ಬ್ರಿಲಿಯಂಟ್ ಕಲಾವೈಭವದಲ್ಲಿ ಗಮನ ಸೆಳೆದ ಭವ್ಯ ವೇದಿಕೆ; ಮನಸ್ಸಿಗೆ ಮುದ ನೀಡಿದ ಮಕ್ಕಳ ಸಾಂಸ್ಕೃತಿಕ ವೈಭವ

ಬ್ರಿಲಿಯಂಟ್ ಕಲಾವೈಭವದಲ್ಲಿ ಗಮನ ಸೆಳೆದ ಭವ್ಯ ವೇದಿಕೆ; ಮನಸ್ಸಿಗೆ ಮುದ ನೀಡಿದ ಮಕ್ಕಳ ಸಾಂಸ್ಕೃತಿಕ ವೈಭವ

ತಾಳಿಕೋಟಿ : ತಾಲ್ಲೂಕಿನ ಮೈಲೇಶ್ವರ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಶಾಲೆಯಲ್ಲಿ ಎರಡು ದಿನಗಳ ಕಲಾ ವೈಭವ-2026ರ ಮೊದಲ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಬ್ರಿಲಿಯಂಟ್ ಶಾಲೆಯ 2026 ನೇ ಸಾಲಿನ ಕಲಾ ವೈಭವಕ್ಕೆಂದು ಸಿದ್ಧಪಡಿಸಿದ್ದ ಭವ್ಯ ವೇದಿಕೆ ಸಾರ್ವಜನಿಕರ,ಪಾಲಕರು,ವಿದ್ಯಾರ್ಥಿಗಳು ,ಅಧಿಕಾರಿಗಳ ಗಮನ ಸೆಳೆಯುವಂತಿತ್ತು.ಸಾಮಾನ್ಯವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ,ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸರಕಾರಿ ಕಾರ್ಯಕ್ರಮಗಳ ಸಾಮರ್ಥ್ಯದಷ್ಟು ವಿಸ್ತಾರವಾದ ವೇದಿಕೆಯನ್ನು ಹಾಕಿದ್ದು ಕಲಾವೈಭವದ ಮೆರಗು ಹೆಚ್ಚಿಸಿತು. ನೃತ್ಯದಲ್ಲೂ ವಿದ್ಯಾರ್ಥಿಗಳಿಂದ ಬಾಲಕಾರ್ಮಿಕ ಪದ್ಧತಿ, ಹಾಸ್ಯ, ಸಮಾಜ ಸೇವೆ, ಧಾರ್ಮಿಕ, ಶೈಕ್ಷಣಿಕ ವಿಷಯಗಳನ್ನು ನೃತ್ಯಗಳ ಮೂಲಕ ಪ್ರಸ್ತುತಪಡಿಸಿದ್ದು ಪಾಲಕರ ಮನಸ್ಸು ಗೆದ್ದಿತು.ಪ್ರತಿ ನೃತ್ಯದ ನಿರೂಪಣೆಯನ್ನು ವಿದ್ಯಾರ್ಥಿಗಳೇ ಮಾಡುತ್ತಿರುವುದು ಸಾಂಸ್ಕೃತಿಕ ಕಾರ್ಯಕ್ರಮಗಳ ಘನತೆಯನ್ನು ಮತ್ತಷ್ಟು ಹೆಚ್ಚಿಸಿತು. ಹಿರಿಯರ ಬಗ್ಗೆ ಗೌರವ ಹೊಂದಲು ಮಕ್ಕಳಿಂದ ತಾಯಂದಿರ ಪಾದಪೂಜೆ ಮಾಡಿಸುವ ಕಾರ್ಯಕ್ರಮ ಹಿರಿಯರು ತಲೆದೂಗುವಂತೆ ಮಾಡಿತು.

Latest News

ಕಬ್ಬು ಪೂರೈಸಲು ರೈತರಿಗೆ ಮನವಿ:                                                                 ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಕಬ್ಬು ಪೂರೈಸಲು ರೈತರಿಗೆ ಮನವಿ: ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಮುದ್ದೇಬಿಹಾಳ : ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಒಡೆತನದ ಆರ್.ಬಿ.ಶುಗರ‍್ಸ್ನಲ್ಲಿ ನ.20 ರಂದು ಕಬ್ಬು

ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿಗೆ 35 ಲಕ್ಷ ರೂ. ದೇಣಿಗೆ ; ಸಿ.ಬಿ.ಅಸ್ಕಿ ಭರವಸೆ

ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿಗೆ 35 ಲಕ್ಷ ರೂ. ದೇಣಿಗೆ ; ಸಿ.ಬಿ.ಅಸ್ಕಿ ಭರವಸೆ

ಮುದ್ದೇಬಿಹಾಳ : ಹಾಲಿ,ಮಾಜಿ ಶಾಸಕರು,ಸರ್ಕಾರಗಳಿಂದ ಬೀರಪ್ಪನ ಬೆಟ್ಟದ ದೇವಸ್ಥಾನ ಹಾಗೂ ಸಂಪರ್ಕ ರಸ್ತೆಯ ಅಭಿವೃದ್ಧಿಪಡಿಸಲು

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ; ಆಕ್ಷೇಪಣೆ ಸಲ್ಲಿಕೆಗೆ ಸೂಚನೆ

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ; ಆಕ್ಷೇಪಣೆ ಸಲ್ಲಿಕೆಗೆ ಸೂಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ಉಪ ನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ ನಗರ ಮತ್ತು ಗ್ರಾಮಾಂತರ

ಸಮಾಜ ಸೇವಕ ಎಂ.ಎನ್.ಮದರಿ ಹೇಳಿಕೆ :                                    ನ.10 ರಂದು ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ,ಧರ್ಮಸಭೆ

ಸಮಾಜ ಸೇವಕ ಎಂ.ಎನ್.ಮದರಿ ಹೇಳಿಕೆ : ನ.10 ರಂದು ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ,ಧರ್ಮಸಭೆ

ಮುದ್ದೇಬಿಹಾಳ : ತಾಲ್ಲೂಕಿನ ಅಡವಿ ಹುಲಗಬಾಳದ ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯ ಮತ್ತು ಸಿಡಿಯಾನ ದ್ಯಾಮವ್ವ

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ:                                 ತಡ ರಾತ್ರಿಯವರೆಗೂ ನಡೆಯಲಿದೆ ಸಂಧಾನ ಸಭೆ…!?

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ತಡ ರಾತ್ರಿಯವರೆಗೂ ನಡೆಯಲಿದೆ ಸಂಧಾನ ಸಭೆ…!?

ಮುದ್ದೇಬಿಹಾಳ : ಕಬ್ಬು ಬೆಳೆಗಾರರಿಗೆ ಮಂಗಳವಾರ ಸಿಹಿ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ಇನ್ನೂ ಈಡೇರಿಲ್ಲ.ತಾಲ್ಲೂಕಿನ ಹುಲ್ಲೂರು ಗ್ರಾಮದಲ್ಲಿ ಹೆದ್ದಾರಿ ಬಂದ್ ಮಾಡಿ ನಡೆದಿರುವ ರೈತರ ಹೋರಾಟದ ಸ್ಥಳದಲ್ಲಿ ರಾತ್ರಿ 9 ಗಂಟೆಯವರೆಗೂ ಖಚಿತ ತೀರ್ಮಾನ ಹೊರಬಿದ್ದಿಲ್ಲ. ಹೋರಾಟದ ಸ್ಥಳದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ, ಕಬ್ಬು ಬೆಳೆಗಾರರ ಹಿತ ಕಾಯಬೇಕಾದ ಜನಪ್ರತಿನಿಧಿಗಳು,ಸಕ್ಕರೆ ಕಾರ್ಖಾನೆ ಮಾಲೀಕರು ಬೆಳೆಗಾರರ ಬದುಕಿನ

ಟೆನ್ನಿಸ್‌ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್:                      ಆರ್.ಎ.ಸಿ.ಸಿ ತಂಡ ಚಾಂಪಿಯನ್-ಒಂದು ಲಕ್ಷ ರೂ.ಬಹುಮಾನ

ಟೆನ್ನಿಸ್‌ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್: ಆರ್.ಎ.ಸಿ.ಸಿ ತಂಡ ಚಾಂಪಿಯನ್-ಒಂದು ಲಕ್ಷ ರೂ.ಬಹುಮಾನ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಮುದ್ದೇಬಿಹಾಳ ಟೆನ್ನಿಸ್ ಕ್ರಿಕೇಟ್ ಪ್ರಿಮಿಯರ್ ಲೀಗ್-2026ರ ಫೈನಲ್ ಪಂದ್ಯದಲ್ಲಿ ಆರ್.ಎಂ.ಸಿ.ಸಿ ತಂಡ ಗೆಲುವು ಸಾಧಿಸಿದ್ದು ವಿಜೇತ ತಂಡಕ್ಕೆ ಒಂದು ಲಕ್ಷ ರೂ.ಬಹುಮಾನ ವಿತರಿಸಲಾಯಿತು. ಮುಲ್ಲಾ ಟೈಗರ್ಸ್ ಹಾಗೂ ಆರ್‌ಎಸಿಸಿ ತಂಡದ ಮಧ್ಯೆ ನಡೆದ ಫೈನಲ್ ಪಂದ್ಯದಲ್ಲಿ ಆರ್.ಎ.ಸಿ.ಸಿ ತಂಡ ಜಯಭೇರಿ ಸಾಧಿಸಿತು. ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ,ಗೆಳೆಯರ ಬಳಗದ ಮುಖಂಡ ಕಾಮರಾಜ ಬಿರಾದಾರ,ಅಂಜುಮನ ಸಮೀತಿ ಸದಸ್ಯ ಮಹಿಬೂಬ್ ಮುಲ್ಲಾ,ಹಮೀದ್