Blocked a car on the highway and killed a rowdy sheeter barbarian!

ಹೈವೇಯಲ್ಲಿ ಕಾರನ್ನು ಅಡ್ಡಗಟ್ಟಿ ಹಾಡಹಗಲೇ ರೌಡಿಶೀಟರ್‌ ಬರ್ಬರ ಹತ್ಯೆ!

ಹೈವೇಯಲ್ಲಿ ಕಾರನ್ನು ಅಡ್ಡಗಟ್ಟಿ ಹಾಡಹಗಲೇ ರೌಡಿಶೀಟರ್‌ ಬರ್ಬರ ಹತ್ಯೆ!

ಚೆನ್ನೈ: ತಮಿಳುನಾಡಿನ ಸೇಲಂ-ನಾಸಿಯಾನೂರು ಹೆದ್ದಾರಿಯಲ್ಲಿ ಹಾಡಹಗಲೇ ಕಾರನ್ನು ಅಡ್ಡಗಟ್ಟಿ ರೌಡಿಶೀಟರ್‌ ಒಬ್ಬನ ಬರ್ಬರ ಹತ್ಯೆ ಮಾಡಲಾಗಿದೆ.

ಈ ಭೀಕರ ದಾಳಿಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.

ತಿರುಪ್ಪೋರಿನ ಪೆರಿಯಪಾಳ್ಯಂ ನಿವಾಸಿ 35 ವರ್ಷದ ಚಾಣಕ್ಯ ಅಲಿಯಾಸ್ ಜಾನ್ ಹತ್ಯೆಯಾದ ರೌಡಿಶೀಟರ್‌. ಸೇಲಂನಾದ್ಯಂತ ಹಲವಾರು ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಆತ ವಾಹನ ಮಾರಾಟ ಮತ್ತು ಸಾಲದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ.

ವರದಿಗಳ ಪ್ರಕಾರ ಜಾನ್ ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ವಾಹನವನ್ನು ಜಾನ್‌ನ ಕಾರಿಗೆ ಡಿಕ್ಕಿ ಹೊಡೆದು ನಿಲ್ಲುವಂತೆ ಮಾಡಿದ್ದಾರೆ. ನಂತರ ನಾಲ್ವರು ವ್ಯಕ್ತಿಗಳು ಕಾರಿನಿಂದ ಹೊರಬಂದು ಆತನ ಪತ್ನಿ ಶರಣ್ಯಳನ್ನು ಪಕ್ಕಕ್ಕೆ ತಳ್ಳಿ ಜಾನ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಶರಣ್ಯಾ ತನ್ನ ಪತಿಯನ್ನು ಬಿಟ್ಟು ಬಿಡುವಂತೆ ಎಷ್ಟೇ ಅಂಗಲಾಚಿದರೂ ದಾಳಿಕೋರರು ದಾಳಿಯನ್ನು ಮುಂದುವರಿಸಿದ್ದಾರೆ.

ಭೀಕರ ದಾಳಿಯಲ್ಲಿ ಜಾನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೃತ್ಯದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಪೆರುಂದುರೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಪಿಗಳಾದ ಸರೀಶ್, ಶರವಣನ್ ಮತ್ತು ಭೂಪಾಲನ್‌ನನ್ನು ಪೊಲೀಸರು ಬೆನ್ನಟ್ಟಿ, ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕನೇ ಆರೋಪಿ ಕಾರ್ತಿಕ್ ನಂತರ ಬಂಧನಕ್ಕೊಳಗಾಗಿದ್ದಾನೆ.

ಈ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest News

ಡಿ.22 ರಂದು ದಿನದರ್ಶಿಕೆ ಲೋಕಾರ್ಪಣೆ

ಡಿ.22 ರಂದು ದಿನದರ್ಶಿಕೆ ಲೋಕಾರ್ಪಣೆ

ಮುದ್ದೇಬಿಹಾಳ : ಪ್ರಜಾನಾಡು ಡಿಜಿಟಲ್ ಸುದ್ದಿವಾಹಿನಿಯ ದಿನದರ್ಶಿಕೆ ಲೋಕಾರ್ಪಣೆ ಕಾರ್ಯಕ್ರಮ ಡಿ.22 ರಂದು ಸಂಜೆ

ಅಂಗವೈಕಲ್ಯ ತಡೆಗೆ ಪೊಲೀಯೋ ಲಸಿಕೆ ಹಾಕಿಸಿ

ಅಂಗವೈಕಲ್ಯ ತಡೆಗೆ ಪೊಲೀಯೋ ಲಸಿಕೆ ಹಾಕಿಸಿ

ಮುದ್ದೇಬಿಹಾಳ : ಮಕ್ಕಳು ಹುಟ್ಟಿನಿಂದಲೇ ಅಂಗವೈಕಲ್ಯತೆ ಹೊಂದುವುದನ್ನು ತಪ್ಪಿಸಲು ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ

T20 World Cup 2026 ಏಳು ಆಟಗಾರರು ಔಟ್!

T20 World Cup 2026 ಏಳು ಆಟಗಾರರು ಔಟ್!

T20 World Cup 2026: ಟಿ20 ವಿಶ್ವಕಪ್​​ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ

Good News: Gruha Lakshmi ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವೆ Lakshmi Hebbalkar ​​

Good News: Gruha Lakshmi ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವೆ Lakshmi Hebbalkar ​​

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯ (Gruha Lakshmi) ಹಣ ಬಿಡುಗಡೆ ವಿಚಾರವಾಗಿ ಇತ್ತೀಚೆಗೆ ಅಧಿವೇಶನದಲ್ಲಿ ಚರ್ಚೆಗೆ

Shocking News: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಪುಟಾಣಿ ದುರ್ಮರಣ

Shocking News: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಪುಟಾಣಿ ದುರ್ಮರಣ

ಮೈಸೂರು: ರಾಜ್ಯದಲ್ಲಿ ಘೋರ ದುರಂತ ಎನ್ನುವಂತೆ ಬಿಸಿನೀರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಧಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಲ್ಲಿ ಸಂಭವಿಸಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಜಯಗಿರಿ ಹಾಡಿಯಲ್ಲಿ ಈ ದುರಂತ ಸಂಭವಿಸಿದೆ. ರಮ್ಯಾ ಮತ್ತು ಬಸಪ್ಪ ಎಂಬುವರ ದಂಪತಿಗಳ ಪುತ್ರಿ ವೇದಾ(2) ಬಿಸಿ ನೀರಿನ ಪಾತ್ರೆಗೆ ಬಿದ್ದು ಸಾವನ್ನಪ್ಪಿದ್ದಾಳೆ. ತಾಯಿ ಸ್ನಾನ ಮಾಡಿಸೋದಕ್ಕೆ ಬಿಸಿ ನೀರು ತೋಡಿ, ತಣ್ಣೀರು ಬೆರೆಸೋದಕ್ಕೆ ತರಲು ಹೋಗಿದ್ದಾರೆ. ಈ ವೇಳೆ ವೇದಾ

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಮುದ್ದೇಬಿಹಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗರಸಂಗಿ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಂಗವಾಗಿ ಶನಿವಾರ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಲಾಯಿತು. ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, "ಪೋಲಿಯೋ ಮಾರಕ ರೋಗವಾಗಿದ್ದು, ಐದು ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು ಎಂದರು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಹಾಗೂ