ಮುದ್ದೇಬಿಹಾಳ : ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮನ್ನು ಆಧುನಿಕ ಮಾಧ್ಯಮಗಳಲ್ಲಿ ಮಗ್ನರಾಗಿದ್ದು ಮಾನವೀಯ ಮೌಲ್ಯಗಳನ್ನು ಕಲಿತುಕೊಳ್ಳಬೇಕಿದೆ ಎಂದು
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಅಂಗಡಿ ಹೇಳಿದರು.
ಪಟ್ಟಣದ ಎಂ.ಜಿ.ವ್ಹಿ.ಸಿ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕ ಶ್ರೀಕಾಂತ್ ಕೆಂದೊಳ್ಳಿ ಮಾತನಾಡಿ, ಜನಪದ ಸಾಹಿತ್ಯದ ವಿವಿಧ ಆಯಾಮಗಳಾದ ಹಂತಿ ಪದ, ಸೋಬಾನ ಪದ, ಡೊಳ್ಳಿನ ಪದಗಳನ್ನು ಹಾಡಿ ನೆರೆದ ಪ್ರೇಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಜನಪದ ಸಾಹಿತ್ಯದ ಮೌಲ್ಯಗಳ ಕುರಿತು ಅರಿವು ಮೂಡಿಸಿದರು.
ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಸಾಂಸ್ಕೃತಿಕ ವೇದಿಕೆಯ ಮುಖ್ಯಸ್ಥ ಪ್ರಕಾಶ ನರಗುಂದ ಮಾತನಾಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎಸ್.ಎನ್.ಪೋಲೇಶಿ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಅಶೋಕ ಎಸ್ ತಡಸದ, ಆಡಳಿತಾಧಿಕಾರಿ ಎ.ಬಿ.ಕುಲಕರ್ಣಿ, ಕ್ರೀಡಾ ವಿಭಾಗದ ನಿರ್ದೇಶಕ ಎಚ್. ಜಿ. ಪಾಟೀಲ್, ವಿದ್ಯಾರ್ಥಿ ಪ್ರತಿನಿಧಿ ಭಾಗ್ಯಶ್ರೀ ಬೆಲ್ಲದ,ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಎ. ಆರ್. ಮುಲ್ಲಾ ಇದ್ದರು.