ಮುದ್ದೇಬಿಹಾಳ : ಪಟ್ಟಣದ ವೀರೇಶ್ವರ ನಗರದ ನಿವಾಸಿ, ಪುರಸಭೆ ಹಿರಿಯ ಸದಸ್ಯ ಚೆನ್ನಪ್ಪ ಸಿದ್ದಪ್ಪ ಕಂಠಿ(89)ಶನಿವಾರ ನಿಧನರಾದರು.
ಅವರಿಗೆ ಪತ್ನಿ, ನಾಲ್ವರು ಪುತ್ರರು,ಪುತ್ರಿ ಇದ್ದಾರೆ. ಪುರಸಭೆಗೆ ಮೂರನೇ ಬಾರಿ ಸದಸ್ಯರಾಗಿರುವ ಅವರು ಒಮ್ಮೆ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಸಾರ್ವಜನಿಕವಾಗಿ ಕಂಠಿ ಕಾಕಾ ಎಂದೇ ಹೆಸರಾಗಿದ್ದರು. ವೀರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಅವರ ಅಂತ್ಯಕ್ರಿಯೆ ಜೂ.22 ರಂದು ಬೆಳಗ್ಗೆ 11 ಕ್ಕೆ ಮುದ್ದೇಬಿಹಾಳದ ಕೈಲಾಸವನದಲ್ಲಿ ನಡೆಯಲಿದೆ.