ಮುದ್ದೇಬಿಹಾಳ : ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಭರ್ಜರಿ ಮಳೆ ಸುರಿಯಿತು. ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಸಂತೆಗೆ ಬಂದವರು ದಿನಬಳಕೆ ವಸ್ತುಗಳ ಖರೀದಿಗೆ ಪರದಾಡಿದರು. ಪಟ್ಟಣದ ಆಶ್ರಯ ಕಾಲೋನಿಯಲ್ಲಿ ತಗ್ಗು ಪ್ರದೇಶದಲ್ಲಿದ್ದ ಶೆಡ್‌ವೊಂದಕ್ಕೆ ನೀರು ನುಗ್ಗಿ ಶೆಡ್‌ನಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾದವು.
ವೃದ್ಧೆ ಸುಸಲಾಬಾಯಿ ನಾಯಕ ಅವರ ಶೆಡ್‌ದಲ್ಲಿ ನೀರು ನುಗ್ಗಿ ತೊಂದರೆ ಅನುಭವಿಸಿದರು. ದಿನಬಳಕೆ ವಸ್ತುಗಳೆಲ್ಲ ನೀರಲ್ಲಿ ಕೊಚ್ಚಿ ಹೋದವು. ಅಲ್ಲದೇ ಮಳೆನೀರಿಗೆ ತೊಯ್ದು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿವೆ ಎಂದು ವೃದ್ಧೆ ಸುಸಲಬಾಯಿ ನಾಯಕ ಅಲವತ್ತುಕೊಂಡರು.
ಮುದ್ದೇಬಿಹಾಳ ಪಟ್ಟಣವಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲೂ ಮಳೆ ಆಗಿದ್ದು ಹೊಲಗಳಲ್ಲಿ ನೀರು ನಿಂತಿದೆ. ನಾಗರಬೆಟ್ಟ, ಹಿರೇಮುರಾಳ, ಕವಡಿಮಟ್ಟಿ, ಸರೂರು ಭಾಗದಲ್ಲಿ ಮಳೆ ಆಗಿದ್ದು ಕಂಡು ಬಂದಿತು.