ಮುದ್ದೇಬಿಹಾಳ : ನೊಂದು ಬೆಂದು ರೋಗ ಗುಣಪಡಿಸುವಂತೆ ಬರುವ ಜನರಿಗೆ ಒಳ್ಳೆಯ ಸೇವೆಯನ್ನು ವೈದ್ಯರು ನೀಡಬೇಕು ಎಂದು ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊರಪೇಟಿ ಗಲ್ಲಿಯಲ್ಲಿರುವ ಯಮನೂರಪ್ಪನ ಕಟ್ಟೆಯ ಹತ್ತಿರ ನೂತನವಾಗಿ ಆರಂಭಿಸಿರುವ ಬಾಪೂಜಿ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು.ಕುಂಟೋಜಿ ಪರಿವಾರದವರಿಂದ ಈ ಕ್ಲಿನಿಕ್ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಆಸ್ಪತ್ರೆಯಾಗಿ ಬೆಳೆದು ಜನರಿಗೆ ಉತ್ತಮ ಸೇವೆ ಒದಗಿಸುವಂತಾಗಲಿ ಎಂದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಕಿತ್ತೂರು ಕರ್ನಾಟಕ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕಾಶೀಬಾಯಿ ರಾಂಪೂರ ಮಾತನಾಡಿ, ಚರ್ಮರೋಗ ತಜ್ಞರು, ಮಹಿಳೆಯರ ಕೂದಲು ಉದುರುವಿಕೆಗೆ ಪರಿಹಾರ ಒದಗಿಸುವ ವೈದ್ಯರು ಈ ಆಸ್ಪತ್ರೆಯಲ್ಲಿ ದೊರೆಯುತ್ತಿರುವುದು ಪಟ್ಟಣದ ಜನತೆಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಜಿಪಂ ಮಾಜಿ ಸದಸ್ಯ ಹೇಮರಡ್ಡಿ ಮೇಟಿ, ಎಂ.ಬಿ .ನಾವದಗಿ, ಅಬ್ದುಲಗಫೂರ ಮಕಾನದಾರ,ಶಂಕರಗೌಡ ಹಿರೇಗೌಡರ, ಡಾ.ಎ.ಎಂ.ಮುಲ್ಲಾ, ಮುಖಂಡರಾದ ಶರಣು ಸಜ್ಜನ, ಮುಖಂಡ ಅಶೋಕ ನಾಡಗೌಡ, ಏಪಿಎಂಸಿ ಅಡತ್ ವರ್ತಕ ರಫೀಕಅಹ್ಮದ ಕುಂಟೋಜಿ, ಪಂಚ ಗ್ಯಾರಂಟಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಸದ್ದಾಂಹುಸೇನ ಕುಂಟೋಜಿ, ವೈದ್ಯರಾದ ಡಾ.ತಾಹೇರಾ ಕುಂಟೋಜಿ, ಡಾ.ಸಿಮ್ರನ್ ಕುಂಟೋಜಿ ಇದ್ದರು.