Demand for fulfillment of demands of crop surveyors

ಬೆಳೆ ಸಮೀಕ್ಷೆದಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಬೆಳೆ ಸಮೀಕ್ಷೆದಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಮುದ್ದೇಬಿಹಾಳ : ಬೆಳೆ ಸಮೀಕ್ಷೆದಾರರನ್ನು ಕಾಯಂಗೊಳಿಸುವುದು, ಜೀವ ವಿಮೆ ಒದಗಿಸುವುದು ಹಾಗೂ ಸೇವಾ ಭದ್ರತೆಗಾಗಿ ಆಗ್ರಹಿಸಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ಅಧ್ಯಕ್ಷ ರಮೇಶ ಇಂಗಳಗಿ ಮಾತನಾಡಿ, ಕಳೆದ ಏಳೆಂಟು ವರ್ಷಗಳಿಂದ ಬೆಳೆ ಸಮೀಕ್ಷೆದಾರರೆಂದು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಈ ಸಮಯದಲ್ಲಿ ಹೊಲದಲ್ಲಿ ವಿಷಜಂತುಗಳು, ಕಾಡುಪ್ರಾಣಿಗಳ ದಾಳಿಯಿಂದ ತೊಂದರೆಗೆ ಒಳಗಾಗಿದ್ದೇವೆ. ಹಿಂದೆ ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡ ಹಾಗೂ ಕೋಡ್ಲಾ ಗ್ರಾಮದಲ್ಲಿ ಇಬ್ಬರು ಪಿಆರ್ ಬೆಳೆ ಸಮೀಕ್ಷೆದಾರರಿಗೆ ಹಾವು ಕಚ್ಚಿರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಿರುವುದಿಲ್ಲ. ಜೀವದ ಆಸೆ ಬಿಟ್ಟು ಶ್ರದ್ಧೆಯಿಂದ ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಕೃಷಿ ಇಲಾಖೆಯಿಂದ ಗುರುತಿನ ಚೀಟಿ, ದಿನಗೂಲಿ ಆಧಾರದ ಮೇಲೆ ನಿತ್ಯ ಕೆಲಸ, ಜೀವ ವಿಮೆ ಹಾಗೂ ಎಲ್ಲ ಪಿ.ಆರ್‌ಗಳಿಗೆ ರೇನ್ ಕೋಟ್, ಶೂಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ಶಿರಸ್ತೇದಾರ ಎಂ. ಎಸ್. ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಬಸವರಾಜ ತಾರನಾಳ, ಸಲೀಮ ಮಕಾನದಾರ, ಬಸವರಾಜ ದೊಡಮನಿ, ವಿಠ್ಠಲ ಲಮಾಣಿ, ಪರಸಪ್ಪ ಹಾದಿಮನಿ, ಮಂಜುನಾಥ ಹರನಾಳ, ಭೀಮಣ್ಣ ಪೂಜಾರಿ ಮೊದಲಾದವರು ಇದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೂ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.

Latest News

ಮಹೆಬೂಬ ನಗರ-ಬಿದರಕುಂದಿ ನಗರ ಸಾರಿಗೆಗೆ ಚಾಲನೆ

ಮಹೆಬೂಬ ನಗರ-ಬಿದರಕುಂದಿ ನಗರ ಸಾರಿಗೆಗೆ ಚಾಲನೆ

ಮುದ್ದೇಬಿಹಾಳ : ಸಾರ್ವಜನಿಕರ ಬೇಡಿಕೆಯೆ ಮೇರೆಗೆ ಶಾಸಕ ಸಿ.ಎಸ್.ನಾಡಗೌಡ ಅವರ ಸೂಚಿಸಿದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ

ಕಾರು ಅಪಘಾತ ಓರ್ವನಿಗೆ ಗಾಯ

ಕಾರು ಅಪಘಾತ ಓರ್ವನಿಗೆ ಗಾಯ

ಕುಳಗೇರಿ ಕ್ರಾಸ್: ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕಾರು ಕುಳಗೇರಿ ಕ್ರಾಸ್ ನ ನಯರಾ ಪೆಟ್ರೋಲ್

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಇಳಕಲ್ಲ: ತಾಲೂಕಿನ ಗಡಿಸುಂಕಾಪುರ ಗ್ರಾಮದ ಹತ್ತಿರ ಇಳಕಲ್ ದತ್ತ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿಯ ಜಾಗೆಯ ಕುರಿತು ಕಲಬುರ್ಗಿ ಉಚ್ಛ ನ್ಯಾಯಾಲಯ ಸರ್ವೆ ನಂ.98ಕ್ಕೆ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ಹುನಗುಂದ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ ನಾಗೂರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹೊಸಮನಿ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಕರ್ತರ ಸಂಘದ ನೂತನ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಹರ್ಷಕುಮಾರ ದೇಸಾಯಿ, ಬಸವರಾಜ ನಿಡಗುಂದಿ ಹಾಗೂ ದೇವೇಂದ್ರಪ್ಪ ಕುರಿ (ಖಜಾಂಚಿ), ಮಲ್ಲಿಕಾರ್ಜುನ ಬಂಡರಗಲ್ (ಸಹ ಕಾರ್ಯದರ್ಶಿ) ಸ್ಥಾನಕ್ಕೆ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಪಾಟೀಲ, ಬಸವರಾಜ ಕಮ್ಮಾರ, ಚಂದ್ರು ಗಂಗೂರ,

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ಹುನಗುಂದ : ಕಾಶಪ್ಪನವರ ಮನೆತನದ ಹೆಸರು ಹುನಗುಂದ ವಿಧಾನ ಸಭಾ ಮತಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗದೇ ಇಂದು ಜಿಲ್ಲೆ, ರಾಜ್ಯ, ದೇಶ ವಿದೇಶಗಳಲ್ಲಿ ಗುರುತಿಸುವಂತೆ ಬೆಳೆದು ನಿಂತಿರುವ ಮಾಜಿ ಸಚಿವ ದಿ. ಎಸ್. ಆರ್. ಕಾಶಪ್ಪನವರ ಮಾಡಿದ ಸಾರ್ವಜನಿಕ, ರೈತ ಪರವಾದ ಯೋಜನೆಯಾದ ಮರೋಳ ಏತ ನೀರಾವರಿ, ಹನಿ ನೀರಾವರಿ, ಏಷ್ಯಾ ಖಂಡದಲ್ಲಿಯೇ ಇಂದು ಈ ಯೋಜನೆ ಮಹತ್ವದಿಂದ ಹುನಗುಂದ ಕ್ಷೇತ್ರ ಗುರುತಿಸುವಂತಾಗಲೂ ಕಾಶಪ್ಪನವರ ದೂರದ ದೃಷ್ಟಿಯಿಂದ ಸಾಧ್ಯವಾಗಿದೆ. ತಂದೆ ಮಾಜಿ