Nadahalli demands apology from CM, Home Minister

ಸಿಎಂ, ಗೃಹ ಸಚಿವರು ಕ್ಷಮೆಯಾಚಿಸಲು ನಡಹಳ್ಳಿ ಆಗ್ರಹ

ಸಿಎಂ, ಗೃಹ ಸಚಿವರು ಕ್ಷಮೆಯಾಚಿಸಲು ನಡಹಳ್ಳಿ ಆಗ್ರಹ

ಮುದ್ದೇಬಿಹಾಳ : ಸಿಇಟಿ ಪರೀಕ್ಷೆ ಬರೆಯುವುದಕ್ಕೆ ತೆರಳಿದ್ದ ಜನಿವಾರ ಸಮಾಜದವರೊಂದಿಗೆ ಅನುಚಿತವಾಗಿ ನಡೆದುಕೊಂಡ ಘಟನೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ಪರಮೇಶ್ವರ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು.

ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.‌ ಜನಿವಾರ ವಿಪ್ರ ಸಮಾಜವೂ ಸೇರಿ ಹಲವು ಸಮಾಜದವರ ಪ್ರಾತಿನಿಧಿಕ ಸಂಕೇತವಾಗಿದ್ದು ಅದಕ್ಕೆ ಪವಿತ್ರ ಭಾವನೆಯಿಂದ ಕಾಣಲಾಗುತ್ತಿದೆ. ಆದರೆ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತಗೆಯಿಸಿರುವ ಕ್ರಮ ತೀವ್ರ ಖಂಡನೀಯವಾಗಿದ್ದು ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುವ ಬೀದರ್, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರ ಮೇಲೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಹಿಂದೂ ಧರ್ಮೀಯರ ಆಚರಣೆಗಳು, ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಅವಮಾನಕರ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇದ್ದು ಅದನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಹಿಂದೂಗಳೇನು ಭಯೋತ್ಪಾದಕರೇ ಎಂದು ಖಾರವಾಗಿಅಂತಹ ಘಟನೆಗಳಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸೈನಿಕ ಎಸ್. ಆರ್. ಕುಲಕರ್ಣಿ ಮಾತನಾಡಿ, ಜನಿವಾರವನ್ನು ತಗೆದಿರುವ ಉದ್ದೇಶವನ್ನು ವಿಚಾರಿಸಿದಾಗ ಅದರಿಂದ ಪರೀಕ್ಷೆಯಲ್ಲಿ ನೇಣು ಹಾಕಿಕೊಂಡರೆ ಎಂದು ಅಪಹಾಸ್ಯ ಮಾಡುವಂತಹ ದಾಷ್ಟತ್ಯೆ ಅಲ್ಲಿನ ಸಿಬ್ಬಂದಿ ತೋರಿದ್ದು ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಬಿ. ಪಿ. ಕುಲಕರ್ಣಿ, ವಾಸುದೇವ ಶಾಸ್ತ್ರಿ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಆನಂದ ತುಪ್ಪದ, ಜನಿವಾರ ಸಮಾಜ ಪ್ರತಿನಿಧಿಸುವ 18 ಸಮಾಜಗಳ ಪ್ರತಿನಿಧಿಗಳು ಇದ್ದರು.

Latest News

ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಂಗಲ:                 ತುಳಿಯುವವರ ಮಧ್ಯೆ ಬೆಳೆದು ನಿಲ್ಲುವುದೇ ಸಾಧನೆ-ಸಿದ್ಧಲಿಂಗ ಶ್ರೀ

ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಂಗಲ: ತುಳಿಯುವವರ ಮಧ್ಯೆ ಬೆಳೆದು ನಿಲ್ಲುವುದೇ ಸಾಧನೆ-ಸಿದ್ಧಲಿಂಗ ಶ್ರೀ

ಮುದ್ದೇಬಿಹಾಳ : ಎಲ್ಲದಕ್ಕೂ ಮನಸ್ಸೆ ಕಾರಣವಾಗಿದ್ದು ಇನ್ನೊಬ್ಬರ ಮನೆ ಹಾಳು ಮಾಡುವುದು ಮನಸ್ಸೇ ಆಗಿದೆ.ತುಳಿಯುವವರ

ಮುದ್ದೇಬಿಹಾಳ : ಸಾಯಿ ಇಂಡೆನ್ ಗ್ಯಾಸ್ ಎಜೆನ್ಸಿ ವಿರುದ್ದ ಕ್ರಮಕ್ಕೆ ಆಗ್ರಹ

ಮುದ್ದೇಬಿಹಾಳ : ಸಾಯಿ ಇಂಡೆನ್ ಗ್ಯಾಸ್ ಎಜೆನ್ಸಿ ವಿರುದ್ದ ಕ್ರಮಕ್ಕೆ ಆಗ್ರಹ

ಮುದ್ದೇಬಿಹಾಳ ತಾಲೂಕಿನ ಸಾಯಿ ಇಂಡೆನ್ ಗ್ಯಾಸ್ ಸರ್ವಿಸ್ ಎಜೆನ್ಸಿಯವರು ಗ್ಯಾಸ್ ವಿತರಣಾ ಸೇವೆಯಲ್ಲಿ ವಿಳಂಬ

ನಾಲತವಾಡ ವೈದ್ಯರ ವರ್ಗಾವಣೆಗೆ ವಿರೋಧ

ನಾಲತವಾಡ ವೈದ್ಯರ ವರ್ಗಾವಣೆಗೆ ವಿರೋಧ

ನಾಲತವಾಡ : ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳಿನಿAದ ಒಳ್ಳೆಯ ಸೇವೆ ನೀಡುತ್ತಿದ್ದ ವೈದ್ಯ

ಹಿಂದಿನ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ:  ಮುದ್ದೇಬಿಹಾಳ ಅಂಜುಮನ್ ಸಂಸ್ಥೆಯ ಅವ್ಯವಹಾರ ತನಿಖೆಗೆ ಆಗ್ರಹ

ಹಿಂದಿನ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ: ಮುದ್ದೇಬಿಹಾಳ ಅಂಜುಮನ್ ಸಂಸ್ಥೆಯ ಅವ್ಯವಹಾರ ತನಿಖೆಗೆ ಆಗ್ರಹ

ಮುದ್ದೇಬಿಹಾಳ : ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿಯ 2018ರ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ

BREAKING : ನಟ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ಫಿಕ್ಸ್.!

BREAKING : ನಟ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ಫಿಕ್ಸ್.!

ಬೆಂಗಳೂರು: ಹೀರೋ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದು, 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಎನ್ನಲಾಗಿದೆ. ಇತ್ತೀಚೆಗೆ ಈ ಇಬ್ಬರೂ ಬಹಳ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಇಬ್ಬರೂ ಎಲ್ಲಿಯೂ ನಿಶ್ಚಿತಾರ್ಥದ ಫೋಟೋ ಗಳನ್ನು ಹಂಚಿಕೊಂಡಿಲ್ಲ, ವಿಜಯ್ ಮತ್ತು ರಶ್ಮಿಕಾ. ನಿಶ್ಚಿತಾರ್ಥದ ನಂತರ, ಅವರು ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಆದಾಗ್ಯೂ, ಅವರ ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು

ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಸುಮಲತಾ ಕ್ಷೌರದ ಹಾವೇರಿ ವಿಶ್ವವಿದ್ಯಾಲಯ ಮಹಿಳಾ ಯೋಗಾಸನ ತಂಡಕ್ಕೆ ಆಯ್ಕೆ.

ಶಿಗ್ಗಾಂವ: ಶಿಗ್ಗಾಂವ ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾಪಟುಗಳು ಯೋಗಾಸನ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.ಹಾವೇರಿ ವಿಶ್ವವಿದ್ಯಾಲಯ, ಕೆರೆಮತ್ತಿಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಯೋಗಾಸನ ಕ್ರೀಡೆಯಲ್ಲಿ ಹಾವೇರಿ ವಿಶ್ವವಿದ್ಯಾಲಯ ಮಹಿಳಾ ತಂಡದ ವಿ.ವಿ ಆಯ್ಕೆ ಪ್ರಕ್ರಿಯೆ ಜರುಗಿದ್ದು, ಈ ಆಯ್ಕೆಯಲ್ಲಿ ಶ್ರೀ ರಂಭಾಪುರಿ ಪದವಿ ಮಹಾವಿದ್ಯಾಲಯದ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಸುಮಲತಾ ಕ್ಷೌರದ ಅವರು ಹಾವೇರಿ ವಿಶ್ವವಿದ್ಯಾಲಯ ಮಹಿಳಾ ಯೋಗಾಸನ