ಮುದ್ದೇಬಿಹಾಳ : ಕೃಷಿ, ಕೈಗಾರಿಕೆಗಳು ಎರಡು ಪ್ರಮುಖ ಕ್ಷೇತ್ರಗಳಾಗಿದ್ದು ದೇಶದ ಅಭಿವೃದ್ದಿಯಲ್ಲಿ ಇವುಗಳ ಕೊಡುಗೆ ಪ್ರಧಾನವಾಗಿವೆ ಎಂದು ರಾಜ್ಯ ಖಾಸಗಿ ಐಟಿಐಗಳ ಸಂಘದ ಅಧ್ಯಕ ಎಸ್. ಎಂ. ನೆರಬೆಂಚಿ ಹೇಳಿದರು.
ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆಯ ಬಿ. ಬಿ. ಆರ್ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಹಾಗೂ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪನಿ, ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಅಭ್ಯರ್ಥಿಗಳಿಗೆ ಈಚೇಗೆ ಏರ್ಪಡಿಸಿದ್ದ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐಟಿಐ ಕಲಿತವರಿಗೆ ನಿರುದ್ಯೋಗದ ಸಮಸ್ಯೆ ಇರುವುದಿಲ್ಲ. ಇವರಿಗೆ ಸರ್ಕಾರಿ, ಎಂಎನ್‌ಸಿ ಹಾಗೂ ಇತರೆ ಕಂಪನಿಗಳಲ್ಲಿ ಬಹಳಷ್ಟು ಬೇಡಿಕೆ ಇದೆ. ಹಾಗಾಗಿ ಯುವಕರು ಹೆಚ್ಚು ಹೆಚ್ಚು ಐಟಿಐ ಕೋರ್ಸ್ಗಳನ್ನು ಕಲಿತು ಉದ್ಯೋಗವಂತರಾಗಬೇಕೆಂದು ಹೇಳಿದರು.
ರೈತ ಸಂಘದ ಮುಖಂಡ ಸಂಗಣ್ಣ ಬಾಗೇವಾಡಿ, ಅಂಜುಮನ್ ಐಟಿಐ ಪ್ರಾಚಾರ್ಯ ಎಂ. ಎಸ್. ಕಡು, ರೈತ ಸಂಘದ ಪ್ರಧಾನ ಕಾರ್ಯದರ್ಶಿ ವಾಯ್. ಎಲ್. ಬಿರಾದಾರ, ಕಾರ್ಯದರ್ಶಿ ದ್ಯಾಮಣ್ಣ ವಡವಡಗಿ, ಹಾರ್ವರ್ಡ್ ಪಿಯು ಕಾಲೇಜ ಪ್ರಾಚಾರ್ಯೆ ರಾಜಶ್ರೀ ರೂಡಗಿ, ಶಿವಪ್ರಸಾದ ಸೂಳಿಭಾವಿ ಇದ್ದರು.
ಟೊಯೋಟಾ ಕಿರ್ಲೊಸ್ಕರ್ ಮೋಟರ್ಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಾಗವೇಣಿ ಹಾಗೂ ಮಂಜುನಾಥ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಿದರು. ವಿವಿಧ ಐಟಿಐಗಳಿಂದ ಸುಮಾರು 50 ಅಭ್ಯರ್ಥಿಗಳಲ್ಲಿ 35 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.