ಹೃದಯಾಘಾತಕ್ಕೆ ಮತ್ತೆ 6 ಮಂದಿ ಬಲಿ

ಹೃದಯಾಘಾತಕ್ಕೆ ಮತ್ತೆ 6 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತ ದಿಂದ ಸಾವನ್ನಪ್ಪುವ ಪ್ರಕರಣ ಹೆಚ್ಚುತ್ತಿದ್ದು, ಭಾನುವಾರ ಮತ್ತೆ ಆರು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದ ಯುವತಿ ಮೀನಾಕ್ಷಿ ಹಾಗೂ ಬಿ. ಹೊಸಹಳ್ಳಿಯ ಸುಮಿತೇಗೌಡ ಮೃತ ಪಟ್ಟಿದ್ದಾರೆ. ಸುಮಿತ್ರೇಗೌಡ ಮನೆಯಲ್ಲಿ ಕುಸಿದು ಬಿದ್ದು ಅಸುನೀಗಿದರು.

ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಹೃದಯಾ ಘಾತವಾಗಿ ಬೆಂಗಳೂರಿನ ಜಯನಗರದ ನಿವಾಸಿ ರಂಗನಾಥ್ ಅಸುನೀಗಿದ್ದಾರೆ. ಪತ್ನಿ, ಪುತ್ರಿ ಜೊತೆ ಮಂಗಳೂರಿಗೆ ಪ್ರವಾಸಕ್ಕೆ ತೆರಳಿದ್ದರು. ಟ್ರಿಪ್ ಮುಗಿಸಿ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾಗ ಎದೆ ನೋವು ಕಾಣಿ ಸಿಕೊಂಡಿತು.

ಹೊಳೆನರಸೀಪುರ ಹಾಸನದ ತಾಲೂಕಿನ ಕೊಂಗಲಬೀಡಿನ ಆನಂದ್ ಹೃದಯಾಘಾತದಿಂದ ಸಾವನ್ನ ಪ್ಪಿದ್ದಾರೆ. ಭಾನುವಾರ ಮುಂಜಾನೆ 4ರ ಸುಮಾರಿಗೆ ತೀವ್ರ ಎದೆನೋವು ಕಾಣಿಸಿದೆ. ಯಾದಗಿರಿ ಜಿಲ್ಲೆಯ ಶೆಟ್ಟಿಕೇರಾ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಅಗ್ನಿ ಕುಂಡ ತುಳಿದ ಕೆಲ ಗಂಟೆಗಳಲ್ಲೇ ಹಳ್ಳೆಪ್ಪ ಪೂಜಾರಿ ಹಠಾತ್ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.

ಅಗ್ನಿಕುಂಡ ತುಳಿದ ನಂತರ ದೇಗುಲ ಪಕ್ಕದ ಕೊಠಡಿಯಲ್ಲಿ ಕುಳಿತು ನೀರು ಕುಡಿಯುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ. ಚಾಮರಾಜನಗರದಲ್ಲಿ 52 ವರ್ಷದ ಶಿವಕುಮಾ‌ರ್ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದು, ಅಲ್ಲಿಯೇ ಅಸುನೀಗಿದರು.

Latest News

ಮಹೆಬೂಬ ನಗರ-ಬಿದರಕುಂದಿ ನಗರ ಸಾರಿಗೆಗೆ ಚಾಲನೆ

ಮಹೆಬೂಬ ನಗರ-ಬಿದರಕುಂದಿ ನಗರ ಸಾರಿಗೆಗೆ ಚಾಲನೆ

ಮುದ್ದೇಬಿಹಾಳ : ಸಾರ್ವಜನಿಕರ ಬೇಡಿಕೆಯೆ ಮೇರೆಗೆ ಶಾಸಕ ಸಿ.ಎಸ್.ನಾಡಗೌಡ ಅವರ ಸೂಚಿಸಿದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ

ಕಾರು ಅಪಘಾತ ಓರ್ವನಿಗೆ ಗಾಯ

ಕಾರು ಅಪಘಾತ ಓರ್ವನಿಗೆ ಗಾಯ

ಕುಳಗೇರಿ ಕ್ರಾಸ್: ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕಾರು ಕುಳಗೇರಿ ಕ್ರಾಸ್ ನ ನಯರಾ ಪೆಟ್ರೋಲ್

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ರಾಜು ಬಡಿಗೇರ ಸ್ಥಳದಲ್ಲಿಯೇ ಸಾವು

ಇಳಕಲ್ಲ: ತಾಲೂಕಿನ ಗಡಿಸುಂಕಾಪುರ ಗ್ರಾಮದ ಹತ್ತಿರ ಇಳಕಲ್ ದತ್ತ ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಎಪಿಎಂಸಿ ವಿವಾದಿತ ಜಾಗೆಯ ಮೋಜಣಿಗೆ ಹೈಕೋರ್ಟ್ ಸೂಚನೆ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿಯ ಜಾಗೆಯ ಕುರಿತು ಕಲಬುರ್ಗಿ ಉಚ್ಛ ನ್ಯಾಯಾಲಯ ಸರ್ವೆ ನಂ.98ಕ್ಕೆ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ಹುನಗುಂದ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ ನಾಗೂರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹೊಸಮನಿ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಕರ್ತರ ಸಂಘದ ನೂತನ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಹರ್ಷಕುಮಾರ ದೇಸಾಯಿ, ಬಸವರಾಜ ನಿಡಗುಂದಿ ಹಾಗೂ ದೇವೇಂದ್ರಪ್ಪ ಕುರಿ (ಖಜಾಂಚಿ), ಮಲ್ಲಿಕಾರ್ಜುನ ಬಂಡರಗಲ್ (ಸಹ ಕಾರ್ಯದರ್ಶಿ) ಸ್ಥಾನಕ್ಕೆ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಪಾಟೀಲ, ಬಸವರಾಜ ಕಮ್ಮಾರ, ಚಂದ್ರು ಗಂಗೂರ,

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ಹುನಗುಂದ : ಕಾಶಪ್ಪನವರ ಮನೆತನದ ಹೆಸರು ಹುನಗುಂದ ವಿಧಾನ ಸಭಾ ಮತಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗದೇ ಇಂದು ಜಿಲ್ಲೆ, ರಾಜ್ಯ, ದೇಶ ವಿದೇಶಗಳಲ್ಲಿ ಗುರುತಿಸುವಂತೆ ಬೆಳೆದು ನಿಂತಿರುವ ಮಾಜಿ ಸಚಿವ ದಿ. ಎಸ್. ಆರ್. ಕಾಶಪ್ಪನವರ ಮಾಡಿದ ಸಾರ್ವಜನಿಕ, ರೈತ ಪರವಾದ ಯೋಜನೆಯಾದ ಮರೋಳ ಏತ ನೀರಾವರಿ, ಹನಿ ನೀರಾವರಿ, ಏಷ್ಯಾ ಖಂಡದಲ್ಲಿಯೇ ಇಂದು ಈ ಯೋಜನೆ ಮಹತ್ವದಿಂದ ಹುನಗುಂದ ಕ್ಷೇತ್ರ ಗುರುತಿಸುವಂತಾಗಲೂ ಕಾಶಪ್ಪನವರ ದೂರದ ದೃಷ್ಟಿಯಿಂದ ಸಾಧ್ಯವಾಗಿದೆ. ತಂದೆ ಮಾಜಿ