ನಾರಾಯಣಪುರ : ಮುದ್ದೇಬಿಹಾಳ ದಿಂದ ಸಂಡೂರ್ ಹೋಗುತ್ತಿರುವ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ವ್ಯಕ್ತಿಯೋರ್ವ ಹೃದಯಾಘಾತದಿಂದ ಸಾವನಪ್ಪಿರುವ ಘಟನೆq ನಡೆದಿದೆ.
ಮುದ್ದೇಬಿಹಾಳದಿಂದ ಹಾಲುಬಾಯಿವರೆಗೂ ಪಯಣ ಮಾಡುತ್ತಿರುವಾಗ ಮಾರ್ಗ ಮಧ್ಯ ಭಾಗವಾದ ನಾರಾಯಣಪುರ ಬಸ್ ನಿಲ್ದಾಣದಲ್ಲಿ ಬಂದ ತಕ್ಷಣವೇ ಹೃದಯ ಬಡಿತ ನಿಂತು ಹೋಗಿದೆ. ಮೃತ ದುರ್ದೈವಿ ತಮ್ಮಣ್ಣ(55) ತಂದೆ ಧನಸಿಂಗ್ ಚವ್ಹಾಣ ಎಂದು ತಿಳಿದು ಬಂದಿದೆ.
ಲಿಂಗಸಗೂರು ತಾಲೂಕಿನ ಹಾಲುಬಾವಿ ತಾಂಡ ನಿವಾಸಿ ಇವರಾಗಿದ್ದರು. ದಂಪತಿಗಳು ಕೂಡಿ ಮುದ್ದೇಬಿಹಾಳ ದಿಂದ ಹಾಳಬಾವಿಗೆ ಬರುತ್ತಿರುವಾಗ ಈ ದುರ್ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣವೇ ನಾರಾಯಣಪುರ ಪೊಲೀಸ್ ಠಾಣೆಯವರು ಮಾಹಿತಿ ಪಡೆದುಕೊಂಡಿದ್ದಾರೆ.
ವರದಿಗಾರ : ಶಿವು ರಾಠೋಡ