ಮುಧೋಳ: ಮಹಾನ್ ನಾಯಕರ ಕನಸಿನಂತೆ ಭವ್ಯ ಭಾರತ ನಿರ್ಮಾಣಕ್ಕೆ ಯೋಗ ದಿನ ಪ್ರೇರಣೆಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಶಿವಕುಮಾರ ಎಸ್ ಮಲಘಾಣ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಶಾಲೆ ಆವರಣದಲ್ಲಿ ಶ್ರೀ ಸಂಗಮನಾಥ ಸಿ.ಬಿ.ಎಸ್.ಇ ಹಾಗೂ ಕನ್ನಡ ಮಾಧ್ಯಮ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಹನ್ನೊಂದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಶಿಕ್ಷಕ ಬಿ ಅರ್ ಸಿ ಐ.ಸಿ. ಮಠಪತಿ ಮಾತನಾಡಿ, ಭಾರತೀಯತೆಯನ್ನು ಸಂಭ್ರಮಿಸಬೇಕಾದ ದಿನ ಇದಾಗಿದೆ. ವಿಶ್ವದ ಅಂದಾ ಜು 190 ರಾಷ್ಟ್ರಗಳಲ್ಲಿ ಯೋಗದಿನ ಆಚರಿಸಲಾಗುತ್ತಿದೆ. ಯೋಗದ ರಾಯಬಾರಿಯಾಗಿ ನಮ್ಮ ಪ್ರಧಾನಿಯವರು ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ್ದಾರೆ ನಮ್ಮ ಸನಾತನ ಸಂಸ್ಕೃತಿಯ ಭಾಗವಾದ ಯೋಗ, ಆಯುರ್ವೇದ ಹಾಗೂ ಆಧ್ಯಾತ್ಮಿಕತೆಯನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕು ಎಂದು ಹೇಳಿದರು.
ಎಪಿಎಂಸಿ ಉಪಾಧ್ಯಕ್ಷ ಬೀಮಸಿ ಮೆಟಗುಡ್ಡ ಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ, ಯೋಗ ಶಿಕ್ಷಕ ಐ.ಸಿ. ಮಠಪತಿ, ಮುಖ್ಯ ಶಿಕ್ಷಕ ವೆಂಕಟೇಶ ಗುಡೆಪ್ಪನವರ ಪ್ರಾಚಾರ್ಯ ಸುರೇಶ್ ಭಜಂತ್ರಿ ಇತರರಿದ್ದರು.
ವಿದ್ಯಾರ್ಥಿಗಳಿಂದ ಯೋಗ ದಿನಾಚರಣೆಯ ನಿಮಿತ್ಯ ವಿವಿದ ಭಂಗಿಯ ಯೋಗ ನೃತ್ಯ ಹಾಗೂ ಸಂಗೀತ ದಿನಾಚರಣೆಯ ನೃತ್ಯ ಹಾಗೂ ಗಾಯನ ಜರುಗಿದವು. ಭವಾನೇಶ್ವರಿ ಲೋಂಡೆ ನಿರೂಪಿಸಿ ವಂದಿಸಿದರು
ಮುಧೋಳ ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಶಾಲೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜಿ.ಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ ಉದ್ಘಾಟಿಸಿದರು. ಎಪಿಎಂಸಿ ಉಪಾಧ್ಯಕ್ಷ ಭೀಮಸಿ ಮೆಟಗುಡ್ಡ, ಮಲ್ಲು ಕಳ್ಳೆನ್ನವರ, ಐ.ಸಿ. ಮಠಪತಿ, ಸುರೇಶ ಭಜಂತ್ರಿ, ವೆಂಕಟೇಶ ಗುಡೆಪ್ಪನವರ ಇತರರಿದ್ದರು.