Distribution of Kits for Ramadan Celebrations: Donation should be motivation, not propaganda: Satish Oswal

ರಂಜಾನ್ ಹಬ್ಬದ ಆಚರಣೆಗೆ ಕಿಟ್ ವಿತರಣೆ:ದಾನ, ಧರ್ಮ ಪ್ರಚಾರವಾಗದೇ ಪ್ರೇರಣೆಯಾಗಿರಲಿ: ಸತೀಶ ಓಸ್ವಾಲ್

ರಂಜಾನ್ ಹಬ್ಬದ ಆಚರಣೆಗೆ ಕಿಟ್ ವಿತರಣೆ:ದಾನ, ಧರ್ಮ ಪ್ರಚಾರವಾಗದೇ ಪ್ರೇರಣೆಯಾಗಿರಲಿ: ಸತೀಶ ಓಸ್ವಾಲ್

ಮುದ್ದೇಬಿಹಾಳ : ಸಮಾಜಕ್ಕೆ ಪ್ರೇರಣೆಯಾಗುವ ಸೇವೆಯನ್ನು ನಾವೆಲ್ಲ ಮಾಡಬೇಕು ಎಂದು ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್ ಹೇಳಿದರು.

ಪಟ್ಟಣದ ಮೇಲಿನ ಓಣಿಯಲ್ಲಿ ಲಾಡ್ಲೇಮಶ್ಯಾಕ್ ನಾಯ್ಕೋಡಿ ಕುಟುಂಬದವರಿಂದ ಭಾನುವಾರ ಬಡ ಮುಸ್ಲಿಂರಿಗೆ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಚಿಂತನೆಯಳ್ಳವರಿಂದ ಇಂತಹ ಕಾರ್ಯ ಸಾಧ್ಯ ಎಂದರು.

ಸಹಕಾರಿ ಧುರೀಣ ಲಾಡ್ಲೇಮಶಾಕ ನಾಯ್ಕೋಡಿ ಮಾತನಾಡಿ, ನನ್ನ ತಾಯಿಯ ಆಸೆಯಂತೆ ಏಳು ವರ್ಷದಿಂದ ಆಹಾರಧಾನ್ಯ ಕಿಟ್‌ನ್ನು ಕೊಡುವ ಕೆಲಸ ಮಾಡುತ್ತಿದ್ದೇವೆ. ನಾವು ಇದು ಪ್ರಚಾರಕ್ಕೆ ಮಾಡುತ್ತಿಲ್ಲ. ಇದು ಮತ್ತೊಬ್ಬರಿಗೆ ಪ್ರೇರಣೆದಾಯಕವಾಗಲಿ ಎಂದು ಕಿಟ್ ವಿತರಿಸುತ್ತಿದ್ದೇವೆ ಎಂದರು.

ಎಂಜಿವಿಸಿ ಕಾಲೇಜು ಪ್ರಾಧ್ಯಾಪಕ ಅಬ್ದುಲರಹೀಮ ಮುಲ್ಲಾ ಮಾತನಾಡಿ, ಶ್ರೀಮಂತರು ಧಾನ ಧರ್ಮ ಮಾಡುವೂದು ದೊಡ್ಡದಲ್ಲ. ಆದರೆ ಲಾಡ್ಲೇಮಶಾಕ ನಾಯ್ಕೋಡಿ ಅವರು ಅಷ್ಟೊಂದು ಉಳ್ಳವರಲ್ಲ. ಮಧ್ಯಮ ವರ್ಗದಲ್ಲಿದ್ದುಕೊಂಡು ತಾವು ದುಡಿದ ಆದಾಯದಲ್ಲಿ ಬಡವರಿಗೆ ಮೀಸಲಿಟ್ಟು ರಂಜಾನ ತಿಂಗಳಲ್ಲಿ ಜಕಾತಿನ ಹೆಸರಲ್ಲಿ ತಮ್ಮ ಸಮಾಜ ಅಷ್ಟೇ ಅಲ್ಲದೆ ಇತರೆ ಸಮಾಜದ ಬಡ ಕುಟುಂಬದವರನ್ನು ಮನೆಗೆ ಕರಿಯಿಸಿ ಆಹಾರಧಾನ್ಯ ಕಿಟ್ ವಿತರಿಸುವುದು ಇನೊಬ್ಬರಿಗೆ ಪೇರಣೆಯಾಗಿದೆ ಎಂದರು.

ದಿವ್ಯ ಸಾನಿದ್ಯವನ್ನು ಮೌಲಾನ ನಿಸಾರಅಹ್ಮದ ಜಾಮಿಯ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಮುಖಂಡರಾದ ಎಂ. ಬಿ. ಜಕ್ಕೇರಾಳ, ಹೈದರಲಿ ನಾಯ್ಕೋಡಿ, ರಫೀಕ ಶಿರೋಳ, ಅಜೀಜ್ ಢವಳಗಿ, ನಬೀಲಾಲ ನಾಯ್ಕೋಡಿ, ದಾವಲಬಿ ನಾಯ್ಕೋಡಿ, ಬುಡ್ಡೇಸಾಬ ಚಪ್ಪರಬಂದ ಇದ್ದರು.

Latest News

Jocuri Egt 5 Sloturi nv casino Ş Tobă Online Degeaba Online

ContentJocuri Spre Hârtie Simple Și Antrenante Pentru Copii +5 Epocă -

mostbet.com скачать: как быстро и безопасно установить приложение в Казахстане В

MUDDEBIHAL ; ವಿದ್ಯಾಸ್ಪೂರ್ತಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಸಂಕ್ರಾಂತಿ ಸಡಗರ

MUDDEBIHAL ; ವಿದ್ಯಾಸ್ಪೂರ್ತಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಸಂಕ್ರಾಂತಿ ಸಡಗರ

ಮುದ್ದೇಬಿಹಾಳ ; ಪಟ್ಟಣದ ವಿದ್ಯಾನಗರದಲ್ಲಿರುವ ವಿದ್ಯಾಸ್ಪೂರ್ತಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಬುಧುವಾರ ಮಕರ ಸಂಕ್ರಾಂತಿ

ಅಸ್ಕಿ ಫೌಂಡೇಶನ್‌ದಿoದ ಸಾಧಕರ ಸನ್ಮಾನ:                          ಸಹಜ ಸನ್ಮಾನಗಳಿಗೆ ಸಮಾಜದಲ್ಲಿ ಗೌರವ-ಹಿರೇಮಠ

ಅಸ್ಕಿ ಫೌಂಡೇಶನ್‌ದಿoದ ಸಾಧಕರ ಸನ್ಮಾನ: ಸಹಜ ಸನ್ಮಾನಗಳಿಗೆ ಸಮಾಜದಲ್ಲಿ ಗೌರವ-ಹಿರೇಮಠ

ಮುದ್ದೇಬಿಹಾಳ : ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು ಅಂತಹ ಸನ್ಮಾನಗಳು ಸಮಾಜದಲ್ಲಿ ಗೌರವ

ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಜಿಲ್ಲಾ ಅಧಿಕಾರಿಗೆ ಮನವಿ.

ಕಚಕನೂರ ಗ್ರಾಮದ : ಯಾದಗಿರಿ ಜಿಲ್ಲೆಯ, ಹುಣಸಗಿ ತಾಲೂಕಿನ ಕಚಕನೂರ ಗ್ರಾಮದ ಸ.ನಂ. 122/3 ಎ. 6-10 ಎ-ಗು ಜಮೀನು ಪರ್ವತಗೌಡ ತಂ/ ಚನ್ನಮಲ್ಲಪ್ಪ ಹೆಸರಿಗೆ ಇದ್ದು, ಮೃತಪಟ್ಟಿದ್ದು, ಮೃತರಿಗೆ 2 ಜನ ಹೆಂಡತಿಯರಿದ್ದು, ಕಾನೂನು ಬದ್ಧವಾಗಿ ಮೊದಲನೇ ಹೆಂಡತಿ ಮಕ್ಕಳ ಹೆಸರಿಗೆ ವಾರಸಾ ವರ್ಗಾವಣೆ ಮಾಡದೇ, ನಕಲಿ ದಾಖಲೆ ಸೃಷ್ಟಿಸಿ, ಮಕ್ಕಳಿಲ್ಲದ 2ನೇ ಹೆಂಡತಿಗೆ ವರ್ಗಾವಣೆ ಆಗಿದ್ದು, ರದ್ದುಪಡಿಸಿ, ತಹಸೀಲ್ದಾರರು, ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ

ಸ್ವಾಮಿ ವಿವೇಕಾನಂದ ಜಯಂತಿ:ಸದ್ಗುಣಯುಕ್ತ ವಿದ್ಯೆಗೆ ವಿಶ್ವ ಮಾನ್ಯತೆ-ಹೆಗಡೆ

ಸ್ವಾಮಿ ವಿವೇಕಾನಂದ ಜಯಂತಿ:ಸದ್ಗುಣಯುಕ್ತ ವಿದ್ಯೆಗೆ ವಿಶ್ವ ಮಾನ್ಯತೆ-ಹೆಗಡೆ

ಮುದ್ದೇಬಿಹಾಳ : ವಿವೇಕ ಸದ್ಗುಣಯುಕ್ತ ವಿದ್ಯೆಗೆ ವಿಶ್ವ ಮಾನ್ಯತೆ ಸದಾ ಇರುತ್ತದೆ ಎಂದು ಜ್ಞಾನ ಭಾರತಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು. ಪಟ್ಟಣದ ಸಂಗಮೇಶ್ವರ ನಗರದ ರೇವಣಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜಿಸಿರುವ ರಾಷ್ಟೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವೇಕಾನಂದರು ಯುವ ಜನತೆಗೆ ಸದಾ ಅನುಕರಣೀಯರಾಗಿದ್ದಾರೆ. ಸಮಯದ ಸದುಪಯೋಗ, ವಿವೇಕಪ್ರಜ್ಞೆ, ಸಂಸ್ಕಾರ ಇವೆಲ್ಲವೂ ರಕ್ತಗತವಾಗಬೇಕಾಗಿದೆ. ವಿಕಸಿತ ಭಾರತವಾಗಬೇಕಾದಲ್ಲಿ ಮಾನವ ಸಂಪನ್ಮೂಲದ ಸದ್ಬಳಕೆ ತೀರಾ ಅವಶ್ಯಕ ಎಂದು ಹೇಳಿದರು.