ಡಾ.ಎ.ಎಂ.ಮುಲ್ಲಾ ವೈದ್ಯಕೀಯ ಸೇವೆಗೆ 43ರ ಸಂಭ್ರಮ: ನನ್ನಪ್ಪನ ಆದರ್ಶ ಗುಣಗಳೇ ನನಗೆ ಮಾರ್ಗದರ್ಶನ-ಡಾ.ಮುಲ್ಲಾ

ಡಾ.ಎ.ಎಂ.ಮುಲ್ಲಾ ವೈದ್ಯಕೀಯ ಸೇವೆಗೆ 43ರ ಸಂಭ್ರಮ: ನನ್ನಪ್ಪನ ಆದರ್ಶ ಗುಣಗಳೇ ನನಗೆ ಮಾರ್ಗದರ್ಶನ-ಡಾ.ಮುಲ್ಲಾ

ಡಿಸಿಜಿ ನ್ಯೂಸ್ ವಿಶೇಷ ವರದಿ
ಮುದ್ದೇಬಿಹಾಳ
: ಸದಾ ನಗುನಗುತ್ತಾ ರೋಗಿಗಳ ಜೊತೆ ಮಾತಾಡುತ್ತಾ ಮಾತಿನಲ್ಲೇ ರೋಗಿಗಳ ಅರ್ಧ ಕಾಯಿಲೆ ಗುಣಮುಖಗೊಳಿಸುವ ವಿಶೇಷ ಗುಣ ಹೊಂದಿರುವ ಮುದ್ದೇಬಿಹಾಳದ ಹಿರಿಯ ವೈದ್ಯರಾಗಿರುವ ಡಾ.ಎ.ಎಂ.ಮುಲ್ಲಾ ಅವರ ವೈದ್ಯಕೀಯ ಸೇವೆಗೆ ನಾಲ್ಕು ದಶಕಗಳು ಪೂರ್ಣಗೊಂಡಿದ್ದು 43ನೇ ವರ್ಷದತ್ತ ಮುಂದುವರೆದಿದೆ.

1983, ಡಿಸೆಂಬರ್ 20ಕ್ಕೆ ವೈದ್ಯಕೀಯ ಸೇವೆಯನ್ನು ಆರಂಭಿಸಿ 42 ವಸಂತಗಳನ್ನು ಪೂರೈಸಿ 43 ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಸರಳ ಸಜ್ಜನಿಕೆಯ ವೈದ್ಯರು ಮುಲ್ಲಾ ಅವರು.ಮುದ್ದೇಬಿಹಾಳದ ಬಸ್ ನಿಲ್ದಾಣದ ಹಿಂಭಾಗದಲ್ಲಿ ಬರುವ ಸಿಟಿ ಕ್ಲಿನಿಕ್ ಹೆಸರಿನಲ್ಲಿ ವೃತ್ತಿ ನಡೆಸುತ್ತಿರುವ ಡಾ.ಮುಲ್ಲಾ ಅವರು, ಬಡವರ ಪರ ಕಾಳಜಿ ಉಳ್ಳವರು.

ಅವರ ಶಿಷ್ಯ ಬಳಗದವರಲ್ಲಿ ಡಾ.ಮುಲ್ಲಾ ಅವರ ಕುರಿತು ವ್ಯಕ್ತವಾಗುವ ಪ್ರೀತಿ ತುಂಬಿದ ಮಾತುಗಳೇ ಡಾ.ಮುಲ್ಲಾ ಎಂತಹ ಸರಳ ಜೀವಿ ಎನ್ನುವುದನ್ನು ತಿಳಿಸುತ್ತದೆ.ಅದರಲ್ಲಿ ಮುದ್ದೇಬಿಹಾಳ ಪಟ್ಟಣದ ಸಂತ ಕನಕದಾಸ ಶಾಲೆಯ ಸಹ ಶಿಕ್ಷಕ ಮಂಜುನಾಥ ಸಿ.ಕಬಾಡೆ ಅವರು ಡಾ.ಮುಲ್ಲಾ ಅವರ ಬಗ್ಗೆ ಹೇಳುವ ಮಾತುಗಳು ಹೀಗಿವೆ. ಶಿಕ್ಷಕ ವೃತ್ತಿಯಲ್ಲಿದ್ದ ಡಾ.ಮುಲ್ಲಾ ಅವರ ತಂದೆಯವರ ಮಾರ್ಗದರ್ಶನ ಮತ್ತು
ಆಶಿರ್ವಾದದಿಂದ ವೈದ್ಯಕೀಯ ಸೇವೆಗೆ ಅಣಿಯಾಗುವ ಡಾ.ಮುಲ್ಲಾ ಅವರು ಕಳೆದ ನಾಲ್ಕು ದಶಕಗಳಿಂದ ದಣಿವರಿಯದ ಸೇವೆಯನ್ನು ಜನತೆಗೆ ಮಾಡುತ್ತಾ ಬಂದಿದ್ದಾರೆ.ಅAದಿನಿAದ- ಇಂದಿನವರೆಗೂ ಸದಾ ತಮ್ಮ ಸೇವೆಯ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ.. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ.ಹಣ ಇಲ್ಲದೇ ಆಸ್ಪತ್ರೆಗೆ ಬಂದ ಹಲವಾರು ರೋಗಿಗಳಿಗೆ, ಅವರೇ ಔಷಧಿಗಾಗಿ ದುಡ್ಡು ಕೊಟ್ಟು ಚಿಕಿತ್ಸೆ ನೀಡಿ ಕಳಿಸಿರುವ ಅನೇಕ ಘಟನೆಗಳು ನನ್ನ ಕಣ್ಣ ಮುಂದೆ ನಡೆದಿವೆ ಎಂಬುದನ್ನು ನೆನಪಿಸಿಕೊಂಡರು.

ದಸ್ತು ಬರಹಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಬಾಗವಾನ ಅವರು ಮಾತನಾಡಿ, ಮುದ್ದೇಬಿಹಾಳದಲ್ಲಿ ಡಾ.ಪದಕಿ ನಂತರದ ಸ್ಥಾನ ಡಾ.ಮುಲ್ಲಾ ಅವರಿಗೆ ಇದೆ.ಮೃದುಮನಸ್ಸಿನವರು,ಮಾತುಗಳಲ್ಲೇ ರೋಗಿಯ ನೋವು,ರೋಗ ಕಡಿಮೆ ಮಾಡುವ ಕೈಗುಣ ಮುಲ್ಲಾರವರದ್ದು.ಮುದ್ದೇಬಿಹಾಳದಲ್ಲಿರುವ ವೈದ್ಯರನ್ನು ಒಗ್ಗೂಡಿಸಿ ಸಂಘಟನೆ ಮಾಡಿದ ಮೊದಲಿಗರು ಡಾ.ಮುಲ್ಲಾ ಅವರು.ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಜನಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ.ಕುAಟೋಜಿ ಜಾತ್ರೆಯೊಂದರ ಸಮಯದಲ್ಲಿ ನೀರು ಕುಡಿದು ಅಸ್ವಸ್ಥಗೊಂಡಿದ್ದ ನೂರಾರು ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಮಾನವೀಯ ಸೇವೆ ಸಲ್ಲಿಸಿರುವ ಹೃದಯವಂತ ಡಾ.ಮುಲ್ಲಾರವರು ಎಂದು ನೆನಪಿಸಿಕೊಂಡರು.

ಇವರ ಆಸ್ಪತ್ರೆಗೆ ಮುದ್ದೇಬಿಹಾಳ ನಗರವಷ್ಟೇ ಅಲ್ಲದೇ ಬಂಟನೂರದ ನೇತ್ರಾವತಿ ಮಠ ಮಾತನಾಡಿ, ಡಾ.ಮುಲ್ಲಾ ಅವರು ಶಾಂತ ಸ್ವಭಾವದ ವ್ಯಕ್ತಿ. ಹಣದ ಮುಖ ನೋಡುವುದಿಲ್ಲ.ರೋಗಿಯ ಮುಖ ನೋಡುತ್ತಾರೆ ಎಂದು ಹೇಳಿಕೊಂಡರೆ ನೀಲಮ್ಮ ಚಲವಾದಿ, ನೇಬಗೇರಿಯ ಬಸವರಾಜ ಬಿರಾದಾರ, ಡಾ.ಮುಲ್ಲಾ ಅವರ ಜನಸೇವೆಯನ್ನು ನೆನಪಿಸಿಕೊಂಡರು.

ಡಿಸಿಜಿ ನ್ಯೂಸ್‌ನೊಂದಿಗೆ ಮಾತನಾಡಿದ ಡಾ.ಎ.ಎಂ.ಮುಲ್ಲಾ ಅವರು, ವೈದ್ಯಕೀಯ ಸೇವೆಗೆ ಬಂದು ನಾಲ್ಕು ದಶಕಗಳೇ ಉರುಳಿವೆ.ಮುದ್ದೇಬಿಹಾಳದ ಜನತೆ ಸಾಕಷ್ಟು ಅಭಿಮಾನ,ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ.ಬಡವರ ಪರ ಕಾಳಜಿಯನ್ನು ತೋರಬೇಕಾಗಿದ್ದರೆ ಅದು ನಮ್ಮ ತಂದೆಯವರ ಮಾರ್ಗದರ್ಶನ,ಆಶೀರ್ವಾದದ ಫಲ.ಬಡವರ ಸೇವೆ ಫಲಾಪೇಕ್ಷೆಇಲ್ಲದೇ ಮಾಡಿದರೆ ಮೇಲಿರುವ ಭಗವಂತ ಏನು ಕೊಡಬೇಕು ಅದನ್ನು ಕೊಟ್ಟೇ ಕೊಡುತ್ತಾನೆ ಎನ್ನುವ ನಂಬಿಕೆಯಿAದ ನಾನು ಜನಸೇವೆಯಲ್ಲಿ ನಿರತನಾಗಿದ್ದೇನೆ.ಎಂದಿಗೂ ಪ್ರಶಸ್ತಿ,ಮಾನ,ಸನ್ಮಾನಕ್ಕೆ ಆಸೆ ಪಟ್ಟಿಲ್ಲ.ಜನರಿಗೆ ನಾನು ಕೊಟ್ಟ ಚಿಕಿತ್ಸೆ ಫಲ ನೀಡಿ ಗುಣಮುಖರಾಗಿ ಅವರು ಬಂದು ಹರಸುವಾಗ ಆಡುವ ಮಾತುಗಳೇ ನನಗೆ ಬಹುಮಾನ ಎಂದು ಹೇಳಿಕೊಂಡರು.

ಇಂತಹ ಜನಸೇವೆ ಸಲ್ಲಿಸುತ್ತಿರುವ ಡಾ.ಮುಲ್ಲಾರವರ ಸಾರ್ವಜನಿಕ ಸೇವೆಯನ್ನು ಸರ್ಕಾರ,ಸಂಘ ಸಂಸ್ಥೆಗಳು ಗುರುತಿಸಬೇಕಾಗಿದೆ. ಬಡವರ ಪರವಾಗಿರುವ ನಿಮಗಿದೋ ಅವಿಭಜಿತ ಮುದ್ದೇಬಿಹಾಳ ತಾಲ್ಲೂಕಿನ ಸಮಸ್ತ ಜನತೆಯ ಪರವಾಗಿ ಸರ್ ನಿಮಗೆ ಶುಭ ಹಾರೈಕೆಗಳು…

Latest News

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ : ರಾಜ್ಯಾದ್ಯಂತ ಸೋಮವಾರದಿಂದ ಶಾಲೆಗಳು ಆರಂಭಗೊOಡಿದ್ದು ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಪಬ್ಲಿಕ್

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ:             ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ: ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿoದ ಅಮಸರ್ಪಕ ವಿದ್ಯುತ್ ಪೂರೈಕೆ,ರೈತರಿಗೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವ "ಪರಿಸರ ರಕ್ಷಕ" ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಗಿಡಗಳನ್ನು ನೆಟ್ಟು ಬೆಳೆಸಿರುವ, ಸಂರಕ್ಷಿಸಿರುವ ವ್ಯಕ್ತಿಗಳಿಗೆ, ಶಾಲೆ ಕಾಲೇಜುಗಳ ಶಿಕ್ಷಕರು, ಸಂಘ, ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ ಮಾಡಿರುವ ಅರ್ಹರು ತಮ್ಮ ವಿವರಗಳುಳ್ಳ ಅರ್ಜಿಗಳನ್ನು ಜೂನ್ 3 ರೊಳಗೆ, ಅಧ್ಯಕ್ಷರು,

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಎಂ.ಬಿ.ಎಲ್ ಗ್ರೂಪನಿಂದ ಪಟ್ಟಣದಲ್ಲಿ ಮೂರು ವಾರಗಳಿಂದ ಜರುಗುತ್ತಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಫೈನಲ್ ಪಂದ್ಯಾವಳಿ ಮೇ.24 ರಂದು ಜರುಗಲಿದೆ ಎಂದು ಆಯೋಜಕರ ಬಳಗ ತಿಳಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಫೈನಲ್ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಸಂಘಟಕರಲ್ಲೊಬ್ಬರಾದ ಕಾಮರಾಜ ಬಿರಾದಾರ, ಈಗಾಗಲೇ ನಿಡಗುಂದಿ ತಂಡವನ್ನು ಸೋಲಿಸಿ ಆಲಮಟ್ಟಿ ತಂಡ ಫೈನಲ್ ತಲುಪಿದ್ದು ಮೇ.24 ರಂದು ಜರುಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮುದ್ದೇಬಿಹಾಳ ಹಾಗೂ