ಹಿಂದಿನ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ: ಮುದ್ದೇಬಿಹಾಳ ಅಂಜುಮನ್ ಸಂಸ್ಥೆಯ ಅವ್ಯವಹಾರ ತನಿಖೆಗೆ ಆಗ್ರಹ

ಹಿಂದಿನ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ: ಮುದ್ದೇಬಿಹಾಳ ಅಂಜುಮನ್ ಸಂಸ್ಥೆಯ ಅವ್ಯವಹಾರ ತನಿಖೆಗೆ ಆಗ್ರಹ

ಮುದ್ದೇಬಿಹಾಳ : ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿಯ 2018ರ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಕಮೀಟಿಯ ಆಸ್ತಿ ಹಾಗೂ ಹಣಕಾಸಿನ ಎಲ್ಲ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಹಿರಿಯ ವಕೀಲ ಎನ್.ಆರ್.ಮೊಕಾಶಿ ಆಗ್ರಹಿಸಿದರು.

ಪಟ್ಟಣದ ಹುಡ್ಕೋ ಹೇಮರಡ್ಡಿ ಸರ್ಕಲ್ ಬಳಿ ಇರುವ ಮದರಿ ಕಾಂಪ್ಲೆಕ್ಸ್ನಲ್ಲಿರುವ ಪಂಜುರ್ಲಿ ಹೊಟೇಲ್ ಸಭಾಂಗಣದಲ್ಲಿ ಬುಧವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಅಂಜುಮನ್ ಕಮೀಟಿಯ ಹೆಸರಿನ ಅಂಗಡಿಗಳನ್ನು ಒಬ್ಬೊಬ್ಬ ಸದಸ್ಯರು ಎರಡ್ಮೂರು ಅಂಗಡಿಗಳನ್ನು ಪಡೆದುಕೊಂಡು ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ಕೊಟ್ಟಿದ್ದಾರೆ.ಆಡಳಿತಾಧಿಕಾರಿ ನೇಮಕವಾಗಿದ್ದರೂ ಅವರು ಸಂಸ್ಥೆಯ ವ್ಯವಹಾರಗಳನ್ನು ಪಾರದರ್ಶಕವಾಗಿ ನಿಭಾಯಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಅಂಜುಮನ್ ಇಸ್ಲಾಂ ಕಮೀಟಿಯ ಅಡಿಯಲ್ಲಿ ಅನುದಾನಿತ ಪ್ರೌಢಶಾಲೆ,ಐಟಿಐ ಕಾಲೇಜುಗಳಿದ್ದರೂ ಅಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಸಮಾಜದ ಮಕ್ಕಳು ಇಲ್ಲ.ಗುಣಮಟ್ಟದ ಶಿಕ್ಷಣ ದೊರೆಯದ ಕಾರಣ ಬೇರೆ ಕಡೆ ಖಾಸಗಿಯವರ ಬಳಿ ಹೆಚ್ಚಿನ ಹಣ ಕೊಟ್ಟು ಮಕ್ಕಳು ಓದುವ ಪರಿಸ್ಥಿತಿ ಇದೆ ಎಂದು ಹೇಳಿದರಲ್ಲದೇ ನಮ್ಮ ಆರೋಪ ಯಾವುದೇ ವ್ಯಕ್ತಿ ಪರ,ವಿರುದ್ಧವಲ್ಲ ಎಂದು ಹೇಳಿದರು.

ಅಂಜುಮನ್ ಹಿತರಕ್ಷಣಾ ವೇದಿಕೆ ಮುಖಂಡ ಮಹೆಬೂಬ ಹಡಲಗೇರಿ ಮಾತನಾಡಿ, ಅಂಜುಮನ್ ಇಸ್ಲಾಂ ಕಮೀಟಿಯ ಹೆಸರಿನಲ್ಲಿ ಬಿದರಕುಂದಿಯ ಸರ್ವೆ ನಂ.180/6/2ರಲ್ಲಿ 1.15 ಎಕರೆ ಜಮೀನು ಖಾಸಗಿ ವ್ಯಕ್ತಿಗಳಿಗೆ ಮಾರಾಟಕ್ಕೆ ಮುಂದಾಗಿದ್ದು ಅದನ್ನು ತನಿಖೆಗೆ ಒಳಪಡಿಸುವಂತೆ ಪೊಲೀಸ್ ಠಾಣೆಯಲ್ಲಿ 2023ರಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.ಮುಸ್ಲಿಂ ಸಮಾಜದ ಖಬರಸ್ಥಾನದ ಅಭಿವೃದ್ಧಿಗೆ ಸಮಾಜದವರಿಂದ ಸಂಗ್ರಹಿಸಿದ್ದ ಅಂದಾಜು 30 ಲಕ್ಷ ರೂ.ಗಳನ್ನು ಹಿಂದಿನ ಅಧ್ಯಕ್ಷರು ತಮ್ಮ ಹೆಸರಿನಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಜಮಾ ಮಾಡಿಕೊಂಡಿದ್ದಾರೆ ಎಂದು ದೂರಿದರು.

ವಕೀಲ ಶಬ್ಬೀರ ಬಾಗಲಕೋಟ ಮಾತನಾಡಿ, ಅಂಜುಮನ್ ಸಂಸ್ಥೆಯ ಲೆಕ್ಕಪತ್ರಗಳನ್ನು ಸರಿಯಾಗಿ ಇಡದ ಕಾರಣ ತೆರಿಗೆ ಇಲಾಖೆಯಿಂದ 42 ಲಕ್ಷ ರೂ.ದಂಡ ಹಾಕಲಾಗಿದೆ.ಜು.,2025ರಿಂದ ಸಂಸ್ಥೆಯ ಬ್ಯಾಂಕ್ ಖಾತೆಗಳು ನಿಷ್ಕಿçÃಯವಾಗಿವೆ.2019-20ರಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ 50 ಲಕ್ಷ ರೂ.ಮಂಜೂರಾತಿ ದೊರೆತಿದ್ದು ಅದರಲ್ಲಿ ಒಂದನೇ ಕಂತಾಗಿ 25 ಲಕ್ಷ ರೂ.ಬಿಡುಗಡೆ ಆಗಿತ್ತು.ಅದರಲ್ಲಿ 12,33,880 ರೂ.ಬಳಕೆ ಮಾಡಿಕೊಂಡಿದ್ದು ಬಾಕಿ ಉಳಿದ 12,66,120 ಗಳ ಕುರಿತು ಆಡಳಿತ ಮಂಡಳಿ ದುರ್ಬಳಕೆ ಮಾಡಿಕೊಂಡಿರುತ್ತಾರೆ ಎಂದು ದೂರಿದರು.

ಮಹೆಬೂಬ ನಗರದ ನಿವಾಸಿ ಮಹ್ಮದ ನಾಗರಾಳ ಮಾತನಾಡಿ, ಅಂಜುಮನ್ ಕಮೀಟಿಯ ಅವ್ಯವಹಾರದ ಕುರಿತು ಧ್ವನಿ ಎತ್ತುವವರ ವಿರುದ್ದ ಹಿಂದಿನ ಆಡಳಿತ ಮಂಡಳಿಯವರು ಹೊಡೆಯಲು ಬರುತ್ತಾರೆ.ಅಂತವರ ಧ್ವನಿ ಅಡಗಿಸಲು ಗುಂಪುಗಳನ್ನು ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದರು.

ವಕೀಲ ಎಂ.ಎ.ಲಿAಗಸೂರು ಮಾತನಾಡಿ,ಅಂಜುಮನ್ ಕಮೀಟಿ ಆಡಳಿತಾಧಿಕಾರಿ ತಬಸ್ಸುಮ ಮಹೇಷವಾಡಗಿ ಸಂಸ್ಥೆಯ ಮೇಲಿನ ಎಲ್ಲ ಲೆಕ್ಕಪತ್ರಗಳ ಬಗ್ಗೆ ನಿಗಾವಹಿಸಿದ ಹಿಂದಿನ ಆಡಳಿತ ಮಂಡಳಿ ಅಣತಿಯಂತೆ ನಡೆದುಕೊಳ್ಳುತ್ತಿರುವುದು ಸಾಮಾನ್ಯ ಮುಸ್ಲಿಂ ಜನಾಂಗಕ್ಕೆ ಅನ್ಯಾಯವಾಗುತ್ತಿದೆ.ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿದ್ದು ಅದರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಹಿತರಕ್ಷಣಾ ವೇದಿಕೆ ಮುಖಂಡರಾದ ಯಾಸೀನ ಸೋಠೆ, ವಕೀಲ ಎಂ.ಸಿ.ಮ್ಯಾಗೇರಿ,ಹುಸೇನಭಾಷಾ ಹುಣಚಗಿ,ಅಲ್ಲಾಭಕ್ಷö್ಯ ಶಿರೋಳ,ಅಬ್ದುಲಮಜೀದ ಶಿರೋಳ ಮೊದಲಾದವರು ಇದ್ದರು.

ಸಚಿವರಿಗೂ ದೂರು ಕೊಟ್ಟರೂ ಕ್ರಮವಿಲ್ಲ:
ಅಲ್ಪಸಂಖ್ಯಾತ,ಹಜ್ ಹಾಗೂ ವಕ್ಭ್ ಸಚಿವ ಜಮೀರ್‌ಅಹ್ಮದ ಖಾನ್ ಅವರಿಗೆ ಸಂಸ್ಥೆಯ ಅವ್ಯವಹಾರಗಳು ಕುರಿತು ಸಮಗ್ರ ಮಾಹಿತಿ ಸಲ್ಲಿಸಿದ್ದರೂ ಯಾವುದೆ ಕ್ರಮ ಜರುಗಿಸಿಲ್ಲ ಎಂದು ಮುಖಂಡ ಮಹೆಬೂಬ ಹಡಲಗೇರಿ ಆರೋಪಿಸಿದರು.

Latest News

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಮುದ್ದೇಬಿಹಾಳ : ಕಿರು ಹಾಗೂ ಮಧ್ಯಮ ಉದ್ದಿಮೆ ಆರಂಭಿಸಲು ಬಯಸುವವರು ಸಿಡ್ಬಿ ಸಮೃದ್ಧಿ ಯೋಜನೆಯಡಿ

ಶಾಲೆ,ಕಾಲೇಜು,ಬಸ್ ಸಂಚಾರ ಇದೆಯಾ ? ಇಲ್ವಾ ?:                ಸೆ.12 ರಂದು ಪಕ್ಷಾತೀತವಾಗಿ ಮುದ್ದೇಬಿಹಾಳ ಬಂದ್ ಕರೆ

ಶಾಲೆ,ಕಾಲೇಜು,ಬಸ್ ಸಂಚಾರ ಇದೆಯಾ ? ಇಲ್ವಾ ?: ಸೆ.12 ರಂದು ಪಕ್ಷಾತೀತವಾಗಿ ಮುದ್ದೇಬಿಹಾಳ ಬಂದ್ ಕರೆ

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡುವಂತೆ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ:                   ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ: ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಮುದ್ದೇಬಿಹಾಳ : ಮನುಷ್ಯನಿಗೆ ದೈವ ಬಲದೊಂದಿಗೆ ಗುರುವಿನ ಅವಶ್ಯಕತೆ ಬಹಳವಿದೆ. ಇದರಿಂದಲೇ ಇಂದಿನ ಆಧುನಿಕ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆದಿರುವ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿದ್ದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಯರಝರಿ ಜಿಪಂ ಭಾಗದ ರೈತರು ಬುಧವಾರದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಶಾಸಕರು,ಸರಕಾರಕ್ಕೆ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಳೆ ಕೊರತೆ ಇದೆ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ ಹೇಳಿಕೆಯನ್ನು ತಗೆದುಕೊಂಡರೋ ಗೊತ್ತಿಲ್ಲ.ಸದ್ಯಕ್ಕೆ ಮುಖ್ಯಮಂತ್ರಿಗಳು ಪತ್ರವ್ಯವಹಾರ ನಿಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದೇನೆ.ನನ್ನದು ಸಿದ್ಧಾಂತದ ಮೇಲೆ ಹೋರಾಟ ನಡೆಯುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಬಳಿ ತಮ್ಮನ್ನು ಎದುರಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನನ್ನ ಮಾನಸಿಕ ಸ್ಥಿತಿ ಹೇಗಿದೆ ? ಎಂಬುದನ್ನು ಮತ್ತೊಬ್ಬರಿಂದ ಹೇಳಿಸಿಕೊಳ್ಳಬೇಕಾಗಿಲ್ಲ.ಮಾನಸಿಕ ಚಿಕಿತ್ಸೆಯ ಬಗ್ಗೆ ಕೊಟ್ಟಿರುವ ಮಾತಿಗೆ ನಾನು