Press Day on June 26: Awards for best journalists

ಜು.26 ರಂದು ಪತ್ರಿಕಾ ದಿನಾಚರಣೆ: ಉತ್ತಮ ಪತ್ರಕರ್ತರಿಗೆ ಪ್ರಶಸ್ತಿಗೆ

ಜು.26 ರಂದು ಪತ್ರಿಕಾ ದಿನಾಚರಣೆ: ಉತ್ತಮ ಪತ್ರಕರ್ತರಿಗೆ ಪ್ರಶಸ್ತಿಗೆ

ಮುದ್ದೇಬಿಹಾಳ : ಕಾರ್ಯನಿರತ ಪತ್ರಕರ್ತರ ಸಂಘದಿಂದ ಜು.26 ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದ್ದು ನಗರ,ಗ್ರಾಮೀಣ ಭಾಗದ ಐವರು ಪತ್ರಕರ್ತರಿಗೆ ಹಾಗೂ ಒಬ್ಬರನ್ನು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಮುತ್ತು ವಡವಡಗಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಕಾನಿಪ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಜು.26ರಂದು ಬೆಳಿಗ್ಗೆ 9 ಗಂಟೆಗೆ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತಗಿರಿಯಲ್ಲಿರುವ ಅರಿಹಂತ ಚಾರಿಟೇಬಲ್ ಟ್ರಸ್ಟ್ನ ಕಾಲೇಜು ಆವರಣದಲ್ಲಿ ಸಮಾರಂಭ ಹಮ್ಮಿಕೊಳ್ಳಲು, ಪಿಯುಸಿ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ಮೌಲ್ಯ, ಪತ್ರಕರ್ತರ ಕರ್ತವ್ಯ ಸೇರಿ ಹಲವು ವಿಷಯಗಳನ್ನು ತಿಳಿಸಿಕೊಡಲು ವಿಶೇಷ ಉಪನ್ಯಾಸ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ. ಬಿ. ವಡವಡಗಿ ಮಾತನಾಡಿ, ಕೆಯುಡಬ್ಲುಜೆ ವಿಜಯಪುರ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಸವನ ಬಾಗೇವಾಡಿಯ ಹಿರಿಯ ಪತ್ರಕರ್ತ ಪ್ರಕಾಶ ಬೆಣ್ಣೂರ ಅವರನ್ನು ಸನ್ಮಾನಿಸಲು ತೀರ್ಮಾನಿಸಿರುವ ಹಾಗೂ ಸರ್ವ ಸದಸ್ಯರು ಸ್ವ ಇಚ್ಚೆಯಿಂದ ಸಮಾರಂಭದ ಜವಾಬ್ಧಾರಿ ವಹಿಸಿಕೊಂಡು ಯಾರಿಂದಲೂ ಚಂದಾ ಎತ್ತದೆ ಸಮಾರಂಭವನ್ನು ಮಾದರಿಯಾಗಿಸಲು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.

ಸಂಘದ ತಾಲೂಕು ಉಪಾಧ್ಯಕ್ಷ ಸಿದ್ದು ಚಲವಾದಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನವರ್, ಸಂಘದ ಮಾಜಿ ಅಧ್ಯಕ್ಷರಾದ ಎಚ್.ಆರ್.ಬಾಗವಾನ, ಅಮೀನಸಾಬ ಮುಲ್ಲಾ, ಸದಸ್ಯರಾದ ನೂರೇನಬಿ ನದಾಫ, ಬಂದೇನವಾಜ್ ಕುಮಸಿ, ಬಸವರಾಜ ಕುಂಬಾರ, ಸಾಗರ ಉಕ್ಕಲಿ, ಪುಂಡಲೀಕ ಮುರಾಳ, ಮಕ್ಬುಲ್ ಬನ್ನೆಟ್ಟಿ, ಹಣಮಂತ ಬೀರಗೊಂಡ(ಢವಳಗಿ), ಮುತ್ತು ಬೀರಗೊಂಡ (ಢವಳಗಿ), ಗುರುರಾಜ ಪತ್ತಾರ(ಬಡಿಗೇರ), ಕೃಷ್ಣಾ ಕುಂಬಾರ, ಸೂರಜ್ ರಿಸಾಲ್ದಾರ್, ಈಶ್ವರ ಈಳಗೇರ(ರೂಢಗಿ), ನಾಗೇಂದ್ರ ಶಿವಸಿಂಪಿ ಇದ್ದರು.

ಆಯ್ಕೆಯಾದ ಪತ್ರಕರ್ತರು:
ಮುದ್ದೇಬಿಹಾಳ ತಾಲೂಕು ಮಟ್ಟದ ಉತ್ತಮ ಪತ್ರಕರ್ತ ವಾರ್ಷಿಕ ಪ್ರಶಸ್ತಿಗೆ ಯುವ ಪತ್ರಕರ್ತರಾದ ಹಣಮಂತ ಬೀರಗೊಂಡ (ಢವಳಗಿ), ರಿಯಾಜ್ ಮುಲ್ಲಾ, ಮುತ್ತು ಟಕ್ಕಳಕಿ, ಈಶ್ವರ ಈಳಗೇರ (ರೂಢಗಿ) ಮತ್ತು ಕೃಷ್ಣಾ ಕುಂಬಾರ ಹಾಗೂ ಸಂಘದ ಹಿರಿಯ ಸದಸ್ಯ ನೂರೇನಬಿ ನದಾಫ ಅವರನ್ನು ಚೀಟಿ ಎತ್ತುವ ಮೂಲಕ ಸಂಘದ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Latest News

JavaScript isn’t montys millions slot free spins readily available

ArticlesTotally free Revolves | montys millions slot free spinsTrendy Fruits Slot

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಮುದ್ದೇಬಿಹಾಳ : ಕೆಲವು ಸ್ವಾಮೀಜಿಗಳಿರುತ್ತಾರೆ.ಜನರಿಗೆ ತಾವು ಯೂಟ್ಯೂಬ್ , ಸೋಷಿಯಲ್ ಮೀಡಿಯಾದಲ್ಲಿ ಪುಕ್ಕಟೆ ಉಪದೇಶ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಸಂಜಯ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರಪ್ರದೇಶದಿAದ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ ಬಡವನ ಸ್ನೇಹ ಮಾಡಿದರೆ ಆತ ಬದುಕಿನ ಅನುಭವದ ಪಾಠ ಹೇಳುತ್ತಾನೆ ಎಂದು ಹಿರಿಯ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು. ಪಟ್ಟಣದ ಗಣೇಶ ನಗರದಲ್ಲಿ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಅವರ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದಾಶಿವ ಮಠ ಹಾಗೂ ಮೊಹ್ಮದ ರಫೀಕ ಶಿರೋಳ ಅವರ ತಂದೆಯವರು ನನಗೆ ಆಪ್ತರು.ಅವರ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ತಾಂಡಾದ ಡಾ.ಮೋತಿಲಾಲ ರೂ.ಚವ್ಹಾಣ ಅವರನ್ನು ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಡಾ. ಎ.ಆರ್. ಗೋವಿಂದಸ್ವಾಮಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ತೆರವಾಗಿದ್ದ ಸ್ಥಾನಕ್ಕೆ ಡಾ. ಮೋತಿಲಾಲ ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಡಾ. ಮೋತಿಲಾಲ ರೂ. ಚವ್ಹಾಣ