ಜ.19 ರಿಂದ ವಿಶ್ವ ದಾಸೋಹ ದಿನ ; ನಾನಾ ಕಾರ್ಯಕ್ರಮ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಮೂರು ದಿನ ನಾಟಕೋತ್ಸವ

ಜ.19 ರಿಂದ ವಿಶ್ವ ದಾಸೋಹ ದಿನ ; ನಾನಾ ಕಾರ್ಯಕ್ರಮ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಮೂರು ದಿನ ನಾಟಕೋತ್ಸವ

ಮುದ್ದೇಬಿಹಾಳ : ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಜನ್ಮದಿನೋತ್ಸವ ಹಾಗೂ ಮಡಿಕೇಶ್ವರದ ದಿ.ಚೆನ್ನಣ್ಣ ದೇಸಾಯಿ ಅವರ ಐದನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜ.19 ರಿಂದ 21ರವರೆಗೆ ವಿವಿಧ ಧಾರ್ಮಿಕ,ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಂಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ನಿವಾಸದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದಾಸೋಹ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ,ಭಕ್ತ ಹಿತಚಿಂತನಾ ಸಭೆ,ರಾಷ್ಟಿçÃಯ ನಾಟಕೋತ್ಸವ,ಎಸ್.ಎಸ್.ಎಲ್.ಸಿ,ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ,ಪೌರಕಾರ್ಮಿಕರಿಗೆ ಸನ್ಮಾನ ನಡೆಯಲಿದ್ದು ಹುಡ್ಕೋದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಮುದ್ದೇಬಿಹಾಳ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸನ್ಮಾನ ಏರ್ಪಡಿಸಲಾಗಿದೆ.ಎಸ್.ಎಸ್.ಎಲ್.ಸಿ ಪಿಯುಸಿಯಲ್ಲಿ ಪ್ರಥಮ ದ್ವಿತೀಯ ಬಂದವರಿಗೆ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಇಟ್ಟಿರುವ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು.60 ವರ್ಷ ಆದವರಿಗೆ ವಾಕಿಂಗ್ ಸ್ಟಿಕ್ ನೀಡಲು ಯೋಜಿಸಲಾಗಿದೆ ಎಂದರು.

ಮೂರು ದಿನಗಳ ಕಾಲ ಉಚಿತವಾಗಿ ನಾಟಕೋತ್ಸವ ನಡೆಯಲಿದೆ. ಟಿವಿ,ಮೊಬೈಲ್‌ದಿಂದ ದೂರವಾಗಿ ಸಾಂಪ್ರದಾಯಿಕ ನಾಟಕ ಕಲೆಯತ್ತ ಜನರನ್ನು ಸೆಳೆಯುವ ಸಲುವಾಗಿ ಸಾಣೇಹಳ್ಳಿ ಮಠದ ಶಿವಕುಮಾರ ಕಲಾಸಂಘದ (ಶಿವಸಂಚಾರ) ತಂಡದಿಂದ ಮೂರು ದಿನಗಳ ನಾಟಕೋತ್ಸವ ಆಯೋಜಿಸಲಾಗಿದೆ. ಜ.19 ರಂದು ಜಂಗಮದೆಡೆಗೆ, ಜ.20 ರಂದು ಕಳ್ಳರಸಂತೆ, ಜ.21 ಶಿವಯೋಗಿ ಸಿದ್ಧರಾಮ ನಾಟಕಗಳು ಜರುಗಲಿವೆ.ಪ್ರತಿ ದಿನ ಸಂಜೆ 7ಕ್ಕೆ ಗವಿಸಿದ್ದೇಶ್ವರ ವೇದಿಕೆಯಲ್ಲಿ ಈ ನಾಟಕಗಳ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.ಜ.21 ರಂದು ಬೆಳಗ್ಗೆ 8ಕ್ಕೆ ಹಡಲಗೇರಿಯ ಹುಲಿಗೆಮ್ಮ ದೇವಿ ಭಜನಾ ಮಂಡಳಿಯಿದ ತತ್ವಪದಗಳ ಭಜನಾಂಜಲಿ ಕಾರ್ಯಕ್ರಮ ನಡೆಯಲಿದೆ.ಪೂಜ್ಯರು ಬಿಟ್ಟರೆ ಬೇರೆ ಯಾವ ವ್ಯಕ್ತಿಗಳ ವೈಭವೀಕರಣ ಇರುವುದಿಲ್ಲ.ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಪೂರ್ವಭಾವಿ ಸಭೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಗಣ್ಯರಾದ ಎಂ.ಬಿ.ನಾವದಗಿ, ಬಿ.ವಿ.ಕೋರಿ, ಮಾತನಾಡಿದರು.

ಕೆಯುಸಿ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್,ಜಿಒಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಹೂಗಾರ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಶರಣು ಸಜ್ಜನ,ಬಸವರಾಜ ದಡ್ಡಿ, ಬಸವರಾಜ ಲಿಂಗದಳ್ಳಿ , ರಾಮಚಂದ್ರ ಹೆಗಡೆ,ಬಾಪುಗೌಡ ಪೀರಾಪೂರ,ಎಂ.ಡಿ.ಕುಂಬಾರ,ರಾಜುಗೌಡ ಗೌಡರ,ಅರವಿಂದ ಕಾಶಿನಕುಂಟಿ,ವೀರೇಶ ಢವಳಗಿ ಇದ್ದರು.

Latest News

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ :                 ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಮಾ.20 ರಂದು ನಡೆಯಲಿರುವ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಸರ್ವ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ

ಮುದ್ದೇಬಿಹಾಳ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಫಲಿತಾಂಶ

ಡೆತ್ ನೋಟ್ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆ

ಮುದ್ದೇಬಿಹಾಳ : ಸಾಲಗಾರರಿಗೆ ಕೊಟ್ಟಿದ್ದ ಹಣ ಮರಳಿ ಕೊಡದ ಕಾರಣಕ್ಕೆ ಮನನೊಂದು ಖಾಸಗಿ ಟ್ರಾವೆಲ್ಸ್ ಏಜೆಂಟ್‌ವೊಬ್ಬರು ಜಮೀನೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ತಾಲ್ಲೂಕಿನ ಬಿದರಕುಂದಿ ಗ್ರಾಮದ ಹತ್ತಿರ ಬೆಳಕಿಗೆ ಬಂದಿದೆ. ಮುದ್ದೇಬಿಹಾಳದಲ್ಲಿ ಎಸ್.ಆರ್.ಎಸ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮೂಲತಃ ಗೋನಾಳ ಎಸ್.ಎಚ್.ಗ್ರಾಮದ ನಿವಾಸಿಯಾಗಿದ್ದ ಚನ್ನಯ್ಯ ಗಂಗಯ್ಯ ಹಿರೇಮಠ(45)ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ನನ್ನ ಸಾವಿಗೆ ರವಿ ನಾಲವಡೆ ಹಾಗೂ ವೈಜನಾಥ ಮರಾಠೆ ಎಂಬುವರು ಕಾರಣರಾಗಿದ್ದಾರೆ ಎಂದು ನಾಲ್ಕು

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಮುದ್ದೇಬಿಹಾಳ : ಬಡ,ಕೂಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ನಮ್ಮ ವಿದ್ಯಾಸಂಸ್ಥೆಯಿoದ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು,ಸಮಾಜ ಸೇವಕರಾದ ಎಂ.ಎನ್.ಮದರಿ ಹೇಳಿದರು. ಪಟ್ಟಣದ ಅಭ್ಯುದಯ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಹಿಲ್ಯಾದೇವಿ ಹೋಳ್ಕರ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅವರು ಮಾತನಾಡಿದರು.2017ರಿಂದ ಇಲ್ಲಿವರೆಗೆ ವಿವಿಧ ಸಾಧನೆಗಳನ್ನು ಶಾಲೆ ಮಾಡುತ್ತ ಬಂದಿದೆ.ಇಬ್ಬರು