Nad Gowda: There is no need to bring politics in the soap business

ಮಾರುಕಟ್ಟೆಯಲ್ಲಿ ಬೆಲೆ ಇದ್ದವರಿಗೆ ಮಣೆ: ಸೋಪು ವ್ಯಾಪಾರದಲ್ಲಿ ರಾಜಕಾರಣ ತರುವುದು ಅಗತ್ಯವಿಲ್ಲ- ನಾಡಗೌಡ

ಮಾರುಕಟ್ಟೆಯಲ್ಲಿ ಬೆಲೆ ಇದ್ದವರಿಗೆ ಮಣೆ: ಸೋಪು ವ್ಯಾಪಾರದಲ್ಲಿ ರಾಜಕಾರಣ ತರುವುದು ಅಗತ್ಯವಿಲ್ಲ- ನಾಡಗೌಡ

ಮುದ್ದೇಬಿಹಾಳ : ಯಾರಿಗೆ ಮಾರುಕಟ್ಟೆಯಲ್ಲಿ ಬೆಲೆ ಇದೆಯೋ ಅಂತವರನ್ನು ತೊಡಗಿಸಿಕೊಂಡು ಮಾರುಕಟ್ಟೆ ತಂತ್ರಗಾರಿಕೆ ಹೆಣೆದರೆ ಮಾತ್ರ ನಮ್ಮ ವ್ಯಾಪಾರ ಹೆಚ್ಚಾಗುವುದಕ್ಕೆ ಸಾಧ್ಯವಿದೆ. ಈ ವಿಷಯದಲ್ಲಿ ರಾಜಕಾರಣ ಮಾಡುವುದು ಅಗತ್ಯವಿಲ್ಲ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಪರಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪು ಮಾರಾಟಕ್ಕೆ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿದ್ದರ ಹಿಂದೆ ಮಾರುಕಟ್ಟೆಯ ತಂತ್ರಗಾರಿಕೆ ಇದೆ. ಅವರಿಗೆ ದೇಶವ್ಯಾಪಿ ಹೆಚ್ಚಿನ ಫಾಲೋವರ್ಸ್ ಇದ್ದು ಅದರಿಂದ ಮಾರಾಟದಲ್ಲಿ ಹೆಚ್ಚಳವಾಗಲಿದೆ ಎಂದರು.

ಈಗಾಗಲೇ ಶೇ.15 ರಿಂದ 18% ರಷ್ಟು ಸೋಪು ಮಾರಾಟ ಹೆಚ್ಚಳವಾಗಿದೆ. ಈ ಮುಂಚೆ ಇಂತಹದ್ದೇ ನಟಿಯನ್ನು ಪ್ರಚಾರಕ್ಕೆ ನೇಮಿಸಲು ನಿರ್ಧಾರ ಮಾಡಿರಲಿಲ್ಲ. ಎಂ. ಬಿ. ಪಾಟೀಲ ಅವರು ಮಂತ್ರಿ ಇದ್ದಾಗ ಈ ನಿರ್ಧಾರ ತಗೆದುಕೊಂಡಿದ್ದರು. ಕರ್ನಾಟಕದ ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ಪೂಜಾ ಮತ್ತಿತರರು ಬೇರೆ ಬೇರೆ ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಅವರನ್ನು ಕೈ ಬಿಟ್ಟು ತಮನ್ನಾ ಅವರನ್ನು ಜಾಹೀರಾತಿನಲ್ಲಿ ತೊಡಗಿಸಿದರೆ ಮಾರುಕಟ್ಟೆಯಲ್ಲಿ ಮೈಸೂರು ಸ್ಯಾಂಡಲ್ ಸೋಪು ಮಾರಾಟ ಹೆಚ್ಚಳಕ್ಕೆ ಅನುಕೂಲವಾಗಲಿದೆ ಎಂಬ ನಿಟ್ಟಿನಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸ್ಥಳೀಯವಾಗಿ ಸಾಮಾನ್ಯ ಜನರನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಕ್ಕೂ ಸಾಧ್ಯವಿದೆ. ಕರ್ನಾಟಕದಲ್ಲಿ ಸಾಮಾನ್ಯ ಜನರು ಸೋಪು ಬಳಸಿದ ಬಳಿಕ ಅದರ ಗುಣಮಟ್ಟ ಹೇಗಿದೆ ಎಂದು ಜಾಹೀರಾತು ಮಾಡಿ ಅದನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುವ ಉದ್ದೇಶವಿದೆ. ನಮಗೆ ಯಾರಿಗೂ ಮನಸ್ಸಿಗೆ ತೊಂದರೆ ಕೊಡುವ ವಿಚಾರವಲ್ಲ. 25-30 ವರ್ಷದ ಹಿಂದೆ ಯರ‍್ಯಾರು ಈ ಸೋಪಿನ ಪ್ರಚಾರ ರಾಯಭಾರಿಗಳಾಗಿದ್ದರು ಎಂಬುದನ್ನು ದಾಖಲೆಗಳ ಸಮೇತ ಮುಂದೆ ಹೇಳುತ್ತೇನೆ. ಮಾರುಕಟ್ಟೆ ತಂತ್ರಗಾರಿಕೆ ಇದು ವ್ಯಾಪಾರ. ಸೀಮಿತವಾಗಿ ಮಾಡುವಂತಹದ್ದಲ್ಲ ಎಂದು ಹೇಳಿದರು.

ಸೌದಿಯಲ್ಲಿ ನಮ್ಮ ರಾಜ್ಯದ ಸೋಪು ಮಾರಬೇಕಾದರೆ ಅಲ್ಲಿನವರ ಮಾಡೆಲ್‌ನವರನ್ನು ತಗೆದುಕೊಂಡೇ ಪ್ರಚಾರ ಮಾಡಬೇಕಾಗುತ್ತದೆ. ಯಾರ ಭಾವನೆಗಳಿಗೂ ಧಕ್ಕೆ ತಂದಿಲ್ಲ. ಮುಂದೊಂದು ದಿನ ಬೇರೆ ಬೇರೆ ರಾಜ್ಯಗಳಲ್ಲಿ ಸೋಪು ಮಾರಾಟ ಮಾಡಬೇಕಾದರೆ ಅಲ್ಲಿನ ಪ್ರಾದೇಶಿಕತೆಯನ್ನೇ ಆಧಾರವಾಗಿಟ್ಟುಕೊಂಡು ನಾವು ಮಾರುಕಟ್ಟೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಮುಖಂಡ ಸಿ.ಬಿ.ಅಸ್ಕಿ, ವಾಯ್. ಎಚ್. ವಿಜಯಕರ್, ಸದು ಮಠ ಇದ್ದರು.

Latest News

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಉಡುಪಿ ಅಕ್ಟೋಬರ್ ೧೦: ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ನಮ್ಮ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ಬೆಂಗಳೂರು : ಋತುಚಕ್ರ ರಜೆ ನೀತಿ - 2025ಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಗೌಡರ ಸಾಲದ ಬಾಧೆ ತಾಳದೇ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಮುದ್ದೇಬಿಹಾಳ : ಪಟ್ಟಣದ ಹುಡ್ಕೋಗೆ ತೆರಳುವ ದ್ವಾರದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತದ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ತುಮಕೂರು, ಅ.8: ಅಸಂಘಟಿತ ವಲಯದಲ್ಲಿ ದುರ್ಬಲರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಆಶಾ ದೀಪ ಯೋಜನೆ, ಗಿಗ್ ಕಾರ್ಮಿಕರ ವಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು. ನಗರ ಹೊರವಲಯದ ಶ್ರೀ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ʼತುಮಕೂರು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ;                             ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ; ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

** ಹೆಬ್ಬಾಳ** ಮುದ್ದೇಬಿಹಾಳ : ಆಗಷ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಹಲವಾರು ಬೆಳೆಗಳು ನೀರಲ್ಲಿ ನಿಂತಿದ್ದು ಅನ್ನದಾತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಭಾಗದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬಹುತೇಕ ಎಲ್ಲ ಬೆಳೆಗಳು ಕೊಳೆತಿವೆ. ಉಳ್ಳಾಗಡ್ಡಿ, ಹತ್ತಿ, ತೊಗರಿ,ಮೆಕ್ಕೆಜೋಳ,ದ್ರಾಕ್ಷಿ,ಬಾಳೆ,ಟೊಮ್ಯಾಟೋ ಅತಿವೃಷ್ಟಿಯಿಂದ ಹೊಲದಲ್ಲಿಯೇ ಹಾಳಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ರೈತ ಬಸವರಾಜ ಕುಂಟೋಜಿ, ಅತೀವೃಷ್ಟಿಯಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ.ಮಳೆ