Everything is possible with education; Bhringeshwar Shri

ಶಿಕ್ಷಣದಿಂದ ಎಲ್ಲವೂ ಸಾಧ್ಯ ; ಭೃಂಗೇಶ್ವರ ಶ್ರೀ

ಶಿಕ್ಷಣದಿಂದ ಎಲ್ಲವೂ ಸಾಧ್ಯ ; ಭೃಂಗೇಶ್ವರ ಶ್ರೀ

ಶಹಾಪುರ : ಇಂದಿನ ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಆಸ್ತಿ ಮಾಡುವ ಬದಲು, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಜೊತೆಗೆ ಮಕ್ಕಳ ಉನ್ನತಿಗೆ ಪೋಷಕರು ಸಹಕಾರ ಅಗತ್ಯವಾಗಿದ್ದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೆಳವ ಸಮಾಜ ಕೋಡಿಹಳ್ಳಿ ಮಠದ ಶ್ರೀ ಬಸವ ಭೃಂಗೇಶ್ವರ ಶ್ರೀಗಳು ತಿಳಿಸಿದರು.

ಅಖಿಲ ಕರ್ನಾಟಕ ಹೆಳವ ಸಮಾಜ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ 2024 – 25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಹೆಳವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶಹಾಪುರ ನಗರದ ಶ್ರೀ ಚರಬಸವೇಶ್ವರ ಗದ್ದುಗೆ ಕಲ್ಯಾಣ ಮಂಟಪದಲ್ಲಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಕುರಿತು ಧುಮ್ಮನಸೂರು ಮಠದ ಶ್ರೀ ಶಂಕರಲಿಂಗ ಸ್ವಾಮಿಗಳು, ಯಾದವ ಸಮುದಾಯದ ಹಿರಿಯ ಮುಖಂಡರಾದ ತಿಮ್ಮಯ್ಯ ಪುರ್ಲೆ, ಕ್ರಾಂತಿ ಪತ್ರಿಕೆ ಸಂಪಾದಕರಾದ ಇಂಧೂಧರ ಸಿನ್ನೂರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಸದಾಶಿವ ನಾರಾಯಣಕರ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಪ್ಪಗೌಡ ಚೌಧರಿ, ಬಸವರಾಜ ಹೆಳವರ ಯಾಳಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ 11 ವಿಧ್ಯಾರ್ಥಿಗಳನ್ನು ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನದ ಜೊತೆಗೆ ಪ್ರತಿಭಾ ಪುರಸ್ಕಾರದ ಮಾಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಹೆಚ್. ಎನ್. ಗೋಗಿ, ಮಲ್ಲಿಕಾರ್ಜುನ ಬಿ. ಹೆಚ್. ಕಲಬುರ್ಗಿ, ಸಾಯಬಣ್ಣ ಹೆಳವರ ಕಲಬುರಗಿ, ಶ್ರೀಮಂತ ಸೌಂದರ್ಗೆ, ಶರಣಪ್ಪ ಕೆಲೂರ, ಹಣಮಂತ್ರಾಯ ಹಳಿಸಗರ, ಸಣ್ಣ ಭಿಮರಾಯ ಯಾಳಗಿ, ಶ್ರೀಕಾಂತ್ ಯಾಳಗಿ, ಪರಶುರಾಮ್ ಮುದನೂರ, ಲಾಲಪ್ಪ ಕಟ್ಟಿಮನಿ, ಹಣಮಂತ್ರಾಯ ಖಾನಾಪುರ, ಚಂದಪ್ಪ ಕಕ್ಕೇರಾ, ನೆಹರೂ ಹಳಿಸಗರ, ದೇವಪ್ಪ ನಗನೂರ, ಭೀಮರಾಯ ದಂಡಸೊಲ್ಲಾಪುರ, ರಾಮಚಂದ್ರ ಹೆಗ್ಗಣದೊಡ್ಡಿ, ಮಲ್ಲಪ್ಪ ದೋರನಳ್ಳಿ, ಭೀಮಣ್ಣ ಹಂಚಿನಾಳ, ಶಿವು ಕಕ್ಕೇರಾ, ಅಂಬ್ರೀಶ್ ಯಾದಗಿರಿ ಸೇರಿದಂತೆ ಇತರರು ಇದ್ದರು.

ರಾಘವೇಂದ್ರ ಮಾಸ್ತರ ನಿರೂಪಿಸಿದರು, ರಮೇಶ ಹೆಳವರ ಸ್ವಾಗತಿಸಿ ವಂದಿಸಿದರು.

ವರದಿ: ಶಿವು ರಾಠೋಡ

Latest News

PSI ಪತ್ನಿ ಆತ್ಮಹತ್ಯೆ!

PSI ಪತ್ನಿ ಆತ್ಮಹತ್ಯೆ!

ಬಳ್ಳಾರಿ: PSI ಪತಿ ಹಾಗೂ ಇಬ್ಬರು ಮಕ್ಕಳನ್ನ ರೆಡಿ ಮಾಡಿ, ಧ್ವಜಾರೋಹಣಕ್ಕೆ ಕಳಿಸಿದ ಬಳಿಕ

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಬೆಂಗಳೂರು: ಮಹಿಳೆಯ ಗರ್ಭಕೋಶದಿಂದ ಮಹತ್ವದ ಶಸ್ತ್ರ ಚಿಕಿತ್ಸೆ ನಡೆಸಿದ ರಾಜಾಜಿನಗರದ ಇಎಸ್‌ಐಸಿ, ಎಂಸಿ ಪಿಜಿಐಎಂಎಸ್‌ಆರ್

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ

ಪಹಲ್ಗಾಮ್ ದಾಳಿಗೆ ಭಾರತದ ಸಮರ್ಥ ಪ್ರತ್ಯುತ್ತರ : ಶಾಸಕ ನಾಡಗೌಡ

ಪಹಲ್ಗಾಮ್ ದಾಳಿಗೆ ಭಾರತದ ಸಮರ್ಥ ಪ್ರತ್ಯುತ್ತರ : ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮಲ್ಲಿರುವ ಆಂತರಿಕ ಭಿನ್ನಭಿಪ್ರಾಯವೇ ದೇಶದ ನಾಗರಿಕರ ಮೇಲಿನ ದಾಳಿಗಳಂತಹ ಘಟನೆಗಳಿಗೆ ವೈರಿ ರಾಷ್ಟ್ರಗಳು ಕೈ ಹಾಕುತ್ತಿವೆ. ನಾವೆಲ್ಲ ಭಾರತ ಅಖಂಡವಾಗಿ ಉಳಿಯುವ ಸಂಕಲ್ಪವನ್ನು ಮಾಡಬೇಕಾಗಿದೆ. ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಸಮರ್ಥವಾಗಿ ಭಾರತದ ಸೇನಾಶಕ್ತಿ ಪ್ರತ್ಯುತ್ತರ ಕೊಟ್ಟಿದೆ ಎಂದು ಮೆಲಕು ಹಾಕಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ತಾಲ್ಲೂಕು ಆಡಳಿತ ಸೌಧ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಧಾರವಾಡ, ಆ.15: ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಧನ್ಯವಾದ ಹೇಳಲು ಮತ್ತು ಅವರ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶ. ನಮ್ಮ ಧ್ವಜವನ್ನು ಹಾರಿಸುವುದು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವುದು ಮತ್ತು ಏಕತೆಯ ಮನೋಭಾವವನ್ನು ರೂಢಿಸಿಕೊಳ್ಳುವ ದಿನವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಹೇಳಿದರು. ಧಾರವಾಡ ಜಿಲ್ಲಾಡಳಿತವು ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ