಿಳಾದಿನಾಚರಣೆ ಸೇರಿದಂತೆ ವಿವಿಧ ಸಾಂಸ್ಕತೀಕ ಕಾರ್ಯಕ್ರಮಗಳಿಗೆ ಸರಕಾರ ಅನುದಾನ ನೀಡುತ್ತಿದ್ದು, ನಮ್ಮ ಬಾಗಲಕೋಟೆ ಜಿಲ್ಲೆಗೆ 2 ಕೋಟಿ ಅನುದಾನ ಬಂದಿದ್ದು ಬೀಳಗಿ ಸರಕಾರಿ ನೌಕರರ ಭವನ ನವೀಕರಣಗೊಳಿಸಲು 25 ಲಕ್ಷ ರೂಪಾಯಿಗಳ ಅನುಧಾನ ನೀಡಲಾಗುವದು ಎಂದು ಎಮ್ ಬಿ ಬಳ್ಲಾರಿ ಹೇಳಿದರು.

ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಯುವ ಅನ್ನದಾತ ರೈತನು ಕೃಷಿ ಮಾಡಿ ವರ್ಷಕ್ಕೆ ಲಕ್ಷಾಂತರ ರೂಗಳು ಆದಾಯ ಗಳಿಸಿದರೂ ಆತನಿಗೆ ಕನ್ಯೆ ಕೊಡುತ್ತಿಲ್ಲ, ಇಂದಿನ ದಿನಮಾನದಲ್ಲಿ ಕಡಿಮೆ ಸಂಬಳದ ನೌಕರಿ ಇದ್ದರೂ ಅವರನ್ನು ಈಗಿನ ಕನ್ಯೆಯರು ಮದುವೆಯಾಗಲು ಮಂದೆ ಬರುತ್ತಾರೆ ಎಂದ ಅವರು ಸರಕಾರಿ ನೌಕರಿ ಮಾಡುವರು ಅದೃಷ್ಟವಂತರು ಎಂದರು.

ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ನೂತನ ಪದಾಧಿಕಾಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ತಹಶೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಭಯಕುಮಾರ ಮೊರಭ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಸ್. ಆದಾಪೂರ, ಪಪಂ ಮುಖ್ಯಾಧಿಕಾರಿ ದೇವೆಂದ್ರ ಧನಪಾಲ, ಸಿ.ಪಿ.ಆಯ್ ಬಸವರಾಜ ಹಳಬನ್ನವರವರನ್ನು ಮುಖ್ಯ ಅತಿಥಿಗಳಾಗಿ ಅಹ್ವಾನ ನೀಡಿದರೂ ತಾವು ರಾಜ್ಯ ಸರಕಾರಿ ನೌಕರಾಗಿದ್ದರು ಕಾರ್ಯಕ್ರಮಕ್ಕೆ ಗೈರು ಹಾಜರಿಯಾಗಿದ್ದು ಎದ್ದು ಕಾಣತಿತ್ತು. ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ಎರಡು ಬಣಗಳಾಗಿದ್ದು ಅದರ ಪರಿಣಾಮದ ಸಲುವಾಗಿ ಕಾರ್ಯಕ್ರಮದಿಂದ ದೂರ ಉಳಿದಿದ್ದರಬಹುದು ಎಂದು ನಿವೃತ್ತ ನೌಕರರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಡಿ.ವಾಯ್ ಅಂಬಿಗೇರ ಕಾರ್ಯದರ್ಶಿ ಮಹೇಶ ಜಗಲಿ, ಖಜಾಂಚಿ ದಾನಪ್ಪ ತಳವಾರ, ಪದಾಧಿಕಾರಿಗಳಾದ ಸಿದ್ದು ನಕ್ಕರಗುಂದಿ, ಎಸ್.ಎಸ್. ನಾರಾಯಣಿ, ಎಸ್.ಬಿ. ಮುಂಡರಗಿ, ಅಪ್ಪಾಸಾಹೇಬ ಮೋದಿ, ಎಲ್.ಡಿ. ಹಳ್ಳಿ, ಬಸವರಾಜ ನಿರಾಕರಿ ಜಿ.ಕೆ. ಸುಳ್ಳದ, ಅನಿಲ ಹೂಗಾರ,‌ಸುಜಾತಾ ರಜಪೂತ, ಆರ್. ಕೆ. ರಾಠೋಡ ಬಸವರಾಜ ಡಾವಣಗೇರಿ ಸೇರಿದಂತೆ ವೃಂದ ನೌಕರರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥೀತರಿದ್ದರು.

Latest News

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಮುದ್ದೇಬಿಹಾಳ : ಕೌಟುಂಬಿಕ ಹಿನ್ನೆಲೆಯ ದಂಪತಿಗಳಿಬ್ಬರ ಪ್ರಕರಣವನ್ನು ಇಲ್ಲಿನ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ

ಕನ್ನಡಿಗರಾದ ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳೋಣ: ಗೊ.ರು.ಚ

ಕನ್ನಡಿಗರಾದ ನಾವು ಕನ್ನಡಾಭಿಮಾನ ಬೆಳೆಸಿಕೊಳ್ಳೋಣ: ಗೊ.ರು.ಚ

ರಾಯಚೂರು: ಕನ್ನಡಿಗರಾದ ನಾವು ಕನ್ನಡ ಸಾಹಿತ್ಯ ಒಲವು ಬೆಳೆಸಿಕೊಂಡು ಭಾಷಾ ಪ್ರೇಮವನ್ನು ಮೆರೆಯುವಂತಾಗಬೇಕು ಎಂದು

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿಯ ಸುರಪುರ ತಾಲೂಕಿನ ತಿಂಥಣಿ ಬಳಿ ನಡೆದಿದೆ. ಆಂಜನೇಯ (35) ಪತ್ನಿ ಗಂಗಮ್ಮ (28) & ಅವರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವನಪ್ಪಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸುರಪುರ ಠಾಣೆಯಲ್ಲಿ ಈ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಮಂಡಿಸುತ್ತಿದ್ದಾರೆ. ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಸೀತಾರಾಮನ್. ಕಿಸಾನ್ ಕ್ರೆಡಿಟ್ ಕಾರ್ಯ ಸಾಲದ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಳ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್? ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಭಾರತ ಸರ್ಕಾರವು ರೈತರಿಗೆ ಕೃಷಿ ಮತ್ತು