Chance to win Rs 50 Lakh Scholarship: Talent Award Test at Nagarabetta on April 6

50 ಲಕ್ಷ ರೂ.ಸ್ಕಾಲರ್‌ಶಿಪ್ ಗೆಲ್ಲುವ ಅವಕಾಶ :ಏ.6 ರಂದು ನಾಗರಬೆಟ್ಟದಲ್ಲಿ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ

50 ಲಕ್ಷ ರೂ.ಸ್ಕಾಲರ್‌ಶಿಪ್ ಗೆಲ್ಲುವ ಅವಕಾಶ :ಏ.6 ರಂದು ನಾಗರಬೆಟ್ಟದಲ್ಲಿ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕು ನಾಗರಬೆಟ್ಟದ ಬಸ್ ನಿಲ್ದಾಣದ ಬಳಿ ಇರುವ ಆಕ್ಸಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆಯ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಏ. 6 ರಂದು ಟ್ಯಾಲೆಂಟ್ ಅವಾರ್ಡ್-2025 ಸ್ಕಾಲರ್‌ಶಿಪ್ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಚೇರಮನ್ ಬಿ.ಜಿ.ಮಠ ತಿಳಿಸಿದರು.

ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಸ್ಕಾಲರ್‌ಶಿಪ್ ಪರೀಕ್ಷೆಯ ವಿವರಗಳನ್ನು ಅವರು ನೀಡಿದರು.

ಒಟ್ಟು 50 ಲಕ್ಷ ರೂ. ಮೌಲ್ಯದ ಸ್ಕಾಲರ್‌ಶಿಪ್ ಪರೀಕ್ಷೆ ಇದಾಗಿದ್ದು ಮೊದಲ ಐದು ರ‍್ಯಾಂಕ್ ಬರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಇನ್ನುಳಿದ 15 ವಿದ್ಯಾರ್ಥಿಗಳಿಗೆ ಎರಡು ವರ್ಷದ ಪಿಯು ಶಿಕ್ಷಣ ಉಚಿತವಾಗಿ ಸಂಸ್ಥೆಯಿದ ನೀಡಲಾಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯಿಂದ 2024ರಲ್ಲಿ ಡೆಂಟಲ್ 3, ಬಿಎಎಂಎಸ್ ನಾಲ್ಕು, ಪಶು ಇಲಾಖೆ 2, ಬಿಎಸ್ಸಿ ಅಗ್ರಿ 33, ಇಂಜಿನಿಯರಿಂಗ್ 121 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ನೀಟ್‌ನಲ್ಲೂ ಉತ್ತಮ ಸಾಧನೆ ತೋರಿದ್ದಾರೆ ಎಂದು ಹೇಳಿದರು.

ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನ ಪ್ರಾಚಾರ್ಯ ಇರ್ಫಾನ್ ಬಾಗವಾನ ಮಾತನಾಡಿ, ಟ್ಯಾಲೆಂಟ್ ಅವಾರ್ಡ್ ಸ್ಕಾಲರ್‌ಶಿಪ್ ಪರೀಕ್ಷೆ ಬರೆಯುವ ಮೊದಲ ಐದು ವಿದ್ಯಾರ್ಥಿಗಳಿಗೆ ನಗದು ಬಹುಮಾನ, 15 ವಿದ್ಯಾರ್ಥಿಗಳಿಗೆ ಸಂಪೂರ್ಣ ಸೇರಿ ಒಟ್ಟು 20 ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಎರಡು ವರ್ಷ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದರು. ಪ್ರಥಮ ಬಹುಮಾನ 25,000 ರೂ. ನಗದು 2.25 ಲಕ್ಷ ರೂ. ಸ್ಕಾಲರಶಿಪ್ ಸೇರಿ 2.50 ಲಕ್ಷ ರೂ, ಎರಡನೇ ಬಹುಮಾನ 20,000 ರೂ. ನಗದು 2.25 ಲಕ್ಷ ರೂ. ಸ್ಕಾಲರಶಿಪ್ ಸೇರಿ 2.45 ಲಕ್ಷ ರೂ, ಮೂರನೇ ಬಹುಮಾನ 15,000 ರೂ. ನಗದು 2.25 ಲಕ್ಷ ರೂ. ಸ್ಕಾಲರಶಿಪ್ ಸೇರಿ 2.40 ಲಕ್ಷ ರೂ, ನಾಲ್ಕನೇ ಬಹುಮಾನ 10 ಸಾವಿರ ರೂ. ನಗದು 2.25 ಸ್ಕಾಲರಶಿಪ್ ಸೇರಿ 2.35 ಲಕ್ಷ ರೂ, ಐದನೇ ಬಹುಮಾನ 5000 ರೂ. ನಗದು 2.25 ಲಕ್ಷ ರೂ. ಸ್ಕಾಲರ್‌ಶಿಪ್ ಸೇರಿ 2.30 ಲಕ್ಷ ರೂ ನೀಡಲಾಗುತ್ತದೆ ಎಂದು ಹೇಳಿದರು.

ಎಸ್.ಡಿ.ಕೆ ಆಂಗ್ಲಮಾಧ್ಯಮ ಪ್ರೌಢಶಾಲೆ ಮುಖ್ಯಗುರು ಶಿವಯ್ಯ ಹಿರೇಮಠ ಮಾತನಾಡಿ, ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಎಕ್ಸಾಂಗೆ ಹಾಜರಾಗಬಹುದು ಎಂದು ತಿಳಿಸಿದರು.

ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಗುರು ಹೀರೂ ನಾಯಕ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸಲು ಆಕ್ಸಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆಯು ಒಂದು ಉತ್ತಮ ವೇದಿಕೆ ಒದಗಿಸುತ್ತದೆ. ಪಾಲಕರು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಂಸ್ಥೆಯ ಸದಸ್ಯ ಪ್ರಜ್ವಲ ಮಠ, ಕಾರ್ಯದರ್ಶಿ ಸಿದ್ದಯ್ಯ ಮಠ, ಸಿಬ್ಬಂದಿ ಎಲ್.ಎಚ್.ನದಾಫ ಇದ್ದರು.

ಪರೀಕ್ಷೆಗೆ ಬರಲು ಮುದ್ದೇಬಿಹಾಳದಲ್ಲಿ ಏ.6 ರಂದು ಬೆಳಗ್ಗೆ 9 ರಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಲು ಮೊ. 9686906101 ಸಂಪರ್ಕಿಸಬಹುದು. ಆಸಕ್ತರು ಮೊ. 8197422759, 7019251923, 8095191614 ಸಂಪರ್ಕಿಸಬಹುದಾಗಿದೆ.

Latest News

Jocuri Egt 5 Sloturi nv casino Ş Tobă Online Degeaba Online

ContentJocuri Spre Hârtie Simple Și Antrenante Pentru Copii +5 Epocă -

mostbet.com скачать: как быстро и безопасно установить приложение в Казахстане В

MUDDEBIHAL ; ವಿದ್ಯಾಸ್ಪೂರ್ತಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಸಂಕ್ರಾಂತಿ ಸಡಗರ

MUDDEBIHAL ; ವಿದ್ಯಾಸ್ಪೂರ್ತಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಸಂಕ್ರಾಂತಿ ಸಡಗರ

ಮುದ್ದೇಬಿಹಾಳ ; ಪಟ್ಟಣದ ವಿದ್ಯಾನಗರದಲ್ಲಿರುವ ವಿದ್ಯಾಸ್ಪೂರ್ತಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಬುಧುವಾರ ಮಕರ ಸಂಕ್ರಾಂತಿ

ಅಸ್ಕಿ ಫೌಂಡೇಶನ್‌ದಿoದ ಸಾಧಕರ ಸನ್ಮಾನ:                          ಸಹಜ ಸನ್ಮಾನಗಳಿಗೆ ಸಮಾಜದಲ್ಲಿ ಗೌರವ-ಹಿರೇಮಠ

ಅಸ್ಕಿ ಫೌಂಡೇಶನ್‌ದಿoದ ಸಾಧಕರ ಸನ್ಮಾನ: ಸಹಜ ಸನ್ಮಾನಗಳಿಗೆ ಸಮಾಜದಲ್ಲಿ ಗೌರವ-ಹಿರೇಮಠ

ಮುದ್ದೇಬಿಹಾಳ : ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು ಅಂತಹ ಸನ್ಮಾನಗಳು ಸಮಾಜದಲ್ಲಿ ಗೌರವ

ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಜಿಲ್ಲಾ ಅಧಿಕಾರಿಗೆ ಮನವಿ.

ಕಚಕನೂರ ಗ್ರಾಮದ : ಯಾದಗಿರಿ ಜಿಲ್ಲೆಯ, ಹುಣಸಗಿ ತಾಲೂಕಿನ ಕಚಕನೂರ ಗ್ರಾಮದ ಸ.ನಂ. 122/3 ಎ. 6-10 ಎ-ಗು ಜಮೀನು ಪರ್ವತಗೌಡ ತಂ/ ಚನ್ನಮಲ್ಲಪ್ಪ ಹೆಸರಿಗೆ ಇದ್ದು, ಮೃತಪಟ್ಟಿದ್ದು, ಮೃತರಿಗೆ 2 ಜನ ಹೆಂಡತಿಯರಿದ್ದು, ಕಾನೂನು ಬದ್ಧವಾಗಿ ಮೊದಲನೇ ಹೆಂಡತಿ ಮಕ್ಕಳ ಹೆಸರಿಗೆ ವಾರಸಾ ವರ್ಗಾವಣೆ ಮಾಡದೇ, ನಕಲಿ ದಾಖಲೆ ಸೃಷ್ಟಿಸಿ, ಮಕ್ಕಳಿಲ್ಲದ 2ನೇ ಹೆಂಡತಿಗೆ ವರ್ಗಾವಣೆ ಆಗಿದ್ದು, ರದ್ದುಪಡಿಸಿ, ತಹಸೀಲ್ದಾರರು, ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ

ಸ್ವಾಮಿ ವಿವೇಕಾನಂದ ಜಯಂತಿ:ಸದ್ಗುಣಯುಕ್ತ ವಿದ್ಯೆಗೆ ವಿಶ್ವ ಮಾನ್ಯತೆ-ಹೆಗಡೆ

ಸ್ವಾಮಿ ವಿವೇಕಾನಂದ ಜಯಂತಿ:ಸದ್ಗುಣಯುಕ್ತ ವಿದ್ಯೆಗೆ ವಿಶ್ವ ಮಾನ್ಯತೆ-ಹೆಗಡೆ

ಮುದ್ದೇಬಿಹಾಳ : ವಿವೇಕ ಸದ್ಗುಣಯುಕ್ತ ವಿದ್ಯೆಗೆ ವಿಶ್ವ ಮಾನ್ಯತೆ ಸದಾ ಇರುತ್ತದೆ ಎಂದು ಜ್ಞಾನ ಭಾರತಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು. ಪಟ್ಟಣದ ಸಂಗಮೇಶ್ವರ ನಗರದ ರೇವಣಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜಿಸಿರುವ ರಾಷ್ಟೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವೇಕಾನಂದರು ಯುವ ಜನತೆಗೆ ಸದಾ ಅನುಕರಣೀಯರಾಗಿದ್ದಾರೆ. ಸಮಯದ ಸದುಪಯೋಗ, ವಿವೇಕಪ್ರಜ್ಞೆ, ಸಂಸ್ಕಾರ ಇವೆಲ್ಲವೂ ರಕ್ತಗತವಾಗಬೇಕಾಗಿದೆ. ವಿಕಸಿತ ಭಾರತವಾಗಬೇಕಾದಲ್ಲಿ ಮಾನವ ಸಂಪನ್ಮೂಲದ ಸದ್ಬಳಕೆ ತೀರಾ ಅವಶ್ಯಕ ಎಂದು ಹೇಳಿದರು.